ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ (Kavya Maran) ಅವರು ಐಪಿಎಲ್ 2024 (IPL 2024) ಪಂದ್ಯದ ವೇಳೆ ತಮ್ಮ ತಂಡದ ಆಟಗಾರರು ತಪ್ಪು ಮಾಡಿದಾಗ ಮಾಡುವ ವಿಭಿನ್ನ ಹಾವಭಾವಗಳು ಹೆಚ್ಚು ವೈರಲ್ ಆಗುತ್ತವೆ. ಅವುಗಳಿಂದ ಭಿನ್ನವಾದ ಮೀಮ್ಸ್ಗಳನ್ನು ರಚಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಾರೆ. ಅಂತೆಯೇ 31 ವರ್ಷದ ಉದ್ಯಮಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2024 ರ 46 ನೇ ಪಂದ್ಯದಲ್ಲಿ ಮಗು ಅಳುವಂತೆ ಮುಖ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ಅವರ ರನ್ ಔಟ್ ಚಾನ್ಸ್ ಎಸ್ಆರ್ಎಚ್ ಕಳೆದುಕೊಂಡಾಗ ಕಾವ್ಯಾ ಮತ್ತೊಮ್ಮೆ ಗಮನ ಸೆಳೆದರು.
— Cricket Videos (@cricketvid123) April 28, 2024
19ನೇ ಓವರ್ನ ನಾಲ್ಕನೇ ಎಸೆತದಲ್ಲಿ ಇದು ನಡೆದಿದೆ. ಗಾಯಕ್ವಾಡ್ ಕಟ್ ಶಾಟ್ ಆಡಿದರು, ಅಲ್ಲಿ ಪ್ಯಾಟ್ ಕಮಿನ್ಸ್ ಚೆಂಡನ್ನು ಫೀಲ್ಡ್ ಮಾಡಿ ಬೌಲರ್ ಇರುವ ತುದಿಗೆ ಎಸೆದರು. ಆ ಥ್ರೋ ಸರಿಯಾಗಿ ವಿಕೆಟ್ಗೆ ಬಡಿಯಲಿಲ್ಲ ಮತ್ತು ಗಾಯಕ್ವಾಡ್ ತನ್ನ ಸಿಂಗಲ್ ಅನ್ನು ಪೂರ್ಣಗೊಳಿಸಿದರು ಹಾಗೂ ಅವರ ವಿಕೆಟ್ ಉಳಿಯಿತು.
ನಂತರ ಚೆಂಡು ಲೆಗ್ ಸೈಡ್ ಕಡೆಗೆ ಹೋಯಿತು ಮತ್ತು ಸ್ಟ್ಯಾಂಡ್ ನಿಂದ ಪಂದ್ಯ ವೀಕ್ಷಿಸುತ್ತಿದ್ದ ಕಾವ್ಯಾ ಮಾರನ್ ಈ ವೇಳೆ ಅಳುವಂತೆ ಮುಖ ಮಾಡಿದರು. ಈ ರನ್ ಔಟ್ ಮಿಸ್ನಿಂದಾಗಿ ಚೆನ್ನೈ ಇನ್ನೊಂದು ರನ್ ಹೆಚ್ಚುವರಿಯಾಗಿ ಓಡಿತು.
ಗಾಯಕ್ವಾಡ್ ಅಂತಿಮವಾಗಿ ಅಂತಿಮ ಓವರ್ನಲ್ಲಿ ಔಟಾಗಿ ಕೇವಲ ಎರಡು ರನ್ಗಳ ಕೊರತೆಯಿಂದ ಶತಕ ಕಳೆದುಕೊಂಡರು. ಅವರ ರನ್ಗಳಿಂದ ಸಿಎಸ್ಕೆ 212 ರನ್ಗಳ ದೊಡ್ಡ ಸ್ಕೋರ್ ಬಾರಿಸಿತು. ಗಾಯಕ್ವಾಡ್ ಅವರೊಂದಿಗೆ ಡ್ಯಾರಿಲ್ ಮಿಚೆಲ್ ಮತ್ತು ಶಿವಂ ದುಬೆ ಕೂಡ ಕ್ರಮವಾಗಿ 52 ಮತ್ತು 39 ರನ್ ಗಳಿಸಿದರು. ಆರ್ಸಿಬಿ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಸೋತ ಎಸ್ಎಚ್ಆರ್ ಮತ್ತೊಂದು ಪರಾಜಯಕ್ಕೆ ಒಳಗಾಯಿತು.