ಸಿಎನ್‌ಜಿ (CNG) ಮತ್ತು ಪೆಟ್ರೋಲ್ (petrol) ಬದಲಾವಣೆ ನಡೆಸಬಹುದಾದ ಆಯ್ಕೆಯನ್ನು ನೀಡುವ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ (Bajaj Freedom 125 CNG Bike) ಈಗಾಗಲೇ ಬಿಡುಗಡೆಯಾಗಿದೆ. ಅತ್ಯಾಧುನಿಕ ವಿನ್ಯಾಸ, ನವೀನ ತಂತ್ರಜ್ಞಾನದೊಂದಿಗೆ ಟೆಕ್ ಪ್ಯಾಕಿಂಗ್ ಮತ್ತು ಆರಾಮದಾಯಕ ಸವಾರಿಗಾಗಿ ವಿಸ್ತೃತ ಆಸನವನ್ನು ಇದು ಒಳಗೊಂಡಿದ್ದು, ಸವಾರರ ಗಮನ ಸೆಳೆದಿದೆ. 125 ಸಿಎನ್‌ಜಿ ಮೋಟಾರ್ ಸೈಕಲ್ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಆಗಿದೆ. ಈಗಾಗಲೇ ಇದಕ್ಕೆ ಬುಕ್ಕಿಂಗ್ ಪ್ರಾರಂಭವಾಗಿದ್ದು, ಬಜಾಜ್‌ನ ಹೊಸ ಸಿಎನ್‌ಜಿ ಬೈಕ್ ಪಡೆಯಲು ಕಾಯುವ ಅವಧಿಯನ್ನು ಈಗ ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.
ಬೆಲೆ ಎಷ್ಟು?
ಬಜಾಜ್ ಫ್ರೀಡಂ 125 ಮೂರು ಆವೃತ್ತಿಗಳಲ್ಲಿ ಬಂದಿದೆ. ಫ್ರೀಡಮ್ 125 ಎನ್ ಜಿ04 ಡಿಸ್ಕ್ ಎಲ್ ಇಡಿ, ಫ್ರೀಡಮ್ 125 ಎನ್ ಜಿ04 ಡ್ರಮ್ ಎಲ್ ಇಡಿ ಮತ್ತು ಫ್ರೀಡಮ್ 125 ಎನ್ ಜಿ04 ಡ್ರಮ್.
ಬಜಾಜ್ ದ್ವಿ-ಇಂಧನ ಬೈಕ್‌ನ ಆರಂಭಿಕ ಬೆಲೆ 95,000 ರೂ.ನಿಂದ ಪರಿಚಯಿಸಲಾಗಿದೆ. ಹ್ಯಾಲೊಜೆನ್ ದೀಪಗಳನ್ನು ಒಳಗೊಂಡಿರುವ ಎನ್ ಜಿ 04 ಡ್ರಮ್ ರೂಪಾಂತರ, ಫ್ರೀಡಂ 125 ಎನ್ ಜಿ 04 ಡ್ರಮ್ ಎಲ್ ಇಡಿ ರೂಪಾಂತರ 1.05 ಮತ್ತು 1.10 ಲಕ್ಷ ರೂ. ಆರಂಭಿಕ ಬೆಲೆಯನ್ನು ಹೊಂದಿದೆ.
ಕಾಯುವ ಅವಧಿ ಎಷ್ಟು?
ಬಜಾಜ್ ಸಿಎನ್‌ಜಿ ಬೈಕ್ ಬುಕ್ಕಿಂಗ್ ಮುಂಬಯಿ, ಪುಣೆ ಮತ್ತು ಗುಜರಾತ್‌ನ ಆಯ್ದ ನಗರಗಳಲ್ಲಿ ಪ್ರಾರಂಭಿಸಲಾಗಿದೆ. 1,000 ರೂ. ಟೋಕನ್ ಮೊತ್ತ ನೀಡಿ ಬೈಕ್ ಬುಕ್ಕಿಂಗ್ ನಡೆಸಬಹುದು. ಬೇಡಿಕೆ ಹೆಚ್ಚಾದರೆ ಪ್ರತಿ ಪ್ರದೇಶದ ಕಾಯುವ ಅವಧಿಯು ಬದಲಾಗುತ್ತದೆ ಎನ್ನಲಾಗಿದೆ.
ಆಟೋ ಎಕ್ಸ್ ನೀಡಿರುವ ಮಾಹಿತಿ ಪ್ರಕಾರ ಮುಂಬಯಿನಲ್ಲಿ ಬಜಾಜ್ ಫ್ರೀಡಂ ಸಿಎನ್‌ಜಿ ಮೋಟಾರ್ ಸೈಕಲ್ 20- 30 ದಿನಗಳ ಕಾಯುವ ಅವಧಿಯನ್ನು ಹೊಂದಿತ್ತು. ಪುಣೆಯಲ್ಲಿ ಕಾಯುವ ಅವಧಿಯು ಸುಮಾರು 30- 45 ದಿನಗಳಾಗಿದ್ದು, ಗುಜರಾತ್‌ನಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ನ ಕಾಯುವ ಅವಧಿಯು ಕನಿಷ್ಠ 45 ದಿನಗಳಿಗೆ ವಿಸ್ತರಿಸಲಾಗಿದೆ. ಒಟ್ಟಿನಲ್ಲಿ ಗರಿಷ್ಠ ಮೂರು ತಿಂಗಳ ಕಾಯುವ ಅವಧಿಯನ್ನು ನೀಡಲಾಗಿದೆ.
ಇದನ್ನೂ ಓದಿ: Bajaj CNG Bike: ಬಜಾಜ್‌ನ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬೆಲೆ ಕಡಿತ ಸಾಧ್ಯತೆ; ನಿತೀನ್ ಗಡ್ಕರಿ ಸೂಚನೆ
ವಿಶೇಷತೆಗಳು ಏನೇನು?
ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ 125 ಸಿಸಿ ಸಿಂಗಲ್- ಸಿಲಿಂಡರ್ ಏರ್ ಕೂಲ್ಡ್ ಎಂಜಿನ್, 2- ಲೀಟರ್ ಟ್ಯಾಂಕ್ ಮತ್ತು 2- ಕೆಜಿ ಸಿಎನ್‌ಜಿ ಸಿಲಿಂಡರ್‌ನೊಂದಿಗೆ ವಿಶ್ವದ ಮೊದಲ ಸಿಎನ್ ಜಿ ಬೈಕ್ ಇದಾಗಿದೆ.
9.4ಬಿಹೆಚ್ ಪಿ ಪವರ್ ಮತ್ತು 9.7ಎನ್ ಪಿ ಗರಿಷ್ಠ ಟಾರ್ಕ್ ಅನ್ನು ಒದಗಿಸುತ್ತದೆ. ಎಂಜಿನ್ ಮತ್ತು ಸಿಎನ್‌ಜಿ ಸಾಮರ್ಥ್ಯವನ್ನು ಇದು ಹೊಂದಿದೆ. ಫ್ರೀಡಂ 125 ಸಿಎನ್‌ಜಿ ಬೈಕ್ 300 ಕಿ.ಮೀ. ಹಾಗೂ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 65 ಕಿ.ಮೀ. ಮೈಲೇಜ್ ನೀಡುತ್ತದೆ.