Site icon Vistara News

BGauss RUV350 : ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಆರ್‌ಯುವಿ350 ಬಿಡುಗಡೆ ಮಾಡಿದ ಬಿಗಾಸ್

BGauss RUV350

ಮುಂಬೈ : ಆರ್ ಆರ್ ಗ್ಲೋಬಲ್‌ನ ಬಿಗಾಸ್ ತನ್ನ ಹೊಚ್ಚ ಹೊಸ ಮಾಡೆಲ್ ಆರ್‌ಯುವಿ350 (BGauss RUV350 ) ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ ಮಾಡಿದೆ. ನಗರ ಕೇಂದ್ರೀತ ಸ್ಕೂಟರ್​ ಆರ್‌ಯುವಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ್ದು, ಅತ್ಯುತ್ತಮ ರೈಡಿಂಗ್ ಅನುಭವವನ್ನು ನೀಡುತ್ತಿದೆ. ಅದಕ್ಕಾಗಿ ವಿಭಿನ್ನ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

ನಗರ ಪ್ರಯಾಣಿಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿರುವ ಬಿಗಾಸ್ ಆರ್‌ಯುವಿ350 ಉನ್ನತ- ಕಾರ್ಯಕ್ಷಮತೆ ಒದಗಿಸುವ, ದಕ್ಷತೆ ಹಾಗೂ ವಿಶ್ವಾಸಾರ್ಹತೆಗೆ ಹೆಚ್ಚಿನ ಒತ್ತು ನೀಡುವ ಇನ್ ವೀಲ್ ಹೈಪರ್ ಡ್ರೈವ್ ಮೋಟಾರ್‌ ಹೊಂದಿದೆ. ಸಾಂಪ್ರದಾಯಿಕ ಬೆಲ್ಟ್- ಚಾಲಿತ ವ್ಯವಸ್ಥೆಗಳಿಗಿಂತ ಭಿನ್ನವಾಗಿರುವ ಆರ್‌ಯುವಿ350ಯ ಡೈರೆಕ್ಟ್ ಡ್ರೈವ್ ಮೋಟಾರ್ ವ್ಯವಸ್ಥೆಯು ಬ್ಯಾಟರಿ ಚಾರ್ಜ್​ (ವಿದ್ಯುತ್) ನಷ್ಟ ಆಗುವುದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಉತ್ತಮ ದಕ್ಷತೆ ಮತ್ತು ಹೆಚ್ಚುನ ಕಾರ್ಯಕ್ಷಮತೆಗೆ ನೀಡುತ್ತದೆ. ಈ ವಿನ್ಯಾಸವು ಶಕ್ತಿಯುತ ಮತ್ತು ಮೃದುವಾದ ಆಕ್ಸಲರೇಷನ್ ಆಗುವಂತೆ ನೋಡಿಕೊಳ್ಳುತ್ತದೆ.

ಉನ್ನತ ಕಾರ್ಯಕ್ಷಮತೆ ಮತ್ತು ವೈವಿಧ್ಯಮಯತೆ

ಆರ್‌ಯುವಿ350ನ ಅಸಾಧಾರಣ ಫೀಚರ್ ಎಂದರೆ ಅದರ ಗ್ರೇಡೇಬಿಲಿಟಿ. ಇದು ಕಡಿದಾದ ಇಳಿಜಾರು ಹಾದಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಈ ದ್ವಿಚಕ್ರ ವಾಹನವು ವಿವಿಧ ರೀತಿಯ ಭೂಪ್ರದೇಶಗಳಿಗೂ ಉತ್ತಮ ಆಯ್ಕೆಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಅಥವಾ ಸಮತಟ್ಟಾದ ನಗರ ರಸ್ತೆಗಳಲ್ಲಿ ಹೀಗೆ ಎಲ್ಲೇ ಪ್ರಯಾಣಿಸುತ್ತಿರಲಿ ಆರ್‌ಯುವಿ350 ಸ್ಥಿರ ಮತ್ತು ವಿಶ್ವಾಸಾರ್ಹ ರೈಡಿಂಗ್ ಸೌಕರ್ಯವನ್ನು ಒದಗಿಸುತ್ತದೆ.

ಬಾಳಿಕೆ ಮತ್ತು ಸುರಕ್ಷತೆ

ಬಾಳಿಕೆ ಮತ್ತು ಸುರಕ್ಷತೆ ಎಂಬುದು ಆರ್‌ಯುವಿ350 ವಿನ್ಯಾಸದ ಅವಿಭಾಜ್ಯ ಅಂಗ. ವಾಹನವು ದೃಢವಾದ, ಗಟ್ಟಿಯಾದ ಲೋಹದ ಬಾಡಿ ಹೊಂದಿದ್ದು, ಆ ಮೂಲಕ ವಾಹನದ ಬಾಳಿಕೆ ಹೆಚ್ಚಿಸಲಾಗಿದೆ. ಜೊತೆಗೆ ಸವಾರನಿಗೆ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. ಈ ಗಟ್ಟಿಮುಟ್ಟಾದ ವಾಹನವು 16-ಇಂಚಿನ ಚಕ್ರಗಳನ್ನು ಹೊಂದಿದ್ದು, ಆ ಚಕ್ರಗಳು ಹೆಚ್ಚಿನ ಸ್ಥಿರತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಚಕ್ರದ ದೊಡ್ಡ ಗಾತ್ರವು ಸವಾರಿಯ ಗುಣಮಟ್ಟವನ್ನು ಸುಧಾರಿಸುತ್ತದೆ, ಗುಂಡಿಗಳು ಮತ್ತು ಉಬ್ಬು ತಗ್ಗುಗಳನ್ನು ಹೊಂದಿರುವ ರಸ್ತೆಗಳ ಮೇಲ್ಮೈಗಳ ಮೇಲೆ ಸುಗಮವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ರೈಡರ್ ನ ಆರಾಮದಾಯಕತೆ ಮತ್ತು ಅನುಕೂಲತೆ

ಆರ್‌ಯುವಿ350 ಅನ್ನು ರೈಡರ್ ಗೆ ಆರಾಮದಾಯಕತೆ ಮತ್ತು ಅನುಕೂಲತೆಯನ್ನು ಒದಗಿಸುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆಯು ಸುದೀರ್ಘ ಪ್ರಯಾಣದ ಸಮಯದಲ್ಲಿಯೂ ಉತ್ತಮ ಸೌಕರ್ಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಸೀಟು ವಿಶಾಲವಾಗಿದ್ದು, ಈ ವಿಶಾಲವಾದ ಸೀಟಿನ ಕೆಳಗೆ ಉತ್ತಮ ಸ್ಟೋರೇಜ್ ವ್ಯವಸ್ಥೆ ಕೂಡ ಇದೆ. ಈ ಮೂಲಕ ರೈಡರ್ ಗಳು ತಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಆಘಾತ, ವೈಬ್ರೇಷನ್ ಗಳು ಅಥವಾ ಕಂಪನಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಉಬ್ಬು ತಗ್ಗು ರಸ್ತೆಗಳಲ್ಲಿ ಸುಗಮ ಸವಾರಿ ಮಾಡುವ ಸೌಕರ್ಯ ಒದಗಿಸುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಆಧುನಿಕ ಫೀಚರ್ ಗಳು ಮತ್ತು ಕನೆಕ್ಟಿವಿಟಿ ವ್ಯವಸ್ಥೆ

ಆಧುನಿಕ ಫೀಚರ್ ಗಳ ಶ್ರೇಣಿಯನ್ನು ಹೊಂದಿರುವ ಆರ್‌ಯುವಿ350 ಸವಾರರ ಒಟ್ಟಾರೆ ಅನುಭವ ಹೆಚ್ಚಿಸುವ ಗುರಿ ಹೊಂದಿದೆ. ಡಿಜಿಟಲ್ ಡಿಸ್ಪ್ಲೇ ಕಾಲ್ ನೋಟಿಫಿಕೇಷನ್ ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್, ವಾಹನ ಇಮ್ಮೊಬಿಲೈಸೇಷನ್, ಡ್ಯುಯಲ್ ಥೀಮ್, ಹಗಲು ರಾತ್ರಿ ಮೋಡ್, ಡಾಕ್ಯುಮೆಂಟ್ ಸ್ಟೋರೇಜ್, ವೇಗ, ಬ್ಯಾಟರಿ ಸ್ಥಿತಿ ಮತ್ತು ರೇಂಜ್ ನಂತಹ ನೈಜ-ಸಮಯದ ಮಾಹಿತಿ ಒದಗಿಸುತ್ತದೆ. ಈ ಮೂಲಕ ಸವಾರರು ಎಲ್ಲಾ ಅಗತ್ಯ ಮಾಹಿತಿಯು ಸುಲಭವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ, ವಾಹನವು ಬ್ಲೂಟೂತ್ ಮತ್ತು ಟೆಲಿಮ್ಯಾಟಿಕ್ಸ್‌ ನಂತಹ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್ ಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಸವಾರರು ಸಂಪರ್ಕದಲ್ಲಿರಲು ಮತ್ತು ಸುಲಭವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ಪರಿಸರ ಸ್ನೇಹಿ ಮತ್ತು ಆರ್ಥಿಕ ಸ್ನೇಹಿ

ಆರ್‌ಯುವಿ350 ಕೇವಲ ಹೆಚ್ಚಿನ ಕಾರ್ಯಕ್ಷಮತೆ ಒದಗಿಸುವ ವಾಹನ ಮಾತ್ರವೇ ಅಲ್ಲ, ಜೊತೆಗೆ ಪರಿಸರ ಸ್ನೇಹಿ ಆಯ್ಕೆಯೂ ಆಗಿದೆ. ಆ ಮೂಲಕ ಈ ವಾಹನವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡುತ್ತದೆ. ವಾಹನದ ಸಮರ್ಥ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ಅಗತ್ಯತೆಗಳು ಇದನ್ನು ನಗರ ಪ್ರಯಾಣಿಕರಿಗೆ ಆರ್ಥಿಕವಾಗಿ ನೆರವಾಗುವ ಆಯ್ಕೆಯನ್ನಾಗಿಯೂ ಮಾಡುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದು

ಸ್ಕೂಟರ್​ ಬಿಡುಗಡೆ ಕುರಿತು ಬಿಗಾಸ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೇಮಂತ್ ಕಾಬ್ರಾ ಮಾತನಾಡಿ “ನಗರದ ಸಂಚಾರ ವ್ಯವಸ್ಥೆಗೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಕ್ರಾಂತಿಕಾರಿ ಬಿಗಾಸ್ಆರ್‌ಯುವಿ350 ಅನ್ನು ಪರಿಚಯಿಸಲು ಸಂತೋಷ ಪಡುತ್ತೇವೆ. ಇದು ನಾವೀನ್ಯತೆ ಕಡೆಗೆ ನಾವು ಹೊಂದಿರುವ ನಮ್ಮ ಬದ್ಧತೆಗೆ ಸಾಕ್ಷಿ. ಆರ್‌ಯುವಿ350ನ ಸುಧಾರಿತ ಫೀಚರ್ ಗಳು, ದೃಢ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ. ಆರ್‌ಯುವಿ350 ನಮ್ಮ ತಾಂತ್ರಿಕ ಹೆಚ್ಚುಗಾರಿಕೆಗೆ ಉದಾಹರಣೆ. ಇದು ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಗುಣಮಟ್ಟದ ಉತ್ಪನ್ನಗಳನ್ನು ದೇಶದಲ್ಲಿಯೇ ಉತ್ಪಾದಿಸುವ ನಮ್ಮ ಬದ್ಧತೆಯನ್ನು ಈ ವಾಹನ ತೋರಿಸುತ್ತದೆ. ಈ ವಾಹನವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.

Exit mobile version