ಮುಂಬೈ: ಮದುವೆ (Wedding) ಆರತಕ್ಷತೆಯು (Reception) ಮದುವೆಯ ಭಾಗವಲ್ಲ. ಈ ಕುರಿತು ಕೌಟುಂಬಿಕ ನ್ಯಾಯಾಲಯದಲ್ಲಿ (Familya court) ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂಬುದಾಗಿ 2015ರಲ್ಲಿ ನಡೆದ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ವಿಚ್ಛೇದನ ಅರ್ಜಿ ವಿಚಾರಣೆ (Divorce case) ನಡೆಸಿದ ಬಾಂಬೆ ಹೈಕೋರ್ಟ್ (Bombay high court) ತಿಳಿಸಿದೆ.
2015ರ ಜೂನ್ ನಲ್ಲಿ ಜೋಧ್‌ಪುರದಲ್ಲಿ (Jodhpur) ವಿವಾಹವಾದ ಜೋಡಿಯ ಅರತಕ್ಷತೆ ಕಾರ್ಯಕ್ರಮ ನಾಲ್ಕು ದಿನಗಳ ಬಳಿಕ ಮುಂಬೈಯಲ್ಲಿ (Mumbai) ನಡೆದಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮುಂಬೈಯಲ್ಲಿ ನಡೆದ ವಿವಾಹದ ಆರತಕ್ಷತೆಯ ಬಳಿಕ ಉಂಟಾದ ಪತಿ-ಪತ್ನಿಯರ ನಡುವಿನ ವೈವಾಹಿಕ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ ವಿರುದ್ಧ ಮಹಿಳೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಮಹಿಳೆಯ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಇದನ್ನೂ ಓದಿ: Divorce Case : ಶುಭ ಸುದ್ದಿ! ಕಾರಣ ಸರಿಯಾಗಿದ್ದರೆ ಕೂಲಿಂಗ್ ಪೀರಿಯೆಡ್ ಇಲ್ಲದೆಯೇ ತಕ್ಷಣ ಡೈವೋರ್ಸ್ ಸಿಗುತ್ತೆ!
ಮದುವೆಯ ಆರತಕ್ಷತೆಯು ಮದುವೆಯ ಆಚರಣೆಯ ಭಾಗವಾಗಿರಲು ಸಾಧ್ಯವಿಲ್ಲ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು 38 ವರ್ಷದ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಿಳೆಯ ವಾದವನ್ನು ಆಲಿಸಿದ ನ್ಯಾಯಮೂರ್ತಿ ರಾಜೇಶ್ ಪಾಟೀಲ್ ತಮ್ಮ ತೀರ್ಪು ನೀಡಿದ್ದಾರೆ.
ಮದುವೆ ಬಳಿಕ ಏನಾಗಿತ್ತು ?
2015ರ ಜೂನ್‌ನಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದ ದಂಪತಿ ಮದುವೆಯಾದ ನಾಲ್ಕು ದಿನಗಳ ಬಳಿಕ ಮುಂಬೈಯಲ್ಲಿ ಮದುವೆಯ ಆರತಕ್ಷತೆ ನಡೆಸಿದ್ದರು. ಆರತಕ್ಷತೆಯ ಬಳಿಕ ಪತ್ನಿ ಸುಮಾರು 10 ದಿನಗಳ ಕಾಲ ಪತಿಯ ಮನೆಯಲ್ಲಿ ಇದ್ದರು. ಬಳಿಕ ಯುನೈಟೆಡ್ ಸ್ಟೇಟ್ಸ್‌ಗೆ ಹೋಗಿ ವಾಸವಾಗಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ಅವರು 2019ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ವಿಚ್ಛೇದನಕ್ಕಾಗಿ ಅರ್ಜಿ
ಹಿಂಸೆಯ ಆಧಾರದ ಮೇಲೆ 2020ರಲ್ಲಿ ಪತಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದರು. ನಾಲ್ಕು ತಿಂಗಳ ಅನಂತರ ಪತ್ನಿ ಯುಎಸ್‌ನಲ್ಲಿ ಪ್ರತ್ಯೇಕ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್ ನಲ್ಲಿ ಪತ್ನಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ವಿಚ್ಛೇದಿತ ಪತಿಯ ವಿಚ್ಛೇದನ ಅರ್ಜಿಯ ವಿಚಾರಣೆಯನ್ನು ಪ್ರಶ್ನಿಸಿ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 19ರ ಅಡಿಯಲ್ಲಿ ಮುಂಬೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ದಂಪತಿ ಬಹುಕಾಲವನ್ನು ಒಟ್ಟಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಳೆದಿದ್ದಾರೆ. ಮದುವೆಯಾದ ಬಳಿಕ ಕೇವಲ 10 ದಿನಗಳಿಗಿಂತಲೂ ಕಡಿಮೆ ಕಾಲ ಅವರು ಮುಂಬೈಯಲ್ಲಿ ಪತಿಯ ಮನೆಯಲ್ಲಿ ಇದ್ದರು. ಹೀಗಾಗಿ ಮುಂಬೈಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ಪರಿಗಣಿಸಲು ಹಿಂದೂ ವಿವಾಹ ಕಾಯ್ದೆಯ 19ರ ಉಪ-ವಿಭಾಗ (iii) ಅಡಿಯಲ್ಲಿ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಎಂದು ನ್ಯಾಯಮೂರ್ತಿ ಪಾಟೀಲ್ ಹೇಳಿದರು.
ಮಹಿಳೆಯ ಗಂಡನ ಮನೆ ಮುಂಬಯಿ ನಲ್ಲಿರುವುದರಿಂದ ಮುಂಬೈ ನಗರವನ್ನು ಅವರು ಒಟ್ಟಿಗೆ ವಾಸಿಸುವ ಸ್ಥಳವೆಂದು ಪರಿಗಣಿಸಬೇಕು ಎಂಬ ಪತಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.