Site icon Vistara News

Food Poisoning : ಹೃದಯ ವಿದ್ರಾವಕ ಘಟನೆ; ವಿಷ ಆಹಾರ ಸೇವಿಸಿ ಇಬ್ಬರು ಮಕ್ಕಳ ಸಾವು, ಮೂವರು ಅಸ್ವಸ್ಥ

Food Poisoning

ರಾಯಚೂರು: ವಿಷ ಆಹಾರ ಸೇವನೆಯಿಂದಾಗಿ (Food Poisoning) ಅಸ್ವಸ್ಥಗೊಂಡ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಮೂವರು ಸಂಪೂರ್ಣ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅಸ್ವಸ್ಥಗೊಂಡಿರುವ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಆರತಿ (7).ಪ್ರಿಯಾಂಕ್ (9) ಮೃತಪಟ್ಟ ಮಕ್ಕಳು. ಹುಸೇನಮ್ಮ (35).ಮಾರುತಿ (40) ಲಕ್ಷ್ಮಣ್ (60) ಅಸ್ವಸ್ಥರಾಗಿದ್ದಾರೆ. ಕೂಲಿ ಕೆಲಸಕ್ಕೆಂದು ವಡ್ಲೂರು ಗ್ರಾಮಕ್ಕೆ ಬಂದಿದ್ದ ಕುಟುಂಬವು ವಿಷಾಹಾರ ಸೇವನೆಯಿಂದ ಸಂಕಷ್ಟಕ್ಕೆ ಬಿದ್ದಿದೆ.
ಅವರೆಲ್ಲರೂ ಮೂಲತ ಲಿಂಗಸಗೂರು ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿಗಳು. ಇಟ್ಟಿಗೆ ತಯಾರಿಕೆಯಲ್ಲಿ ಕೂಲಿ ಕಾರ್ಮಿಕರಾಗಿ ವಡ್ಲೂರಿಗೆ ಬಂದಿದ್ದರು. ರಜೆ ನಿಮಿತ್ತ ಪೋಷಕರ ಬಳಿ ಇಬ್ಬರೂ ಮಕ್ಕಳು ಬಂದಿದ್ದರು.

ಅವರೆಲ್ಲರೂ ರಾತ್ರಿ ಊಟಕ್ಕೆ ಚಪಾತಿ. ಹೆಸರಕಾಳು. ಅನ್ನ.ಸಾಂಬಾರು ಸೇವಿಸಿದ್ದರು. ಆ ಬಳಿಕ ಅವರೆಲ್ಲರ ಆರೋಗ್ಯದಲ್ಲಿ ಏರುಪೇರಾಗಿದೆ. ಮಕ್ಕಳು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಯಮವೇಗದಲ್ಲಿ ಬಂದ ಇನೋವಾ ಕಾರು ಪಲ್ಟಿ, ಯುವತಿ ಸಾವು

ಉಡುಪಿ: ಅತಿ ವೇಗದಲ್ಲಿ ಸಾಗುತ್ತಿದ್ದ ಇನೋವಾ ಕಾರು ಪಲ್ಟಿಯಾಗಿ ಯುವತಿಯೊಬ್ಬಳು ಮೃತಪಟ್ಟ (Car Accident) ಘಟನೆ ನಡೆದಿದೆ. ಕುಂದಾಪುರ ಸಮೀಪದ ಹುಣ್ಸೆಮಕ್ಕಿ ಬಳಿಯ ಗುಡ್ಡೆಯಂಗಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚೆನ್ನಪಟ್ಟಣ ಮೂಲದ ಯುವತಿ ಕೀರ್ತಿ ಎಂಬುವರು ಅಪಘಾತದಲ್ಲಿ ಮೃತಪಟ್ಟವರು.

ಚೆನ್ನಪಟ್ಟಣ ಮೂಲದ ಅವರು ಧರ್ಮಸ್ಥಳಕ್ಕೆ ಬಂದಿದ್ದರು. ಅಲ್ಲಿಂದ ಅವರು ಮುರುಡೇಶ್ವರಕ್ಕೆ ಹೊರಟಿದ್ದರು. ಅತಿ ವೇಗದಲ್ಲಿ ಸಾಗುತ್ತಿದ್ದ ಕಾರು ಹುಣ್ಸೆಮಕ್ಕಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ. ಬಳಿಕ ಬಳಿಕ ರಸ್ತೆ ಬದಿಯ ಮರಕ್ಕೂ ಢಿಕ್ಕಿ ಹೊಡೆದು ಇನ್ನೋವಾ ಮಾತು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ತೀವ್ರತೆಗೆ ಕಾರಿನಲ್ಲಿದ್ದ 5 ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Exit mobile version