Site icon Vistara News

IPL 2024 : ಭಾರೀ ಭದ್ರತಾ ಲೋಪ; ಎಸ್​ಆರ್​​ಎಚ್​ ವಿದೇಶಿ ಆಟಗಾರನ ಮೇಲೆ ಮುಗಿಬಿದ್ದ ಸಾರ್ವಜನಿಕರು!

IPL 2024

ಹೈದರಾಬಾದ್​: ಭಾರತದಲ್ಲಿ ಕ್ರಿಕೆಟಿಗರ ಕ್ರೇಜ್ ದೊಡ್ಡ ಮಟ್ಟಿಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ತಾರೆಗಳನ್ನು ಭೇಟಿಯಾಗಲು ಹಾಗೂ ಮಾತನಾಡಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಯಾವುದೇ ಅಪಾಯಗಳನ್ನು ತಂದೊಡ್ಡುತ್ತಾರೆ. ಇದು ಕೆಲವೊಂದು ಬಾರಿ ಅನಾಹುತಗಳಿಗೂ ಕಾರಣವಾಗುತ್ತವೆ. ಅಂತೆಯೇ ಇತ್ತೀಚೆಗೆ, ಸನ್​ರೈಸರ್ಸ್​ ಹೈದರಾಬಾದ್ ತಂಡದ ಹೆನ್ರಿಚ್​ ಕ್ಲಾಸೆನ್ ಇಂಥದ್ದೇ ಸಮಸ್ಯೆಗೆ ಒಳಗಾದರು. ಶಾಪಿಂಗ್ ಮಾಲ್​ವೊಂದರಲ್ಲಿ ಉಂಟಾದ ಭದ್ರತಾ ಲೋಪದಿಂದಾಗಿ ಅಭಿಮಾನಿಗಳ ಮಧ್ಯೆ ಸಿಕ್ಕಿಹಾಕಿಕೊಂಡು ಮಾನಸಿಕ ಹಾಗೂ ದೈಹಿಕ ಹಿಂಸೆ ಎದುರಿಸಿದರು.

ಹೆನ್ರಿಕ್ ಕ್ಲಾಸೆನ್ ಮತ್ತು ಅವರ ಎಸ್ಆರ್​ಎಚ್​​ ತಂಡದ ಸಹ ಆಟಗಾರ ಜಯದೇವ್ ಉನಾದ್ಕಟ್ ಕೂಡ ಜನ ಸಾಗರದ ನಡುವೆ ಸಿಲುಕಿ ಹಾಕಿಕೊಂಡರು. ಅವರಿಬ್ಬರು ಪ್ರಚಾರ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿದ್ದರು.

ಸಾಮಾನ್ಯವಾಗಿ, ಕ್ರಿಕೆಟಿಗರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿರುತ್ತಾರೆ. ಈ ಮೂಲಕ ಆಟಗಾರರನ್ನು ಅಭಿಮಾನಿಗಳಿಂದ ಸುರಕ್ಷಿತವಾಗಿರಿಸುತ್ತಾರೆ. ಆದಾಗ್ಯೂ, ಹೆನ್ರಿಕ್ ಕ್ಲಾಸೆನ್ ಮತ್ತು ಉನಾದ್ಕಟ್ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಎದುರಿಸಲು ಹೆಣಗಾಡಿದರು. ಅಲ್ಲದೆ ಸುತ್ತಲೂ ಯಾವುದೇ ಭದ್ರತಾ ಸಿಬ್ಬಂದಿ ಕಾಣಿಸಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ. ಎಸ್ಆರ್​ಎಚ್​​ ತಾರೆಯರು ಅಭಿಮಾನಿಗಳಿಂದ ದೂರವಿರಲು ತಮ್ಮ ಗರಿಷ್ಠ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಣಬಹುದು.

ಕೋಪಗೊಂಡಿದ್ದ ಕ್ಲಾಸೆನ್​

ಉನಾದ್ಕಟ್ ಶಾಂತವಾಗಿ ಕಾಣುತ್ತಿದ್ದರೂ, ಹೆನ್ರಿಚ್​​ ಕ್ಲಾಸೆನ್ ಖಂಡಿತವಾಗಿಯೂ ನಿರಾಶೆಗೊಂಡಿದ್ದರು. ಅವರ ಕ್ರಿಯೆಗಳು ಅವರ ಭಾವನೆಗಳನ್ನು ಸ್ಪಷ್ಟಪಡಿಸಿದವು. ದಕ್ಷಿಣ ಆಫ್ರಿಕಾದ ತಾರೆ ಕೈ ಸನ್ನೆಯಿಂದ ಅಭಿಮಾನಿಗಳನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅದರಿಂದ ಲಾಭವಾಗಿರಲಿಲ್ಲ . ಅಭಿಮಾನಿಗಳು ಕ್ಲಾಸೆನ್ ಹೆಸರನ್ನು ನಿರಂತರವಾಗಿ ಕೂಗುತ್ತಿದ್ದರು. ಕ್ರಿಕೆಟ್ ತಾರೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಅವರು ಮಾಡುತ್ತಿದ್ದರು.

ಇದನ್ನೂ ಓದಿ: Champions Trophy : ಭಾರತ ಕ್ರಿಕೆಟ್​ ತಂಡಕ್ಕೆ ಬೆದರಿಕೆ ಒಡ್ಡಿದ ಪಾಕಿಸ್ತಾನದ ಮಾಜಿ ಆಟಗಾರ

ಅಭಿಮಾನಿಗಳ ಗುಂಪಿನ ನಡುವಿನಿಂದ ಹಾದುಹೋಗುವಾಗ ಇಬ್ಬರೂ ಕ್ರಿಕೆಟಿಗರನ್ನು ನಿರಂತರವಾಗಿ ತಳ್ಳಲಾಯಿತು. ಮೈ ಮೇಲೆ ಕೈ ಹಾಕಲಾಯಿತು. ಕೊನೆಗೂ ಅವರು ಭಾರಿ ಜನಸಮೂಹದಿಂದ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು.

ಹೆನ್ರಿಚ್​ ಕ್ಲಾಸೆನ್ ಮತ್ತು ಜಯದೇವ್ ಉನಾದ್ಕಟ್ ಇಬ್ಬರೂ ಗುರುವಾರ (ಮೇ 2) ಹೈದರಾಬಾದ್​ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಸ್ಆರ್​​ಎಚ್​ ವಿರುದ್ಧ ಮುಖಾಮುಖಿಯಾದಾಗ ಆಡಿದ್ದರು. ಎಸ್ಆರ್​ಎಚ್​​ ಈ ಪಂದ್ಯವನ್ನು ಒಂದು ರನ್ನಿಂದ ಗೆದ್ದು ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿಯಲ್ಲಿ ಉಳಿಯಿತು. ಆ ಪಂದ್ಯದಲ್ಲಿ ಕ್ಲಾಸೆನ್ ಕೇವಲ 19 ಎಸೆತಗಳಲ್ಲಿ ಅಜೇಯ 42 ರನ್ ಗಳಿಸುವ ಮೂಲಕ ಎಸ್ಆರ್ಹೆಚ್ ಪರ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು. ಮತ್ತೊಂದೆಡೆ, ಉನಾದ್ಕಟ್ ಎರಡು ಓವರ್​ಗಳನ್ನು ಎಸೆದರೂ ಯಾವುದೇ ವಿಕೆಟ್ ಪಡೆದಿರಲಿಲ್ಲ.

Exit mobile version