ಮುಂಬಯಿ: ಗೌತಮ್ ಗಂಭೀರ್ (Gautam Gambhir) ಐಪಿಎಲ್ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ ನಾಯಕರಾಗಿದ್ದ ಸಮಯವನ್ನು ಇತ್ತೀಚೆಗೆ ಸ್ಮರಿಸಿಕೊಂಡಿದ್ದಾರೆ. ಈ ವೇಳೆ ಅವರು ರೋಹಿತ್ ಶರ್ಮಾ (Rohit Sharma) ತಮ್ಮ ನಿದ್ದೆಗೆಡಿಸಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ಶುಕ್ರವಾರ ಐಪಿಎಲ್17ನೇ ಆವೃತ್ತಿಯ (IPL 2024) ಮುಂಬೈ ಇಂಡಿಯನ್ಸ್ ವಿರುದ್ಧದ ಕೆಕೆಆರ್ ಪಂದ್ಯಕ್ಕೆ ಮುಂಚಿತವಾಗಿ ಮಾತನಾಡಿದ ಗಂಭೀರ್ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಸ್ಫೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಶ್ಲಾಘಿಸಿದರು.
ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಮಾತನಾಡಿದ ಗಂಭೀರ್, ರೋಹಿತ್ ತಾವು ಹೆಚ್ಚು ಹೆದರುವ ಬ್ಯಾ ಟರ್ ಎಂದು ಹೇಳಿದರು. ರೋಹಿತ್ ಒಂದು ಹೆಜ್ಜೆ ಮುಂದೆ ಇಟ್ಟರೆ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದರು. ಆದ್ದರಿಂದ ಅವರ ದಾಳಿ ತಡೆಯಲು ತಂಡವು ಅನೇಕ ಬ್ಯಾಕಪ್ ಯೋಜನೆಗಳನ್ನು ತರುತ್ತಿದ್ದೆವು . ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಅನೇಕ ಸ್ಫೋಟಕ ಬ್ಯಾಟರ್ಗಳ ಹೊರತಾಗಿಯೂ ಗಂಭೀರ್ ನೆಮ್ಮದಿ ಕೆಡಿಸಿದ್ದ ರೋಹಿತ್ ಎಂಬುದು ವಿಶೇಷ.
“ನಾಯಕನಾಗಿ ನನ್ನ ಇಡೀ ಐಪಿಎಲ್ ವೃತ್ತಿಜೀವನದಲ್ಲಿ, ನನಗೆ ನಿದ್ರೆಯಿಲ್ಲದ ರಾತ್ರಿಗಳನ್ನು ನೀಡಿದ ಏಕೈಕ ಆಟಗಾರ ಇದ್ದರೆ ಅದು ರೋಹಿತ್ ಶರ್ಮಾ. ಐಪಿಎಲ್ನಲ್ಲಿ ನಾನು ಹೆದರಿದ ಏಕೈಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ನನಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಕೊಟ್ಟ ಏಕೈಕ ಆಟಗಾರ ಅವರು. ಕ್ರಿಸ್ ಗೇಲ್ ಅಲ್ಲ, ಎಬಿ ಡಿವಿಲಿಯರ್ಸ್ ಅಲ್ಲ , ಮತ್ಯಾರೂ ಇಲ್ಲ , ರೋಹಿತ್ ಶರ್ಮಾ ಮಾತ್ರ. ಏಕೆಂದರೆ ಅವರಿಗಾಗಿ ನಾನು ಪ್ಲಾನ್ ಎ ಅಥವಾ ಪ್ಲಾನ್ ಬಿ ಹೊಂದಿರಬೇಕಿತ್ತು, ಬಹುಶಃ ಪ್ಲಾನ್ ಸಿ ಕೂಡ. ಏಕೆಂದರೆ ರೋಹಿತ್ ಅವರನ್ನು ನಿಯಂತ್ರಿಸುವುದು ಕಷ್ಟ, “ಎಂದು ಗಂಭೀರ್ ಹೇಳಿದರು.
ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ 12 ವರ್ಷಗಳ ಸುದೀರ್ಘ ದಾಖಲೆಯನ್ನು ಮುರಿಯಲು ಎದುರು ನೋಡುತ್ತಿದೆ. ಕೆಕೆಆರ್ ಕೇವಲ 9 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 23 ಪಂದ್ಯಗಳನ್ನು ಗೆದ್ದಿದೆ.
ಇದನ್ನೂ ಓದಿ: IPL 2024 : ಐಪಿಎಲ್ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ
ರೋಹಿತ್ ಗಾಗಿ ಸಾಕಷ್ಟು ಯೋಜನೆಗಳು ನಡೆಯುತ್ತಿದ್ದವು ಎಂದು ಗಂಭೀರ್ ಬಹಿರಂಗಪಡಿಸಿದರು. ರೋಹಿತ್ ಒಂದು ಓವರ್ನಲ್ಲಿ 30 ಕ್ಕೂ ಹೆಚ್ಚು ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಅವರಿಗಾಗಿ ಯೋಜನೆ ರೂಪಿಸಬೇಕಿತ್ತು
“ಐಪಿಎಲ್ನಲ್ಲಿ ರೋಹಿತ್ ಶರ್ಮಾ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ಗಾಗಿ ಹೆಚ್ಚ ಯೋಜನೆ ಹಾಕಿಕೊಂಡಿಲ್ಲ. ಪಂದ್ಯದಕ್ಕೆ ಮೊದಲ ದಿನ ರಾತ್ರಿ ನಾನು ಅವರು ಆಡುವ ದೃಶ್ಯಗಳನ್ನು ನೋಡುತ್ತಿದ್ದೆ. ಪ್ಲಾನ್ ಎ ಉತ್ತಮವಾರಿ ಸಿದ್ದಪಡಿಸುತ್ತಿದ್ದೆ. ಅದು ಕೆಲಸ ಮಾಡದಿದ್ದರೆ, ನಾನು ಮತ್ತೊಂದು ಯೋಜನೆ ಮಾಡಬೇಕಿತ್ತು. ಸುನಿಲ್ ನರೈನ್ ತನ್ನ ನಾಲ್ಕು ಓವರ್ಗಳನ್ನು ಎಸೆದರೆ, ಮುಂದಿನ 16 ಓವರ್ಗಳನ್ನು ಯಾರು ಎಸೆಯುತ್ತಾರೆ? ನಾನು ಸುನಿಲ್ ಸ್ಪೆಲ್ ಬೇಗ ಮುಗಿಸಿದರೆ ಮತ್ತು ರೋಹಿತ್ ಇದ್ದರೆ, ಅವರು ಒಂದೇ ಓವರ್ನಲ್ಲಿ 30 ರನ್ ಗಳಿಸಬಹುದು. ಬಹುಶಃ ನಾಯಕನಾಗಿ ನಾನು ಹೆದರುತ್ತಿದ್ದ ಏಕೈಕ ಬ್ಯಾಟ್ಸ್ಮನ್,” ಎಂದು ಗಂಭೀರ್ ಹೇಳಿದರು.
ಕೆಕೆಆರ್ 26 ಪಂದ್ಯಗಳನ್ನಾಡಿರುವ ರೋಹಿತ್ 130.32ರ ಸ್ಟ್ರೈಕ್ ರೇಟ್ನಲ್ಲಿ ಅಜೇಯ ಶತಕ ಸೇರಿದಂತೆ 924 ರನ್ ಗಳಿಸಿದ್ದಾರೆ.