ಬೆಂಗಳೂರು: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) 53 ನೇ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಸ್ಯಾಮ್ ಕರ್ರನ್ ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 28 ರನ್ಗಳ ಗೆಲವು ಸಾಧಿಸಿದೆ. ಅದರ ಹೊರತಾಗಿಯೂ ಸಿಎಸ್ಕೆ ತಂಡದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಿವೆ ಎಂಬುದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ಗಾಯಕ್ವಾಡ್ ಟಾಸ್ ಸೋತರು. ಸಿಎಸ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡದ ಕಾರಣ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ರವೀಂದ್ರ ಜಡೇಜಾ (43) ಗರಿಷ್ಠ ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ ಮತ್ತು ಡ್ಯಾರಿಲ್ ಮಿಚೆಲ್ 30 ರನ್ ಗಳಿಸಿದರು. ರವೀಂದ್ರ ಜಡೇಜಾ 20 ರನ್ ನೀಡಿ 3 ವಿಕೆಟ್ ಪಡೆದರು. ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು.
The Yellow flag flying high in Dharamsala 💛🏔️@ChennaiIPL with a comfortable 2️⃣8️⃣-run victory over #PBKS 👏
— IndianPremierLeague (@IPL) May 5, 2024
Follow the Match ▶️ https://t.co/WxW3UyUZq6#TATAIPL | #PBKSvCSK pic.twitter.com/yikGozZ6Jy
ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಪಿಚ್ ನಿಧಾನಗತಿಯಲ್ಲಿತ್ತು. ಹೀಗಾಗಿ ನಾವು ಪೇರಿಸಿದ ರನ್ ಬಗ್ಗೆ ಖುಷಿಯಿದೆ ಎಂದು ಹೇಳಿದರು. ವಿಕೆಟ್ ನಿಧಾನವಾಗಿತ್ತು.ಚೆಂಡು ಕಡಿಮೆ ಬೌನ್ಸ್ ಆಗುತ್ತಿತ್ತು ಇತ್ತು ಎಂದು ಹೇಳಿದರು. ಸಿಮರ್ಜೀತ್ ಸಿಂಗ್ ಬಗ್ಗೆ ಮಾತನಾಡಿದ ಋತುರಾಜ್ ಗಾಯಕ್ವಾಡ್, ವೇಗಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅವರನ್ನು ಪರಿಚಯಿಸಲು ತಡ ಮಾಡಿಲ್ಲ ಎಂದ ಹೇಳಿದರ.
ತಂಡದಲ್ಲಿದೆ ಸಮಸ್ಯೆ
ನಮ್ಮ ತಂಡದಲ್ಲಿ ಸಮಸ್ಯೆಯಿದೆ. ಆಟಗಾರರು ಜ್ವರದಿಂದ ಬಳಲುತ್ತಿದ್ದಾರೆ. ಯಾರು ಆಡುತ್ತಿದ್ದಾರೆ ಅಥವಾ ಇಲ್ಲ ಎಂದು ಬೆಳಿಗ್ಗೆಯವರೆಗೆ ಖಚಿತವಾಗಿರಲಿಲ್ಲ. ಹೀಗಾಗಿ ಗೆಲುವು ನಿಜವಾಗಿಯೂ ಸಂತೋಷ ಕೊಟ್ಟಿದೆ ಎಂದು ಹೇಳದಿರು.
ಐದು ಸೋಲುಗಳನ್ನು ಕಂಡಿದ್ದ ಚೆನ್ನೈ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ದಾಖಲೆಯನ್ನು ಹೊಂದಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿರುವ ಸಿಎಸ್ಕೆ ತಂಡ ಪಿಬಿಕೆಎಸ್ ವಿರುದ್ಧ 15-14 ಗೆಲುವಿನ ಅಂತರದ ಮುನ್ನಡೆ ಹೊಂದಿದೆ. ಆದಾಗ್ಯೂ, ಹಿಂದಿನ ಐದು ಪಂದ್ಯಗಳಲ್ಲಿ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಏಕೆಂದರೆ ಅವರು ಆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ: IPL 2024 : 28 ರನ್ಗಳಿಂದ ಗೆದ್ದು ಪಂಜಾಬ್ ವಿರುದ್ಧ ಪ್ರತಿಕಾರ ತೀರಿಸಿದ ಚೆನ್ನೈ
ಐಪಿಎಲ್ ಇತಿಹಾಸದಲ್ಲಿ, ಕೇವಲ ಎರಡು ತಂಡಗಳು 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸತತ ಐದು ಪಂದ್ಯಗಳಲ್ಲಿ ಸೋಲಿಸಿವೆ, ಮೊದಲ ತಂಡ ಮುಂಬೈ ಇಂಡಿಯನ್ಸ್ ಮತ್ತು ಇನ್ನೊಂದು ತಂಡ ಪಂಜಾಬ್ ಕಿಂಗ್ಸ್, ಇದು 2021 ರಲ್ಲಿ ತಮ್ಮ ಗೆಲುವಿನ ಸರಣಿಯನ್ನು ಪ್ರಾರಂಭಿಸಿತು ಮತ್ತು ಮೇ 1 ರ ಬುಧವಾರ ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಏಳು ವಿಕೆಟ್ಗಳಿಂದ ಸೋಲಿಸುವ ಮೂಲಕ ಮುಂಬೈ ದಾಖಲೆ ಸರಿಗಟ್ಟಿತು.
ಅಕ್ಟೋಬರ್ 7, 2021 ರಂದು, ಪಿಬಿಕೆಎಸ್ 42 ಎಸೆತಗಳು ಬಾಕಿ ಇರುವಾಗ 6 ವಿಕೆಟ್ಗಳಿಂದ ಗೆದ್ದಿತು ಮತ್ತು ಐಪಿಎಲ್ 2022ರಲ್ಲಿ ಕ್ರಮವಾಗಿ 54 ಮತ್ತು 11 ರನ್ಗಳಿಂದ ಸತತ ಗೆಲುವುಗಳನ್ನು ದಾಖಲಿಸಿತು. ಐಪಿಎಲ್ 2023 ರಲ್ಲಿ, ಅವರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು ಏಪ್ರಿಲ್ 30 ರಂದು ನಡೆದ ಪಂದ್ಯವನ್ನು ಪಿಬಿಕೆಎಸ್ 4 ವಿಕೆಟ್ಗಳಿಂದ ಗೆದ್ದಿತು.
ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಂದ್ಯದ ಮುಕ್ತಾಯದ ನಂತರ, ಸಿಎಸ್ಕೆ ಪರವಾಗಿ 16-14 ಅಂತರದ ದಾಖಲೆ ಹೊಂದಿದೆ.