Site icon Vistara News

IPL 2024 : ಸಿಎಸ್​ಕೆ ವರ್ಸಸ್​ ಆರ್​ಆರ್​ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಿತಾ? ಅಭಿಮಾನಿಗಳ ಅನುಮಾನ

IPL 2024

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಟೂರ್ನಿಯು ಮುಕ್ತಾಯದ ಹಂತಕ್ಕೆ ಸಾಗುತ್ತಿದೆ. ಅಂತೆಯೇ ಕೋಲ್ಕತಾ ನೈಟ್ ರೈಡರ್ಸ್ (KKR ) ತಂಡ ತನ್ನ ಸ್ಥಾನವನ್ನು ಪ್ಲೇಆಫ್​ ಹಂತಕ್ಕೆ ಕಾಯ್ದಿರಿಸಿದ ಮೊದಲ ತಂಡವಾಗಿದೆ ಮೂರು ಪ್ಲೇಆಫ್ ಸ್ಥಾನಗಳು ಇನ್ನೂ ಭರ್ತಿಯಾಗಬೇಕಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವು ಚೆನ್ನೈ ವಿರುದ್ಧ ಸೋತಿತು.

ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ಪ್ರದರ್ಶಿಸಿತು. ರಿಯಾನ್ ಪರಾಗ್ (35 ಎಸೆತಗಳಲ್ಲಿ 47 ರನ್) ಮತ್ತು ಧ್ರುವ್ ಜುರೆಲ್ (18 ಎಸೆತಗಳಲ್ಲಿ 28 ರನ್) ಬ್ಯಾಟಿಂಟ್​​ನಲ್ಲಿ ಪ್ರಭಾವ ಬೀರಿದವರ. ಯಶಸ್ವಿ ಜೈಸ್ವಾಲ್ (21 ಎಸೆತಗಳಲ್ಲಿ 24 ರನ್), ಜೋಸ್ ಬಟ್ಲರ್ (25 ಎಸೆತಗಳಲ್ಲಿ 21 ರನ್) ಮತ್ತು ನಾಯಕ ಸಂಜು ಸ್ಯಾಮ್ಸನ್ (19 ಎಸೆತಗಳಲ್ಲಿ 15 ರನ್) ಸೇರಿದಂತೆ ಆರ್​ಆರ್​ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಪ್ರದರ್ಶಿಸಿದರು.

ಆರ್​ಆರ್​ ತಂಡದ ಅಟದ ಬಗ್ಗೆ ಅಭಿಮಾನಿಗಳು ಸಂಶಯವೊಂದನ್ನು ವ್ಯಕ್ತಪಡಿಸಿದ್ದಾರೆ. ಕಳಪೆ ಬ್ಯಾಟಿಂಗ್ ಉದ್ದೇಶವನ್ನು ಗಮನಿಸಿದ ನೆಟ್ಟಿಗರು ಎಕ್ಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ವಿವಾದ ಹುಟ್ಟುಹಾಕಿದರು. ಚೆನ್ನೈ ತಂಡವನ್ನು ಪ್ಲೇಆಫ್​ಗೆ ಕಳುಹಿಸುವ ಉದ್ದೇಶ ಈಡೇರಿತು ಎಂದು ಆರೋಪಿಸಿದ್ದಾರೆ.

2013ರ ಋತುವಿನಲ್ಲಿ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ಪ್ರಮುಖ ಅಧಿಕಾರಿಗಳು ಭಾಗಿಯಾಗಿದ್ದಕ್ಕಾಗಿ ಆರ್​ಆರ್​ ಮತ್ತು ಸಿಎಸ್​ಕೆ ತಂಡಗಳನ್ನು ಐಪಿಎಲ್​ನಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು.

ಪ್ರಸ್ತುತ ಋತುವಿನಲ್ಲಿ, ರಾಜಸ್ಥಾನ್ ತಂಡ ಐಪಿಎಲ್ 2024 ಪ್ಲೇಆಪ್​​ನಲ್ಲಿ ಸ್ಥಾನ ಕಾಯ್ದಿರಿಸಲು ಒಂದು ಗೆಲುವಿನ ಹಿನ್ನಡೆಯಲ್ಲಿದೆ. ಏಕೆಂದರೆ ಅವರು 11 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಆದರೆ ಸಿಎಸ್ಕೆ ಪ್ರಸ್ತುತ ಅಷ್ಟೇ ಪಂದ್ಯಗಳಿಂದ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ಆದಾಗ್ಯೂ, ಆರ್ಆರ್ ವಿರುದ್ಧದ ಗೆಲುವು ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡಕ್ಕೆ ಪ್ಲೇಆಫ್​ಗೆ ಅರ್ಹತೆ ಪಡೆಯುವ ಅವಕಾಶಗಳನ್ನು ಹೆಚ್ಚಿಸಿದೆ,

ಇದನ್ನೂ ಓದಿ: Sean Williams : ಜಿಂಬಾಬ್ವೆ ತಂಡದ ಹಿರಿಯ ಆಲ್​ರೌಂಡರ್​ ಟಿ20 ಕ್ರಿಕೆಟ್​ನಿಂದ ನಿವೃತ್ತಿ

ಪಂದ್ಯದಲ್ಲಿ ಏನಾಯಿತು?

ಪ್ರಸಕ್ತ ಐಪಿಎಲ್‌ ಟೂರ್ನಿಯ (IPL 2024) ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ಅಂತರಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.

ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡಿರುವ ರಾಜಸ್ಥಾನ ರಾಯಲ್ಸ್‌ ತಂಡವು ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಸಾಧಾರಣ ಮೊತ್ತ ಪೇರಿಸಿತು. ನಿಗದಿತ 20 ಓವರ್‌ಗಳಲ್ಲಿ ಆರ್‌ಆರ್‌ 5 ವಿಕೆಟ್‌ ಕಳೆದುಕೊಂಡು ಕೇವಲ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ರಿಯಾನ್‌ ಪರಾಗ್‌ 47 ಹಾಗೂ ಧ್ರುವ್‌ ಜುರೆಲ್‌ 28 ಹೊರತುಪಡಿಸಿ ಯಾವೊಬ್ಬ ಆಟಗಾರನೂ ಸ್ಫೋಟಕ ಬ್ಯಾಟಿಂಗ್‌ ನಡೆಸದ ಕಾರಣ ಸಾಧಾರಣ ಮೊತ್ತ ದಾಖಲಾಯಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ 16 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

Exit mobile version