Site icon Vistara News

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Lok sabha election-2024

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ (india) ಮತ್ತೆ ಲೋಕಸಭಾ ಚುನಾವಣೆಯಲ್ಲಿ (Lok sabha election-2024) ಮತದಾನ (vote) ಮಾಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಗ್ರಾಮ (village), ತಾಲ್ಲೂಕು (taluk), ಜಿಲ್ಲೆ (district), ರಾಜ್ಯ (state), ದೇಶ (nation) ಮಟ್ಟದ ಯಾವುದಾದರೊಂದು ಚುನಾವಣೆ (election) ಭಾರತದಲ್ಲಿ ನಡೆಯುತ್ತಲೇ ಇರುತ್ತದೆ. ಇದು ಹಲವಾರು ವಿಶೇಷ ಘಟನೆಗಳಿಗೆ ಸಾಕ್ಷಿಯಾಗುತ್ತದೆ.

ಹೊಸ ಮತದಾರರಿಂದ ಹಿಡಿದು ಹಿರಿಯ ನಾಗರಿಕರು (Senior citizens) ಇದೇ ಮೊದಲು ಎಂಬ ಹುಮ್ಮಸ್ಸಿನಿಂದ ಮತದಾನ ಮಾಡುತ್ತಾರೆ. ಇವರ ನಡುವೆ ಈ ಬಾರಿ ಮತದಾನ ಮಾಡದಿದ್ದರೆ ಏನಾಯಿತು ಎಂದು ನಿರ್ಲಕ್ಷ ತೋರುವ ಯುವ, ಮಧ್ಯವಯಸ್ಕರೂ ಇರುತ್ತಾರೆ. ಇವರೆಲ್ಲರಿಗೂ ವಯಸ್ಸಾದ ಹಿರಿಯ ಮತದಾರರು ಅದರಲ್ಲೂ ಶತಾಯುಷಿ ಮತದಾರರು ಸ್ಫೂರ್ತಿಯಾಗುತ್ತಾರೆ.

ಲೋಕಸಭಾ ಚುನಾವಣೆ ದೇಶದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಮತದಾನ ಎಂಬುದು ದೇಶಕ್ಕಾಗಿ ನಾವು ಮಾಡುವ ಕರ್ತವ್ಯ. ಇದನ್ನು ಪ್ರತಿಯೊಬ್ಬರೂ ನಿಭಾಯಿಸಲೇಬೇಕು. ಮತಗಟ್ಟೆಗಳಿಗೊಮ್ಮೆ ಸುತ್ತು ಹಾಕಿದಾಗ ನಮ್ಮ ಮತ ಎಷ್ಟು ಅಮೂಲ್ಯ ಎಂಬುದು ಗೊತ್ತಾಗುತ್ತದೆ. ಯಾಕೆಂದರೆ ಅಲ್ಲಿ ವಯಸ್ಸಾದ ನಾಗರಿಕರು, ಅಂಗವಿಕಲರು, ಗರ್ಭಿಣಿಯರು, ಪುಟ್ಟಪುಟ್ಟ ಮಕ್ಕಳನ್ನು ಹೊತ್ತು ಬರುವ ತಾಯಂದಿರು.. ಹೀಗೆ ಕೆಲವರು ಎಷ್ಟೇ ಕಷ್ಟವಾದರೂ ಮತದಾನ ಮಾಡುವುದನ್ನು ತಪ್ಪಿಸುವುದಿಲ್ಲ.

ಮತದಾರರಿಗೆ ಸ್ಫೂರ್ತಿ ತುಂಬಲು ಹರಿಯಾಣದಲ್ಲಿ ಹೊಸ ಯೋಜನೆ ಮಾಡಲಾಗಿದೆ. ಅಲ್ಲಿ ಶತಾಯುಷಿ ಮತದಾರರನ್ನು ಚುನಾವಣೆಗಾಗಿ ಜಿಲ್ಲೆಗಳ ಐಕಾನ್ ಗಳಾಗಿ ಗುರುತಿಸಲಾಗಿದೆ.

ಇದನ್ನೂ ಓದಿ: PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನುರಾಗ್ ಅಗರ್ವಾಲ್ ಅವರು ಶುಕ್ರವಾರ ಪಲ್ವಾಲ್ ಜಿಲ್ಲೆಯ 118 ವರ್ಷದ ಧರ್ಮವೀರ್ ರಾಜ್ಯದ ಅತ್ಯಂತ ಹಿರಿಯ ಮತದಾರರಾಗಿದ್ದಾರೆ. ವಯಸ್ಸಾದ ಇವರಂತಹ ಮತದಾರರು ಯುವ ಮತದಾರರಿಗೆ ಸ್ಫೂರ್ತಿಯಾಗುತ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.


ಐಕಾನ್ ಶತಾಯುಷಿಗಳು

ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಯೋವೃದ್ಧರು ಮತ್ತು ಯುವ ಮತದಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಜಿಲ್ಲೆಗಳ ಐಕಾನ್‌ಗಳಾಗಿ ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಹಿರಿಯ ಮಹಿಳೆ

ಮಹಿಳೆಯರಲ್ಲಿ ಸಿರ್ಸಾ ಜಿಲ್ಲೆಯ 117 ವರ್ಷದ ಬಲ್ಬೀರ್ ಕೌರ್ ರಾಜ್ಯದ ಅತ್ಯಂತ ಹಿರಿಯ ಮಹಿಳಾ ಮತದಾರರಾಗಿದ್ದು, ಸೋನೆಪತ್ ಜಿಲ್ಲೆಯ 116 ವರ್ಷದ ಭಗವಾನಿ ಅನಂತರದ ಸ್ಥಾನದಲ್ಲಿದ್ದಾರೆ ಎಂದರು.

ಶತಾಯುಷಿ ಮತದಾರರು

ಪಾಣಿಪತ್ ಜಿಲ್ಲೆಯ ಲಕ್ಷಿಶೇಕ್‌ಗೆ 115 ವರ್ಷ, ರೋಹ್ಟಕ್‌ನ ಚಂದ್ರೋ ಕೌರ್, ಫತೇಹಾಬಾದ್ ಜಿಲ್ಲೆಯ ರಾಣಿ ಮತ್ತು ಕುರುಕ್ಷೇತ್ರ ಜಿಲ್ಲೆಯ ಅಂಟಿದೇವಿ ಅವರ ವಯಸ್ಸು 112. ಇನ್ನು ಸರ್ಜಿತ್ ಕೌರ್ ಮತ್ತು ಚೋಬಿ ದೇವಿ ಇಬ್ಬರಿಗೂ 111 ವರ್ಷ, ರೇವಾರಿ ಜಿಲ್ಲೆಯ ನಾರಾಯಣಿ ಅವರಿಗೆ 110 ವರ್ಷ. ಕೈತಾಲ್ ಜಿಲ್ಲೆಯಲ್ಲಿ 109 ವರ್ಷ ವಯಸ್ಸಿನ ಮತದಾರ ಫುಲ್ಲಾ ಮತ್ತು ಫರಿದಾಬಾದ್ ಜಿಲ್ಲೆಯ ಚಂದೇರಿ ದೇವಿ 109 ವರ್ಷ ವಯಸ್ಸಿನವರಾಗಿದ್ದಾರೆ ಎಂದರು.

ಜಿಂದ್ ಜಿಲ್ಲೆಯ ರಾಮದೇವಿ ಮತ್ತು ನುಹ್ ಜಿಲ್ಲೆಯ ಹರಿ 108 ವರ್ಷ ವಯಸ್ಸಿನವರು. ಜಜ್ಜರ್ ಜಿಲ್ಲೆಯ ಮೇವಾ ದೇವಿ, ಕರ್ನಾಲ್ ಜಿಲ್ಲೆಯ ಗುಲ್ಜಾರ್ ಸಿಂಗ್, ಹಿಸಾರ್ ಜಿಲ್ಲೆಯ ಶಾಡ್ಕಿನ್ ಮತ್ತು ಶ್ರೀರಾಮ್ ಮತ್ತು ಚಾರ್ಖಿ ದಾದ್ರಿಯ ಗೀನಾ ದೇವಿ 106 ವರ್ಷ ವಯಸ್ಸಿನ ಮತದಾರರು. ಭಿವಾನಿ ಜಿಲ್ಲೆಯ ಹರ್ದೇಯಿ ಅವರಿಗೆ 103 ವರ್ಷ ಮತ್ತು ಯಮುನಾನಗರದ ಫೂಲ್ವತಿ ಅವರಿಗೆ 100 ವರ್ಷ ವಯಸ್ಸಾಗಿದೆ ಎಂದು ಅವರು ತಿಳಿಸಿದರು.

ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಚುನಾವಣಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಚುನಾವಣೆಯ ಐಕಾನ್‌ಗಳನ್ನು ಮಾಡಲು ಅಗರ್ವಾಲ್ ಒತ್ತಾಯಿಸಿದರು.

ಈ ಬಾರಿ ಘೋಷಣೆ ಏನು?

ಈ ವರ್ಷ, ಭಾರತೀಯ ಚುನಾವಣಾ ಆಯೋಗವು ‘ಚುನಾವ್ ಕಾ ಪರ್ವ್ ದೇಶ್ ಕಾ ಗರ್ವ್’ ಎಂಬ ಘೋಷಣೆಯನ್ನು ಲೋಕಸಭೆ ಚುನಾವಣೆಯ ಪ್ರಮುಖ ಘೋಷಣೆಯನ್ನಾಗಿ ಮಾಡಿದೆ. ಇದರಿಂದಾಗಿ ನಾಗರಿಕರು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಐದು ವರ್ಷಕ್ಕೊಮ್ಮೆ ಬರುವ ಹಬ್ಬ

ರಾಜ್ಯದ 18- 19 ವರ್ಷ ವಯೋಮಾನದ ಯುವಕರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದಾಗ ಪ್ರಜಾಪ್ರಭುತ್ವದ ಶಕ್ತಿ ಹಾಗೂ ಮತದಾನದ ಮಹತ್ವ ತಿಳಿಯುತ್ತದೆ. ಐದು ವರ್ಷಕ್ಕೊಮ್ಮೆ ಪ್ರಜಾಪ್ರಭುತ್ವದ ಹಬ್ಬ ಬರುವುದರಿಂದ ಯುವಕರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಅವರು ಹೇಳಿದರು.

Exit mobile version