ಬೆಂಗಳೂರು: ನಾಗಸಂದ್ರದಿಂದ ಮಾದಾವರವರೆಗಿನ 3.7 ಕಿಮೀ ಉದ್ದದ ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್(Metro green line) ವಿಸ್ತರಣಾ ಕಾರ್ಯಚರಣೆ ವಿಳಂಬವಾಗಿದ್ದು, ಈಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾರಣೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ ಎಂಬುದಾಗಿ ತಿಳಿದುಬಂದಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ನ ಅಧಿಕಾರಿಗಳಿಂದ ಉಪಕರಣಗಳ ಆಯ್ಕೆ ಮತ್ತು ಮೂಲ ಸೌಕರ್ಯಗಳ ಅಂತಿನ ಪರೀಕ್ಷೆ ಬಾಕಿ ಇದೆ ಎನ್ನಲಾಗಿದೆ.
ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್ ವಿಸ್ತರಣಾ ನಿರ್ಮಾಣವು 2019ರ ಮಧ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿಂದ 2017ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡ್ಡಿಯಿಂದಾಗಿ ಇದು ವಿಳಂಬವಾಯಿತು. ಆದರೆ ಸದ್ಯದಲ್ಲೇ ಟ್ರ್ಯಾಕ್ ನ ನಿರ್ಮಾಣ ಕಾರ್ಯ ಪೂರ್ಣಗೊಂಡು ಮುಂದಿನ ಎರಡು ತಿಂಗಳಲ್ಲಿ ಲೈನ್ ಪರೀಕ್ಷೆಗೆ ಒಳಗಾಗಲಿದೆ. ನಂತರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಗ್ರೀನ್ ಲೈನ್ ವಿಸ್ತರಣೆ ಕಾರ್ಯಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(ಬಿಎಂ ಆರ್ ಸಿಎಲ್)ನ ಅಧಿಕಾರಿಗಳು ತಿಳಿಸಿದ್ದಾರೆ.
ನಾಗಸಂದ್ರದಿಂದ ಮಾದಾವರವರೆಗಿನ ಎತ್ತರದ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರದಂತಹ ಮೂರು ನಿಲ್ದಾಣಗಳನ್ನು ಒಳಗೊಂಡಿದ್ದು, ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ(ಬಿಐಇಸಿ)ಕ್ಕೆ ಸಂಪರ್ಕವನ್ನು ನೀಡುತ್ತದೆ.
ಬೆಂಗಳೂರು ಮೆಟ್ರೋಗ್ರೀನ್ ಲೈನ್‌ನಿಂದ ಪ್ರಯಾಣಿಕರಿಗೆ ಬಹಳ ಪ್ರಯೋಜನವಾಗಲಿದೆ. ಗ್ರೀನ್ ಲೈನ್ ವಿಸ್ತರಣೆಯಾದ ನಂತರ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ ಮತ್ತು ಜಿಂದಾಲ್ ನಗರ ಪ್ರದೇಶಗಳ ನಿವಾಸಿಗಳಿಗೆ ಕಡಿಮೆ ಸಮಯದಲ್ಲಿ ಬೆಂಗಳೂರು ನಗರ ತಲುಪುವ ಅವಕಾಶ ಸಿಗುತ್ತದೆ.
ಇದನ್ನೂ ಓದಿ:ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ
ಬೆಂಗಳೂರು ಮೆಟ್ರೋದ ಗ್ರೀನ್ ಲೈನ್ ವಿಸ್ತರಣೆಯಲ್ಲಿ, ಮೊದಲ ಕಾರಿಡಾರ್ 31 ನಿಲ್ದಾಣಗಳನ್ನು ಹೊಂದಿದ್ದರೆ, ಎರಡನೇಯದು 9 ನಿಲ್ದಾಣಗಳನ್ನು ಹೊಂದಿರುತ್ತದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(ಬಿಎಂ ಆರ್ ಸಿಎಲ್) ಪಿಐಬಿ ಡಿಪಿಆರ್ ಅನ್ನು ಈಗಾಗಲೇ ತೆರವುಗೊಳಿಸಿದೆ. ಆದರೆ ಕೇಂದ್ರ ಸಂಪುಟದ ಅನುಮೋದನೆ ಇನ್ನೂ ಬಾಕಿ ಇದೆ ಎಂಬುದಾಗಿ ತಿಳಿದುಬಂದಿದೆ.