ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಸಾಧ್ಯತೆ, ಪಶ್ಚಿಮ ಬಂಗಾಳದಲ್ಲಿ ದೀದಿಗೆ ಸಮಬಲದ ಟಕ್ಕರ್, ತಮಿಳುನಾಡು-ಕೇರಳಂನಲ್ಲಿ ವೋಟ್ ಶೇರ್ ಹೆಚ್ಚಳ – ಪಂಚ ರಾಜ್ಯಗಳ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಕುರಿತ ಈ ಸಮೀಕ್ಷೆ ನಿಜವಾದರೆ ಅದು ಮತ್ತೊಮ್ಮೆ ಮೋದಿ ಮ್ಯಾಜಿಕ್ ಎಂದೇ ಹೇಳಬಹುದು.
ಪಂಚ ರಾಜ್ಯಗಳ ಚುನಾವಣಾ ಸನ್ನಿವೇಶವೇ ಮೋದಿ ನೇತೃತ್ವದ ಬಿಜೆಪಿಗೆ ಒಂದು ಸವಾಲಾಗಿತ್ತು. ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಪ್ರಧಾನಿ ಮೋದಿಯವರಿಗೆ ಅತಿದೊಡ್ಡ ಸವಾಲು ಸೃಷ್ಟಿಸಿತ್ತು. ಏಕಾಏಕಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ, ಹೊಟೇಲು-ಇತರ ಉದ್ಯಮಗಳಿಗೆ ಕಮರ್ಶಿಯಲ್ ಗ್ಯಾಸ್ ಪೂರೈಕೆ ಬುಡಮೇಲು, ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ. ಇವೆಲ್ಲಾ ಚುನಾವಣೆಯ ಮುಖ್ಯ ವಿಷಯಗಳಾಗಿದ್ದವು. ಹರಿಯಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ಗೆಲುವಿನ ನಂತರ ಅಸ್ಸಾಂ, ಪುದುಚೇರಿ, ಮುಖ್ಯವಾಗಿ ಪಶ್ಚಿಮ ಬಂಗಾಳವನ್ನು ಗೆಲ್ಲಲ್ಲೇ ಬೇಕಾದ ಹಠಕ್ಕೆ ಬಿಜೆಪಿ ಬಿದ್ದಿತ್ತು. ಈ ಗೆಲುವಿಗೆ ಬಿಜೆಪಿ ಅವಲಂಬಿಸಿದ್ದು ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು. ಸಂಕಷ್ಟದ ಕಾಲದಲ್ಲಿ ಮೋದಿ ಸರ್ಕಾರ ನಿರ್ವಹಿಸಿದ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಗೃಹ ಬಳಕೆ ಗ್ಯಾಸ್ ಪೂರೈಕೆ ವ್ಯತ್ಯಯವಾಗಲು ಮೋದಿ ಸರ್ಕಾರ ಬಿಡಲಿಲ್ಲ. ಬಹುತೇಕ ದೇಶಗಳು ಪೆಟ್ರೋಲ್, ಡೀಸೆಲ್ ಬೆಲೆ ಶೇಕಡಾ 20ರಿಂದ 30 ರಷ್ಟು ಏರಿಕೆ ಮಾಡಿದರೂ, ಮೋದಿ ಸರ್ಕಾರ ಸಾಧಾರಣ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಲಿಲ್ಲ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ನೇರ ಜನರ ಮೇಲೆ ಬೀಳಲು ಮೋದಿ ಸರ್ಕಾರ ಬಿಡಲಿಲ್ಲ.
ಪ.ಬಂಗಾಳ ಗೆದ್ದರೆ ಅತಿ ದೊಡ್ಡ ಸಾಧನೆ:
ದೀದಿ ನಾಡನ್ನು ಗೆಲ್ಲಲು ಬಿಜೆಪಿ ಕಳೆದ 15 ವರ್ಷಗಳಿಂದ ಶಕ್ತಿ ಮೀರಿ ಶ್ರಮಿಸುತ್ತಿದೆ. ಈ ಸಲ, ದೀದಿ ನಾಡಲ್ಲಿ ಮೋದಿ ಹವಾ ಸೃಷ್ಟಿಯಾಗಿದೆ ಎಂದೇ ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಬಂಗಾಳವನ್ನು ಗೆದ್ದರೆ ಬಿಜೆಪಿಯ ದಿಗ್ವಿಜಯದ ಪಟ್ಟಿಯಲ್ಲೊಂದು ಮೈಲಿಗಲ್ಲು. ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ, ಬದಲಿಗೆ ಇನ್ನಷ್ಟು ಗಟ್ಟಿಯಾಗುತ್ತಿದೆ ಎನ್ನುವುದರ ಸೂಚಕ.
ಇನ್ನು ಪುದುಚೇರಿ, ತಮಿಳುನಾಡು, ಕೇರಳಂನಲ್ಲೂ ಮೋದಿ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿರೋದು ಎಕ್ಸಿಟ್ ಪೋಲ್ ದತ್ತಾಂಶಗಳು ಹೇಳುತ್ತಿವೆ. ತಮಿಳುನಾಡು, ಕೇರಳಂನಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳು ಇಲ್ಲದೇ ಹೋದರೂ ಕೂಡಾ, ಬಿಜೆಪಿಯ ಮತ ಪ್ರಮಾಣ ಏರಿಕೆಯಾಗಿದೆ ಎನ್ನುತ್ತಿವೆ ಸಮೀಕ್ಷೆಗಳು.
ಹಾಗೇ ನೋಡಿದರೆ, ಜಾಗತಿಕ ಮಟ್ಟದಲ್ಲಿ ಮೋದಿ ಅತಿ ಜನಪ್ರಿಯ ವ್ಯಕ್ತಿ. ಮಾರ್ಚ್ 2026ರ ಅವಧಿಯಲ್ಲಿ ಮೋದಿ ಅಪ್ರೂವಲ್ ರೇಟ್ ಶೇ 70ರಷ್ಟಿತ್ತು. ವಿಶ್ವದ ಜನಪ್ರಿಯ ನಾಯಕರ ಸಾಲಿನಲ್ಲಿ ಪ್ರಧಾನಿ ಮೋದಿಯೇ ಮೊದಲಿಗರಾಗಿದ್ದಾರೆ.
ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿ ಈಗಲೂ ನಂ.1

