Site icon Vistara News

Nitish Reddy : ಐಪಿಎಲ್​ನಲ್ಲಿ ಮಿಂಚಿದ ಈ ಆಟಗಾರನಿಗೆ ಎಪಿಎಲ್​ನಲ್ಲಿ ಸಿಕ್ಕಿತು ಭರ್ಜರಿ ದುಡ್ಡು

Nitish Kumar Reddy

ನವದೆಹಲಿ: ಆಂಧ್ರ ಪ್ರೀಮಿಯರ್ ಲೀಗ್ (APL) ನಲ್ಲಿ ಸನ್​ರೈಸರ್ಸ್​ ಹೈದರಬಾದ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ (Nitish Reddy) ಭರ್ಜರಿ ಮೊತ್ತವನ್ನು ಪಡೆದಿದ್ದಾರೆ. ಈ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ನಿತೀಶ್​ ಈಗ ಈ ಟಿ20 ಲೀಗ್​ನ ಹರಾಜಿನ ಮೂರು ಆವೃತ್ತಿಗಳ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದ ಹಾಗೆ 20 ವರ್ಷದ ಆಟಗಾರನನ್ನು ಗೋದಾವರಿ ಟೈಟಾನ್ಸ್ ತಂಡ 15.6 ಲಕ್ಷ ರೂ.ಗೆ ಖರೀದಿಸಿದೆ. ಹೈದರಾಬಾದ್​​ನ ಹೋಟೆಲ್ ಕೊಠಡಿಯಿಂದ ಎಪಿಎಲ್ 2024 ಹರಾಜನ್ನು ವೀಕ್ಷಿಸುತ್ತಿದ್ದ ನಿತೀಶ್​​ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ (IPL 2024) ಅವರು ಎಸ್​ಆರ್​ಎಚ್ ತಂಡದ ಆಟಗಾರ.

ನಿತೀಶ್ ಕುಮಾರ್ ರೆಡ್ಡಿ ಅವರು ಹೋಟೆಲ್ ಕೋಣೆಯಲ್ಲಿ ಸಂಭ್ರಮಿಸುತ್ತಿರುವುದನ್ನು ಅವರ ಸಹ ಆಟಗಾರರೊಬ್ಬರು ಚಿತ್ರೀಕರಿಸಿದ್ದಾರೆ. ಯುವ ಆಟಗಾರನ ಪ್ರತಿಕ್ರಿಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಎಸ್​ಆರ್​ಎಚ್​ 20 ಲಕ್ಷ ರೂ.ಗೆ ಖರೀದಿಸಿತ್ತು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆರು ತಂಡಗಳ ಪಂದ್ಯಾವಳಿಯಾದ ಆಂಧ್ರ ಪ್ರೀಮಿಯರ್ ಲೀಗ್​​ನಲ್ಲಿ ದಾಖಲೆಯ ಬಿಡ್​ನೊಂದಿಗೆ ಅವರು ಹೆಚ್ಚುಕಡಿಮೆ ಅಷ್ಟೇ ಮೊತ್ತ ಗಳಿಸಿದ್ದಾರೆ.

ಐಪಿಎಲ್ 2024 ರಲ್ಲಿ ಸನ್​ರೈಸರ್ಸ್​ ಜೊತೆಗಿನ ನಿತೀಶ್ ಅವರ ಯಶಸ್ಸು ಗುರುವಾರ ನಡೆದ ಆಂಧ್ರ ಟಿ 20 ಲೀಗ್ ಹರಾಜಿನಲ್ಲಿ ಪ್ರತಿಫಲನಗೊಂಡಿತು. ಗೋದಾವರಿ ಟೈಟಾನ್ಸ್ ತಂಡದ ಖಜಾನೆ ಒಡೆದ ಅವರು ಗರಿಷ್ಠ ಮೊತ್ತವನ್ನು ಪಡೆದರು.

ಸನ್ರೈಸರ್ಸ್​ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ನಿತೀಶ್ 239 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅವರರನ್ನು ತಂಡ ಆಧಾರಸ್ತಂಭವೆಂದು ಹೇಳಲಾಗಿದೆ. ಮಯಾಂಕ್ ಅಗರ್ವಾಲ್ ಗಾಯದ ನಂತರ ಅವಕಾಶ ಪಡೆದ ನಿತೀಶ್, 150 ಕ್ಕೂ ಹೆಚ್ಚು ರನ್ ಗಳಿಸುವ ಜತೆಗೆ 3 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Sunil Chhetri: ಭಾರತದ ಫುಟ್ಬಾಲ್‌ ಮಾಂತ್ರಿಕ ಸುನೀಲ್ ಚೆಟ್ರಿ ಕುರಿತ 8 ಕುತೂಹಲಕರ ಸಂಗತಿಗಳಿವು!

19 ವರ್ಷದೊಳಗಿನವರ ಮಟ್ಟದಲ್ಲಿ ಭಾರತ ಬಿ ಪರ ಆಡಿದ ನಿತೀಶ್ ಕುಮಾರ್ ರೆಡ್ಡಿ 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 566 ರನ್ ಮತ್ತು 22 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, 36.63 ಸರಾಸರಿಯಲ್ಲಿ 403 ರನ್ ಗಳಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ಅವರ ಪ್ರದರ್ಶನವು ನಿತೀಶ್ ಅವರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಅಲ್ಲಿ ಅವರು ಪ್ರಾಥಮಿಕವಾಗಿ ಬೌಲಿಂಗ್ ಆಲ್ರೌಂಡರ್ ಆಗಿ ಆಡಿದರು ಮತ್ತು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಗಮನಾರ್ಹ ಕೊಡುಗೆ ನೀಡಿದರು. 2023 ರ ಋತುವಿನಲ್ಲಿ, ನಿತೀಶ್ 18.76 ಸರಾಸರಿಯಲ್ಲಿ 25 ವಿಕೆಟ್​​ಗಳನ್ನು ಪಡೆದರು ಮತ್ತು 36.60 ಸರಾಸರಿಯಲ್ಲಿ 366 ರನ್ ಗಳಿಸಿದ್ದಾರೆ.

Exit mobile version