Site icon Vistara News

Politicians Scandals : ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಲೈಂಗಿಕ ಹಗರಣಗಳಿವು!

Politicians Scandals

ನವದೆಹಲಿ: ರಾಜಕಾರಣದಲ್ಲಿ (politics) ಆರೋಪ, ಪ್ರತ್ಯಾರೋಪಗಳು (Politicians Scandals) ಸಾಮಾನ್ಯ. ಕೆಲವೊಮ್ಮೆ ಈ ಆರೋಪಗಳು ಎಷ್ಟು ಗಂಭೀರವಾಗಿರುತ್ತದೆ ಎಂದರೆ ರಾಜಕಾರಣಿಗಳ ರಾಜಕೀಯ ಭವಿಷ್ಯವನ್ನೇ ಬುಡಮೇಲು ಮಾಡಿ ಬಿಡುತ್ತವೆ. ಇಂತಹ ಆರೋಪಗಳಲ್ಲಿ ಮುಖ್ಯವಾದದದ್ದು ಲೈಂಗಿಕ ಹಗರಣಗಳು.

ಆಕ್ಷೇಪಾರ್ಹ ಸಿಡಿಗಾಗಿ (CD case) ಆಪ್ ನ (AAP) ಸಚಿವ ಸಂಪುಟದಲ್ಲಿ ಮಕ್ಕಳ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ಸಚಿವರಾಗಿದ್ದ ಸಂದೀಪ್ ಕುಮಾರ್ (sundeep kumar) ಅವರನ್ನು ದೆಹಲಿ (delhi) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2016ರಲ್ಲಿ ಸಚಿವ ಸಂಪುಟದಿಂದ ವಜಾಗೊಳಿಸಿದ್ದರು. ಲೈಂಗಿಕ ಹಗರಣದಿಂದಾಗಿ ರಾಜಕೀಯ ಜೀವನ ತತ್ತರಿಸಿ ಹೋದ ದೊಡ್ಡ ರಾಜಕಾರಣಿ ಇವರು ಮೊದಲೇನಲ್ಲ. ಲೈಂಗಿಕ ಹಗರಣ ಅನೇಕ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಭಾರತೀಯ ರಾಜಕೀಯವನ್ನು ಅಲುಗಾಡಿಸಿರುವ 15 ಪ್ರಮುಖ ಲೈಂಗಿಕ ಹಗರಣಗಳ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: PM Narendra Modi: ಸಂಪತ್ತು ಮರುಹಂಚಿಕೆಯ ರಾಹುಲ್ ಗಾಂಧಿ ಐಡಿಯಾ ನಗರ ನಕ್ಸಲ್ ಚಿಂತನೆ: ಪಿಎಂ ಮೋದಿ


ರಾಘವಜಿ ಲಖಂಸಿ ಸವಲಾ

2013ರಲ್ಲಿ ಮಧ್ಯಪ್ರದೇಶದ ಹಣಕಾಸು ಸಚಿವ ರಾಘವಜಿ ಲಖಂಸಿ ಸವಾಲಾ ವಿರುದ್ಧ ಮನೆಕೆಲಸಗಾರನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿತ್ತು. ಕಾಯಂ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಸಚಿವರು ತನಗೆ ಕಿರುಕುಳ ನೀಡಿರುವುದಾಗಿ ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದ. ಆಗ ರಾಘವಜಿಗೆ 79 ವರ್ಷ. ಸಿಡಿ ಹೊರಬಿದ್ದ ಕೂಡಲೇ ರಾಘವಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಬಾಬುಲಾಲ್ ನಗರ್

2013ರಲ್ಲಿ ಜೈಪುರದ ಮಹಿಳೆಯೊಬ್ಬರು ರಾಜಸ್ಥಾನದ ಮಾಜಿ ಸಚಿವ ಬಾಬುಲಾಲ್ ನಗರ್ ವಿರುದ್ಧ ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸಚಿವರು ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸಚಿವರ ವಿರುದ್ಧ ಬೆದರಿಕೆ ಆರೋಪವೂ ಕೇಳಿ ಬಂದಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ನಾಗರ್ ರಾಜೀನಾಮೆ ನೀಡಬೇಕಾಯಿತು.

ಗೋಪಾಲ್ ಕಾಂಡಾ

ಗಗನಸಖಿ ಗೀತಿಕಾ ಶರ್ಮಾ ಅವರು ಹರಿಯಾಣದ ಮಾಜಿ ಸಚಿವ ಗೋಪಾಲ್‌ ಕಾಂಡಾ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಗೀತಿಕಾ MLDR ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. ಆದರೆ ಕಾಂಡಾ ನೀಡಿದ ಲೈಂಗಿಕ ಕಿರುಕುಳದ ಅನಂತರ ಅವರು 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಪತ್ರದಲ್ಲಿ ಗೀತಿಕಾ ಅವರು ತಮ್ಮ ಜೀವನ ಕೊನೆಯಾಗಲು ಕಾಂಡಾ ಅವರೇ ಕಾರಣ ಎಂದು ಆರೋಪಿಸಿದ್ದರು. ಬಳಿಕ ಕಾಂಡಾ ಅವರನ್ನು ಬಂಧಿಸಲಾಗಿದ್ದು, 2014ರಲ್ಲಿ ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಜಾಮೀನು ನೀಡಲಾಯಿತು.

ಮಹಿಪಾಲ್ ಮಡೆರ್ನಾ

2011ರಲ್ಲಿ ಭನ್ವಾರಿ ದೇವಿ ಲೈಂಗಿಕ ಹಗರಣದಲ್ಲಿ ಆಗಿನ ರಾಜಸ್ಥಾನದ ಜಲಸಂಪನ್ಮೂಲ ಸಚಿವ ಮಹಿಪಾಲ್ ಮಡೆರ್ನಾ ಭಾಗಿಯಾಗಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಅಲುಗಾಡಿಸಿತು. ಭನ್ವಾರಿ ದೇವಿ ಸಹಾಯಕ ನರ್ಸ್ ಆಗಿದ್ದರು. ಆಕೆ ನಾಪತ್ತೆಯಾಗಿದ್ದು, ಮಡೆರ್ನಾ ಆಕೆಯನ್ನು ಅಪಹರಿಸಿದ್ದಾರೆ ಎಂದು ಆಕೆಯ ಪತಿ ಆರೋಪಿಸಿದಾಗ ಪ್ರಕರಣ ಬೆಳಕಿಗೆ ಬಂದಿತು. ಭನ್ವಾರಿ ದೇವಿ ಅವರೊಂದಿಗೆ ಮಡೆರ್ನಾ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದರು. ಅಂತಿಮವಾಗಿ, ಗೆಹ್ಲೋಟ್ ಸರ್ಕಾರದಿಂದ ಮಡೆರ್ನಾ ಅವರನ್ನು ವಜಾಗೊಳಿಸಲಾಯಿತು.


ಎನ್‌ ಡಿ ತಿವಾರಿ

ಹಿರಿಯ ಕಾಂಗ್ರೆಸ್ ನಾಯಕ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಯಾಗಿದ್ದ ಎನ್ ಡಿ ತಿವಾರಿ ಅವರು 2009ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದರು. ಆಗ ಅವರಿಗೆ 85 ವರ್ಷ. ರಾಜಭವನದಲ್ಲಿ ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದ ಅನಂತರ ತಿವಾರಿ ರಾಜೀನಾಮೆ ನೀಡಿದ್ದರು.
2008ರಲ್ಲಿ ರೋಹಿತ್ ಶೇಖರ್ ತಿವಾರಿ ಅವರು ಎನ್ ಡಿ ತಿವಾರಿ ಅವರು ತಮ್ಮ ತಂದೆ ಎಂದು ಹೇಳಿಕೊಂಡು ಪಿತೃತ್ವ ಮೊಕದ್ದಮೆಯನ್ನು ಹೂಡಿದರು. ತಿವಾರಿ ಅವರ ಡಿಎನ್‌ಎ ಮ್ಯಾಪಿಂಗ್ ಮಾಡುವಂತೆ ಕೋರ್ಟ್ ಆದೇಶಿಸಿತ್ತು. 2012ರಲ್ಲಿ ಡಿಎನ್‌ಎ ಪರೀಕ್ಷೆಯಿಂದ ತಿವಾರಿ ರೋಹಿತ್ ಶೇಖರ್ ತಿವಾರಿಯ ಜೈವಿಕ ತಂದೆ ಎಂದು ದೃಢಪಡಿಸಿತು.


ಸಂಜಯ್ ಜೋಷಿ

2005ರಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಂಜಯ್ ಜೋಶಿ ಅವರಿಗೆ ಲೈಂಗಿಕ ಹಗರಣ ಆರೋಪ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಭಾರಿ ಹಿನ್ನಡೆ ಉಂಟು ಮಾಡಿತ್ತು. ಬಿಜೆಪಿಯಲ್ಲಿ ಅವರು ಆರ್‌ಎಸ್‌ಎಸ್‌ ಪ್ರತಿನಿಧಿಯಾಗಿದ್ದರು. ಆದರೆ ಲೈಂಗಿಕ ಹಗರಣದಿಂದಾಗಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು. ಅನಂತರ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳಲಾಯಿತು. ಆದರೆ ಅವರ ಮೇಲಿನ ಆರೋಪದಿಂದ ಅವರಿಗೆ ಹಿಂದಿದ್ದ ಅಧಿಕಾರ ಮರಳಿ ಸಿಗಲಿಲ್ಲ. ಜೋಶಿ ಅವರು ಮಹಿಳೆಯೊಂದಿಗಿದ್ದ ಸಿಡಿ ಭಾರಿ ಸದ್ದು ಮಾಡಿತ್ತು. ಆ ಬಳಿಕ ತನಿಖೆ ನಡೆದು, ಅದು ನಕಲಿ ಸಿಡಿ ಎಂಬ ವರದಿ ಬಂದಿತ್ತು.

ಅಮರಮಣಿ ತ್ರಿಪಾಠಿ

ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಅವರು ಕವಯಿತ್ರಿ ಮಧುಮಿತಾ ಶುಕ್ಲಾ ಅವರನ್ನು ಕೊಂದಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಮಧುಮಿತಾರನ್ನು ತ್ರಿಪಾಠಿ ಪದೇಪದೇ ಬೆದರಿಕೆ ಹಾಕಿದ ಮತ್ತು ಗರ್ಭಪಾತ ಮಾಡಿಸಿಕೊಳ್ಳಲು ಬಲವಂತಪಡಿಸಿದ ಆರೋಪ ಕೇಳಿ ಬಂದಿತ್ತು. ಮಧುಮಿತಾ 2003ರಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಈ ಹತ್ಯೆ ಉತ್ತರ ಪ್ರದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದು, ಮಾಯಾವತಿ ಸಂಪುಟದಿಂದ ತ್ರಿಪಾಠಿ ನಿರ್ಗಮನಕ್ಕೆ ಕಾರಣವಾಗಿತ್ತು.

ಹರಕ್ ಸಿಂಗ್ ರಾವತ್

ಉತ್ತರಾಖಂಡದ ಕಂದಾಯ ಸಚಿವರ ಮೇಲೆ 2003ರಲ್ಲಿ ಅಸ್ಸಾಮಿ ಮಹಿಳೆಯೊಬ್ಬರು ತನ್ನ ನವಜಾತ ಮಗುವಿನ ತಂದೆ ಎಂದು ಆರೋಪಿಸಿದರು. ಮಗುವಿನ ಡಿಎನ್‌ಎ ಕಾಂಗ್ರೆಸ್ ನಾಯಕನ ಡಿಎನ್‌ಎಗೆ ಹೊಂದಿಕೆಯಾಗುತ್ತಿಲ್ಲ ಎಂದು ಸಿಬಿಐ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರಿಂದ ಪ್ರಕರಣ ಆ ಬಳಿಕ ಮಹತ್ವ ಕಳೆದುಕೊಂಡಿತ್ತು.

ಸಾಧು ಯಾದವ್

ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಸೋದರ ಮಾವ ಸಾಧು ಯಾದವ್ ಅವರಿಗೆ ಸಂಬಂಧಿಸಿ 1999ರಲ್ಲಿ ಹೈ ಪ್ರೊಫೈಲ್ ಲೈಂಗಿಕ ಹಗರಣಕ್ಕೆ ಬಿಹಾರ ಸಾಕ್ಷಿಯಾಯಿತು. ಬಾಲಕಿ ಶಿಲ್ಪಿ ಜೈನ್ ಮತ್ತು ಆಕೆಯ ಸ್ನೇಹಿತ ಗೌತಮ್ ಅವರ ಕೊಲೆ ನಡೆದಿತ್ತು. ಶಿಲ್ಪಿ ಮತ್ತು ಗೌತಮ್ ಇಬ್ಬರೂ ಸಾಧುಗೆ ಸ್ನೇಹಿತರಾಗಿದ್ದರು. ಅವರ ದೇಹಗಳು ಅರೆ ನಗ್ನ ಸ್ಥಿತಿಯಲ್ಲಿ ಕಾರಿನೊಳಗೆ ಪತ್ತೆಯಾಗಿದ್ದವು. ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಂತಿಮವಾಗಿ ವರದಿ ನೀಡಿತು. ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ಗೌತಮ್ ಆಕೆಯ ರಕ್ಷಣೆಗೆ ಬಂದಾಗ ಅವರಿಬ್ಬರಿಗೆ ಬಲವಂತವಾಗಿ ವಿಷ ಕುಡಿಸಲಾಯಿತು ಎಂದು ಆರೋಪಿಸಲಾಗಿತ್ತು.


ಗೋಪಿನಾಥ್ ಮುಂಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಗೋಪಿನಾಥ್ ಮುಂಡೆ ಮತ್ತು ನೃತ್ಯಗಾರ್ತಿ ಬರ್ಖಾ ಪಾಟೀಲ್ ಅಕ್ರಮ ಸಂಬಂಧ 1997ರಲ್ಲಿ ಬಹಿರಂಗವಾಗಿತ್ತು. ಮುಂಡೆ ಈ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಆ ದಿನಗಳಲ್ಲಿ ಈ ಪ್ರಕರಣ ಭಾರಿ ಸದ್ದು ಮಾಡಿತ್ತು.

ಜಲಗಾಂವ್ ಅತ್ಯಾಚಾರ ಪ್ರಕರಣ

ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ಜಲಗಾಂವ್ ಪಟ್ಟಣದಲ್ಲಿ ಲೈಂಗಿಕ ದಂಧೆಯನ್ನು ನಡೆಸುತ್ತಿದ್ದ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇವರ ಗ್ಯಾಂಗ್‌ ಶಾಲಾ-ಕಾಲೇಜಿಗೆ ಹೋಗುವ ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸಿ, ಅವರ ಮೇಲೆ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕಾಂಗ್ರೆಸ್ಸಿಗರನ್ನು ಬಂಧಿಸಲಾಯಿತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಹಲವು ವರ್ಷಗಳ ಬಳಿಕ ಖುಲಾಸೆಗೊಳಿಸಲಾಯಿತು.

ಬಿಹಾರದಲ್ಲಿ ಬಾಬಿ ಕೊಲೆ

1980ರಲ್ಲಿ ನಡೆದ ಬಾಬಿ ಕೊಲೆ ಪ್ರಕರಣದಲ್ಲಿ ಮಾಜಿ ಸ್ಪೀಕರ್ ಪುತ್ರ ಸೇರಿದಂತೆ ಹಲವು ಯೂತ್ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು ಎನ್ನಲಾಗಿತ್ತು. ಬಾಬಿ ಸೆಕ್ರೆಟರಿಯೇಟ್‌ನಲ್ಲಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆ ನಿಗೂಢವಾಗಿ ಕೊಲೆಯಾಗಿದ್ದಳು. ಇವರನ್ನು ಯುವ ಕಾಂಗ್ರೆಸ್‌ ಮುಖಂಡರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆಪಾದಿಸಲಾಗಿತ್ತು.


ಪಿಕೆ ಕುನ್ಹಾಲಿಕುಟ್ಟಿ

1997ರಲ್ಲಿ ಐಸ್ ಕ್ರೀಮ್ ಪಾರ್ಲರ್ ಲೈಂಗಿಕ ಹಗರಣವು ಕೇರಳವನ್ನು ಬೆಚ್ಚಿಬೀಳಿಸಿತು. ಈ ಪ್ರಕರಣದಲ್ಲಿ ಐಯುಎಂಎಲ್‌ಗೆ ಸೇರಿದ ಸಚಿವ ಪಿ.ಕೆ.ಕುನ್ಹಾಲಿಕುಟ್ಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಯುವತಿಯರನ್ನು ವೇಶ್ಯಾವಾಟಿಕೆಗೆ ಸೆಳೆಯಲು ಕೋಝಿಕ್ಕೋಡ್‌ನಲ್ಲಿರುವ ಐಸ್‌ಕ್ರೀಂ ಪಾರ್ಲರ್‌ ಅನ್ನು ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಕುನ್ಹಾಲಿಕುಟ್ಟಿ ಕೈಗಾರಿಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ಈ ಪ್ರಕರಣದಿಂದ ಖುಲಾಸೆಯಾಗಿದ್ದರು.

ಸುರೇಶ್ ರಾಮ್

1978ರಲ್ಲಿ ಜಗಜೀವನ್ ರಾಮ್ ಅವರ ಮಗ ಸುರೇಶ್ ರಾಮ್ ಲೈಂಗಿಕ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದರಿಂದಾಗಿ, ಸ್ವತಂತ್ರ ಭಾರತದ ಮೊದಲ ದಲಿತ ಪ್ರಧಾನಿ ಆಗುವ ಅವಕಾಶದಿಂದ ಜಗಜೀವನ್ ರಾಮ್ ವಂಚಿತರಾದರು ಎಂದು ವ್ಯಾಖ್ಯಾನಿಸಲಾಗುತ್ತದೆ. ಸುರೇಶ್ ಅವರ ನಗ್ನ ಚಿತ್ರಗಳನ್ನು ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾಯಿತು. ಈ ಹಗರಣವನ್ನು ಬಯಲು ಮಾಡುವಲ್ಲಿ ಇಂದಿರಾ ಗಾಂಧಿಯವರ ಸೊಸೆ ಮೇನಕಾ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು.

Exit mobile version