Site icon Vistara News

Press Freedom: ಚೀನಾ ಸೇರಿದಂತೆ ಈ ದೇಶಗಳು ಪತ್ರಕರ್ತರಿಗೆ ಸುರಕ್ಷಿತವಲ್ಲ

Press Freedom

ಬೀಜಿಂಗ್: ಪತ್ರಕರ್ತರಿಗೆ (journalists) ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ (dangerous countries) ಚೀನಾ (china) ಕೂಡ ಒಂದಾಗಿದೆ ಎಂದು ವಾಯ್ಸ್ ಆಫ್ ಅಮೆರಿಕ (VOA) ವರದಿ ಮಾಡಿದೆ. 2024ರ ಶ್ರೇಯಾಂಕ ಪ್ರಕಟಿಸಿರುವ ಗ್ಲೋಬಲ್ ಮೀಡಿಯಾ ವಾಚ್‌ಡಾಗ್ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ಏಷ್ಯಾದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅವನತಿಯಾಗುತ್ತಿದೆ. ಇದರಲ್ಲಿ ಒಟ್ಟು 31 ದೇಶಗಳಲ್ಲಿ 26 ವಾರ್ಷಿಕ ಸೂಚ್ಯಂಕದಲ್ಲಿದೆ ಎಂದು ಹೇಳಿದೆ.

ಪತ್ರಿಕಾ ಸ್ವಾತಂತ್ರ್ಯ (Press Freedom) ಸೂಚ್ಯಂಕದ ಪ್ರಕಾರ, ಏಷ್ಯಾವು ಪತ್ರಿಕೋದ್ಯಮ ವೃತ್ತಿ ನಡೆಸಲು ಎರಡನೇ ಅತ್ಯಂತ ಕಷ್ಟಕರವಾದ ಪ್ರದೇಶವಾಗಿದೆ. ಈ ಪ್ರದೇಶದ ಐದು ದೇಶಗಳಾದ ಮ್ಯಾನ್ಮಾರ್ ( Myanmar), ಚೀನಾ (China), ಉತ್ತರ ಕೊರಿಯಾ (North Korea) ಮತ್ತು ವಿಯೆಟ್ನಾಂ (Vietnam) ಸೇರಿದೆ. 2024ರ ಶ್ರೇಯಾಂಕದಲ್ಲಿ ಮಾಧ್ಯಮ ವೃತ್ತಿಪರರಿಗೆ ವಿಶ್ವದ 10 ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಮ್ಯಾನ್ಮಾರ್, ಚೀನಾ, ಉತ್ತರ ಕೊರಿಯಾ ಮತ್ತು ವಿಯೆಟ್ನಾಂ ಕೂಡ ಸೇರಿದೆ.


ಏಷ್ಯಾ-ಪೆಸಿಫಿಕ್ ಪ್ರದೇಶದ ಯಾವುದೇ ದೇಶಗಳು ಪತ್ರಿಕಾ ಸ್ವಾತಂತ್ರ್ಯದ ಟಾಪ್ 15 ರಾಂಕ್‌ನಲ್ಲಿ ಇಲ್ಲ. ವಿಶ್ವದ ಮೂರು ಕಮ್ಯುನಿಸ್ಟ್ ಸರ್ಕಾರಗಳು ಚೀನಾ, ಉತ್ತರ ಕೊರಿಯಾ ಮತ್ತು ವಿಯೆಟ್ನಾಂ 180 ದೇಶಗಳ ಆರ್ ಎಸ್ ಎಫ್ ನ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಶ್ರೇಯಾಂಕದ ಕೆಳಭಾಗದಲ್ಲಿ ಬಹಳ ಹಿಂದಿನಿಂದಲೂ ಇವೆ. ಈ ವರ್ಷ ಚೀನಾ 172, ವಿಯೆಟ್ನಾಂ 174 ಮತ್ತು ಉತ್ತರ ಕೊರಿಯಾ 177ನೇ ಸ್ಥಾನದಲ್ಲಿದೆ.

ಈ ದೇಶಗಳು ಮತ್ತು ಪ್ರಾಂತ್ಯಗಳು ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದಲ್ಲಿ ಕುಸಿತವನ್ನು ತೋರಿಸಿವೆ. ಪೂರ್ವ ಏಷ್ಯಾದಲ್ಲಿ ಮಾಧ್ಯಮವು ಕಾರ್ಯನಿರ್ವಹಿಸಲು ಕಷ್ಟಕರವಾದ ಸ್ಥಳವಾಗಿದೆ. ಹೆಚ್ಚುವರಿಯಾಗಿ, ಹಾಂಗ್ ಕಾಂಗ್ ಒಮ್ಮೆ ಏಷ್ಯಾ ಪ್ರದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾದರಿಯಾಗಿತ್ತು. ಆದರೆ ರಾಜಕೀಯ ಅಶಾಂತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಹೊಸ ಕಾನೂನುಗಳ ಅನಂತರ ನಗರದ ಶ್ರೇಯಾಂಕವು ಇತ್ತೀಚೆಗೆ 80 ರಿಂದ 148ಕ್ಕೆ ಇಳಿಯಿತು. ಅಂದಹಾಗೆ ಭಾರತ 162ನೇ ರ್ಯಾಂಕ್‌ನಲ್ಲಿದೆ.

2020ರಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಹೇರಲು ಬೀಜಿಂಗ್‌ನ ಕ್ರಮದಿಂದ ಕನಿಷ್ಠ 12ಕ್ಕೂ ಹೆಚ್ಚು ಮಾಧ್ಯಮಗಳು ಮುಚ್ಚಲ್ಪಟ್ಟಿವೆ. 2019ರಲ್ಲಿ ಸಾಮೂಹಿಕ ರಾಜಕೀಯ ಅಶಾಂತಿಯ ಅನಂತರ ನಗರವನ್ನು ಸ್ಥಿರಗೊಳಿಸಲು ಕಾನೂನು ಅಗತ್ಯವಾಗಿದೆ ಎಂದು ಬೀಜಿಂಗ್ ಹೇಳಿದೆ ಎಂದು VOA ವರದಿ ಮಾಡಿದೆ.

ಇದನ್ನೂ ಓದಿ: Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

ಹಾಂಗ್ ಕಾಂಗ್‌ನ ಮಾಧ್ಯಮ ಸ್ವಾತಂತ್ರ್ಯಗಳು ಇನ್ನೂ ಸುಧಾರಿಸಿಲ್ಲ ಎಂದು ಆರ್‌ಎಸ್‌ಎಫ್‌ನ ವಕೀಲ ಅಲೆಕ್ಸಾಂಡ್ರಾ ಬಿಲಾಕೋವ್ಸ್ಕಾ ಹೇಳಿದ್ದಾರೆ. ಹಾಂಗ್ ಕಾಂಗ್‌ಗೆ ಕೆಟ್ಟದ್ದು ರಾಜಕೀಯ ಮತ್ತು ಕಾನೂನು ಅಂಶಗಳಾಗಿವೆ. ಹಾಂಗ್ ಕಾಂಗ್‌ನ ಸ್ಥಾನವು ತುಂಬಾ ಕಡಿಮೆಯಾಗಿದೆ. ಇಲ್ಲಿನ ಪರಿಸ್ಥಿತಿಯು ತುಂಬಾ ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.

Exit mobile version