ನವದೆಹಲಿ: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗೆ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅರ್ಜಿ ಕರೆದು ಜಾಹೀರಾತು ನೀಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ. ರಾಹುಲ್ ದ್ರಾವಿಡ್ (Rahul Dravid) ಅವರು ವಿಸ್ತರಿತ ಕೋಚಿಂಗ್ ಗುತ್ತಿಗೆಯೊಂದಿಗೆ ಇದೀಗ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ಟಿ20 ವಿಶ್ವ ಕಪ್ (T20 World Cup 2024) ಬಳಿಕ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಈ ವರ್ಷದ ಜೂನ್ ನಲ್ಲಿ ಅವರು ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ. ಹೀಗಾಗಿ ಹೊಸ ಅರ್ಜಿಯನ್ನು ಕರೆಯಲು ಬಿಸಿಸಿಐ ಮುಂದಾಗಿದೆ. ಅಂದ ಹಾಗೆ ದ್ರಾವಿಡ್ ಅವರು ಟೀಮ್ ಇಂಡಿಯಾದ (Team India) ಹೆಡ್ ಕೋಚ್ ಆಗಲು ಎರಡು ವರ್ಷಗಳ ಒಪ್ಪಂದವನ್ನು ಹೊಂದಿದ್ದರು. 2023ರ ವರ್ಷ ನವೆಂಬರ್ನ ಏಕದಿನ ವಿಶ್ವಕಪ್ ಮುಗಿದ ನಂತರ ಅದು ಕೊನೆಗೊಂಡಿತು. ಬಳಿಕ ಬಿಸಿಸಿಐ ಅವರ ಸಹಾಯಕ ಸಿಬ್ಬಂದಿಯೊಂದಿಗೆ ವಿಸ್ತರಣೆಯನ್ನು ನೀಡಿತ್ತು.
🚨BCCI to release AD for new coach🚨
— Cricbuzz (@cricbuzz) May 10, 2024
"Rahul's tenure is only up to June. So if he wants to apply, he is free to do so." – Jay Shah@vijaymirror with the details – https://t.co/9jFxEyehCb pic.twitter.com/WYnXQ4PQ1u
“ಮುಂದಿನ ಕೆಲವೇ ದಿನಗಳಲ್ಲಿ ಕೋಚ್ ಹುದ್ದೆಗಳಿಗೆ ನಾವು ಅರ್ಜಿಗಳನ್ನು ಕರೆಯಲಿದ್ದೇವೆ. ಯಾಕೆಂದರೆ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ದ್ರಾವಿಡ್ ಅವರು ಮುಂದುವರಿಯಲು ಬಯಸಿರೆ ಅವರು ಮತ್ತೆ ಅರ್ಜಿ ಸಲ್ಲಿಸಬೇಕು. ನಾವು ಮೂರು ವರ್ಷಗಳ ಕಾಲ ದೀರ್ಘಾವಧಿಯ ಸೇವೆ ಸಲ್ಲಿಸುವ ತರಬೇತುದಾರನನ್ನು ಹುಡುಕುತ್ತಿದ್ದೇವೆ” ಎಂದು ಬಿಸಿಸಿಐ ಕಾರ್ಯದರ್ಶಿ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ಗೆ ಸಹಾಯಕ ಕೋ ತಂಡವನ್ನು ಹೊಸ ತರಬೇತುದಾರರನ್ನು ನೇಮಿಸಿದ ನಂತರ ಹೆಡ್ ಕೋಚ್ ಹುದ್ದೆಯನ್ನು ಅಂತಿಮಗೊಳಿಸಲಾಗುವುದು ಎಂಬುದಾಗಿಯೂ ಅವರು ಹೇಳಿದ್ದಾರೆ.
ಈ ಹುದ್ದೆಗೆ ಯಾರು ಇರಬೇಕು ಎಂಬುದನ್ನು ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ತೀರ್ಮಾನಿಸಲಿದೆ. ವಿದೇಶಿ ಅಥವಾ ಸ್ವದೇಶಿ ತರಬೇತುದಾರರಿಗೆ ಅವಕಾಶ ನೀಡುವ ವಿಚಾರವನ್ನೂ ಅವರು ತೀರ್ಮಾನಿಸಲಿದ್ದಾರೆ. ಆದರೆ ಎಲ್ಲಾ ಸ್ವರೂಪಗಳಿಗೆ ಒಬ್ಬರೇ ತರಬೇತುದಾರರು ಇರುತ್ತಾರೆ. ವೈಟ್-ಬಾಲ್ ಸ್ವರೂಪಗಳು ಮತ್ತು ಟೆಸ್ಟ್ ಕ್ರಿಕೆಟ್ಗೆ ವಿಭಿನ್ನ ತರಬೇತುದಾರರು ಎಂಬ ಯೋಚನೆ ಇಲ್ಲ ಎಂದು ಶಾ ಹೇಳಿದರು.
“ಸಿಎಸಿ ವಿದೇಶಿ ಕೋಚ್ ಆಯ್ಕೆ ಮಾಡಿದರೆ ನಾವು ಆ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಆ ನಿರ್ಧಾರವನ್ನು ಬಿಸಿಸಿಯ ಒಪ್ಪಿಕೊಳ್ಳಲಿದೆ. ಭಾರತದಲ್ಲಿ ಸದ್ಯ ಪರಿಸ್ಥಿತಿಗೆ ಯಾವುದೇ ಪೂರ್ವನಿದರ್ಶನ ಇರುವುದಿಲ್ಲ ಎಂದು ಶಾ ಹೇಳಿದರು.
ಇದನ್ನೂ ಓದಿ: Brij Bhushan : ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಲು ಕೋರ್ಟ್ ಆದೇಶ
ಖಾಲಿ ಇರುವ ಏಕೈಕ ರಾಷ್ಟ್ರೀಯ ಆಯ್ಕೆಗಾರ ಹುದ್ದೆಗೆ ಈಗಾಗಲೇ ಕೆಲವು ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಬಹಿರಂಗಪಡಿಸಿದರು. ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
“ಆಯ್ಕೆಗಾರರ ಹುದ್ದೆಗೆ ಈಗಾಗಲೇ ಕೆಲವು ಸಂದರ್ಶನಗಳು ನಡೆದಿವೆ. ನಾವು ಅದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ” ಎಂದು ಅವರು ಹೇಳಿದರು.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗುರಿ
2027 ರಿಂದ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅನ್ನು ಬೇರೆ ಸ್ಥಳದಲ್ಲಿ ಆಯೋಜಿಸುವ ಸಾಮರ್ಥ್ಯದ ಬಗ್ಗೆ ಐಸಿಸಿಯೊಂದಿಗೆ ಚರ್ಚಿಸಲು ಬಿಸಿಸಿಐ ಯೋಜಿಸಿದೆ ಎಂದು ಶಾ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ವಿಶ್ವ ಕಪ್ನ ಮೊದಲ ಎರಡು ಆವೃತ್ತಿಗಳಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದೆ.
“ನಾವು 2027ರ ಟೆಸ್ಟ್ ಚಾಂಪಿಯನ್ಷಿಪ್ ಬಗ್ಗೆ ಐಸಿಸಿಯೊಂದಿಗೆ ಈ ಬಗ್ಗೆ ಮಾತನಾಡಿದ್ದೇವೆ. ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎಂಬ ಮೂರು ಪ್ರಮುಖ ಟೆಸ್ಟ್ ಕೇಂದ್ರಗಳಿವೆ. ಆ ವಿಂಡೋದಲ್ಲಿ ನೀವು ಅದನ್ನು ಆಸ್ಟ್ರೇಲಿಯಾದಲ್ಲಿ ಅಥವಾ ಭಾರತದಲ್ಲಿಯೂ ಹಿಡಿದಿಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲೂ ಆ ಸಮಯದಲ್ಲಿ ಮಳೆಯಾಗುತ್ತದೆ” ಎಂದು ಅವರು ಹೇಳಿದರು.