Site icon Vistara News

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Railway New Rules

ನವದೆಹಲಿ: ಭಾರತೀಯ ರೈಲ್ವೆಯು (Railway) ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಲವು ನಿಯಮವನ್ನು (Railway New Rules) ಜಾರಿಗೆ ತಂದಿದೆ. ಪ್ರಯಾಣಿಕರ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ರೈಲು ಪ್ರಯಾಣವನ್ನು ಆರಾಮದಾಯಕವಾಗಿಲು ಈ ಬದಲಾವಣೆಗಳನ್ನು ತರಲಾಗಿದೆ. ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಬರ್ತ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ನಿಮ್ಮ ಬರ್ತ್ ಅನ್ನು ಭದ್ರಗೊಳಿಸಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು.

ಭಾರತೀಯ ರೈಲ್ವೆಯ ಕೈಪಿಡಿ, ಸಂಪುಟ-1ರ ಪ್ಯಾರಾ 652ರ ತಿದ್ದುಪಡಿಯ ಮೂಲಕ 3 ಹಂತದ ಸ್ಲೀಪರ್ ಕೋಚ್ ಗಳ ಮಧ್ಯಮ ಬರ್ತ್ ಗಳಲ್ಲಿ ಮಲಗುವ ಪ್ರಯಾಣಿಕರ ವಸತಿಗೆ ಸಂಬಂಧಿಸಿದ ಸುತ್ತೋಲೆಯಲ್ಲಿ ಭಾರತೀಯ ರೈಲ್ವೆ ಈ ತಿದ್ದುಪಡಿಯನ್ನು ಮಾಡಿದೆ. ಎಸಿ ಮತ್ತು ಸ್ಲೀಪರ್ ಕೋಚ್ ಗಳಲ್ಲಿ ಮಧ್ಯಮ ಬರ್ತ್ ಅನ್ನು ನಿಗದಿಪಡಿಸಿದ ಪ್ರಯಾಣಿಕರು ರೈಲು ಪ್ರಯಾಣದ ಸಮಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಾತ್ರ ಬರ್ತ್ ಅನ್ನು ತೆರೆದಿರಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ಹಿಂದೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಒಟ್ಟು 9 ಗಂಟೆಗಳ ಕಾಲ ತೆರೆದಿಡಬಹುದಾಗಿದ್ದ ಬರ್ತ್ ಅನ್ನು 8 ಗಂಟೆಗಳ ಕಾಲಾವಧಿಗೆ ಇಳಿಸಲಾಗಿದೆ. ಕೆಳ ಬರ್ತ್ ನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಹಿನೆಲೆಯಲ್ಲಿ ಈ ಬಗ್ಗೆ ಪ್ರಯಾಣಿಕರು ದೂರು ದಾಖಲಿಸಿದ ಕಾರಣ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ. ಈ ಷರತ್ತಿನ ಮೂಲಕ ಕೆಳ ಬರ್ತ್ ಪ್ರಯಾಣಿಕರು ಬೆಳಗ್ಗೆ 6 ಗಂಟೆಯ ನಂತರ ತಮ್ಮ ಬರ್ತ್ ಅನ್ನು ಮಡಚುವಂತೆ ಮಧ್ಯಮ ಬರ್ತ್ ಪ್ರಯಾಣಿಕರಿಗೆ ವಿನಂತಿಸಬಹುದು. ಸೈಡ್ ಲೋವರ್ ಬರ್ತ್ ನ ಪ್ರಯಾಣಿಕರು ಹಗಲಿನಲ್ಲಿ ಸೈಡ್ ಮೇಲಿನ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಆದರೆ ಸೈಡ್ ಮೇಲಿನ ಬರ್ತ್ ಪ್ರಯಾಣಿಕರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸೈಡ್ ಲೋವರ್ ಬರ್ತ್ ನಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಭಾರತೀಯ ರೈಲ್ವೆ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಎಲ್ಲಾ ವಿಧದ ಸೈಡ್ ಬರ್ತ್ ಪ್ರಯಾಣಿಕರಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಆದರೆ ಭಾರತೀಯ ರೈಲ್ವೆಯ ಈ ನಿಯಮ ಅನಾರೋಗ್ಯ ಪೀಡಿತ ವ್ಯಕ್ತಿಗಳು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ವಿನಾಯಿತಿ ನೀಡಲು ಹಾಗೂ ಅವರಿಗೆ ಹೆಚ್ಚು ಕಾಲ ಮಲಗಲು ಅವಕಾಶ ನೀಡುವಂತೆಯೂ ಅವಕಾಶ ಕಲ್ಪಿಸಿದೆ.
ಇತ್ತೀಚೆಗೆ ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಮಧ್ಯಮ ಬರ್ತ್ ನಲ್ಲಿ ಮಲಗಿದ್ದ ಪ್ರಯಾಣಿಕ ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಬರ್ತ್ ಕುಸಿದು ಕೆಳ ಬರ್ತ್‌ನಲ್ಲಿ ಮಲಗಿದ್ದ 62 ವರ್ಷದ ವ್ಯಕ್ತಿಯ ಮೇಲೆ ಬಿದ್ದಿತ್ತು. ಇದರಿಂದ ಆ ವ್ಯಕ್ತಿಯ ಕತ್ತಿನ ಮೂಳೆ ಮುರಿದು ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದನ್ನು ಸ್ಮರಿಸಬಹುದು.

Exit mobile version