ಡೆಹ್ರಾಡೂನ್: ಮತಾಂತರಗೊಳಿಸುವ ಸುದ್ದಿಯನ್ನು ಆಗಾಗ ಕೇಳುತ್ತಿರುತ್ತೇವೆ. ಮುಸ್ಲಿಮರು ಹಿಂದೂಗಳನ್ನು ಇಸ್ಲಾಂಗೆ ಮತಾಂತರ(Religious Conversion Case )ಗೊಳಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಲವ್ ಜಿಹಾದ್‌ನ ಮೂಲಕ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಬಲೆಗೆ ಬೀಳಿಸಿ ಮತಾಂತರಗೊಳಿಸುತ್ತಿದ್ದರೆ, ಇನ್ನೊಂದು ಕಡೆ ಹಿಂದೂ (Hindu) ಹುಡುಗಿಯರ ಖಾಸಗಿ ಪೋಟೊಗಳನ್ನು ಇಟ್ಟುಕೊಂಡು ಮುಸ್ಲಿಂ ಯುವತಿಯರು ಅವರಿಗೆ ಮತಾಂತರಗೊಳ್ಳುವಂತೆ ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ಇದೀಗ ಇಂತಹದೊಂದು ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬೆಳಕಿಗೆ ಬಂದಿದೆ.
ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮತ್ತು ತನ್ನ ಮುಸ್ಲಿಂ ಸ್ನೇಹಿತನನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಮುಬೀನಾ ಯೂಸುಫ್ ಆರೋಪಿ ಹುಡುಗಿಯಾಗಿದ್ದು, ಈಕೆ ಸಂತ್ರಸ್ತೆ ಹಿಂದೂ ಹುಡುಗಿಯ ಸಹಪಾಠಿಯಾಗಿದ್ದಾಳೆ.
ಆರೋಪಿ ಸಂತ್ರಸ್ತೆಗೆ ಮುಸ್ಲಿಂ ಧರ್ಮಕ್ಕೆ ಮಂತಾರಗೊಂಡು ತನ್ನ ಮುಸ್ಲಿಂ ಸ್ನೇಹಿತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ನಿರಾಕರಿಸಿದರೆ ಸಂತ್ರಸ್ತೆಗೆ ಆಕೆಯ ಖಾಸಗಿ ಪೋಟೊಗಳನ್ನು ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಹಾಗೂ ಜೈಲಿನಲ್ಲಿರುವ ತನ್ನ ಸಂಬಂಧಿಕರಿಂದ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸಂತ್ರಸ್ತೆ ರಾಜಪುರ ಪೊಲೀಸ್ ಠಾಣೆಯಲ್ಲಿ ತನ್ನ ಸಹಪಾಠಿಯ ವಿರುದ್ಧ ದೂರು ನೀಡಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಬಾಲಕಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, ಸಂತ್ರಸ್ತ ಹಿಂದೂ ಹುಡುಗಿ ಡೆಹ್ರಾಡೂನ್‌ನ ರಾಜಪುರದಲ್ಲಿ ವಾಸಿಸುತ್ತಿದ್ದಾಳೆ, ಆರೋಪಿ ಬಾಲಕಿ ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿದ್ದು, ಡೆಹ್ರಾಡೂನ್‌ನ ಖಾಸಗಿ ಕಾಲೇಜಿನಲ್ಲಿ ಕಾನೂನಿನ ಬಗ್ಗೆ ಅಧ್ಯಯನ ಮಾಡುತ್ತಿದ್ದಾಳೆ. ಆರೋಪಿ ಸಂತ್ರಸ್ತೆಯ ವಿಶ್ವಾಸ ಗಳಿಸಲು ಆಕೆಯ ಮನೆಗೆ ಆಗಾಗ ಬರುತ್ತಿದ್ದಳು. ಹಾಗೇ ಸಂತ್ರಸ್ತೆಯನ್ನು ತನ್ನ ಊರಾದ ಜಮ್ಮು-ಕಾಶ್ಮೀರಕ್ಕೂ ಕರೆದೊಯ್ದು ಅಲ್ಲಿ ತನ್ನ ಮುಸ್ಲಿಂ ಗೆಳೆಯನ ಪರಿಚಯ ಮಾಡಿಸಿ ಆತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ಇದನ್ನೂ ಓದಿ: JP Nadda: ವೇದಿಕೆ ಮೇಲೆ ಗುಟ್ಕಾ ತಿಂದ ಕೇಂದ್ರ ಆರೋಗ್ಯ ಸಚಿವ ನಡ್ಡಾ? ವಿಡಿಯೊ ನೋಡಿ
ಈ ನಡುವೆ ಆಕೆ ಯಾವಾಗ ಸಂತ್ರಸ್ತೆಯ ಖಾಸಗಿ ಪೋಟೊ ತೆಗೆದಳು ಎಂಬುದು ಸಂತ್ರಸ್ತೆಗೂ ತಿಳಿದಿಲ್ಲ ಎಂಬುದಾಗಿ ತಿಳಿದುಬಂದಿದೆ. ಅಲ್ಲದೇ ಸಂತ್ರಸ್ತೆಗೆ ಆರೋಪಿ ಜೀವ ಬೆದರಿಕೆ ಹಾಕಿದಂತೆ ಹರ್ಯಾಣದ ಗುರುಗ್ರಾಮದ ಜೈಲಿನಲ್ಲಿದ್ದ ಕೆಲವು ದುಷ್ಕರ್ಮಿಗಳಿಂದ ಬೆದರಿಕೆ ಕರೆ ಕೂಡ ಬಂದಿತ್ತು. ಹೀಗಾಗಿ ಸಂತ್ರಸ್ತೆ ಖಿನ್ನತೆಗೆ ಒಳಗಾಗಿದ್ದಳು. ಆಗ ಆಕೆಯ ತಾಯಿ ಆಕೆಯನ್ನು ವಿಚಾರಿಸಿದಾಗ ಈ ವಿಚಾರ ಬಾಯ್ಬಿಟ್ಟಿದ್ದಾಳೆ. ಹಾಗಾಗಿ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆರೋಪಿಯ ವಿರುದ್ಧ ಪೊಲೀಸರು ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಉತ್ತರಾಖಂಡ್ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.