Site icon Vistara News

Sara Ali Khan: ವಿಮಾನದಲ್ಲಿ ಸಾರಾ ಅಲಿ ಖಾನ್‌ ಮೇಲೆ ಜ್ಯೂಸ್‌ ಚೆಲ್ಲಿದ ಗಗನಸಖಿ! ಮುಂದೇನಾಯ್ತು? ವಿಡಿಯೊ ನೋಡಿ

Sara Ali Khan


ಮುಂಬೈ: ನಟಿ ಸಾರಾ ಅಲಿ ಖಾನ್ (Sara Ali Khan) ಅವರು ತಮ್ಮ ನಟನೆಯ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ. ಇತ್ತೀಚಿಗೆ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ಗಗನ ಸಖಿಯೊಬ್ಬರು ಸಾರಾ ಅಲಿ ಖಾನ್‌ ಉಡುಪಿನ ಮೇಲೆ ಆಕಸ್ಮಾತ್‌ ಆಗಿ ಜ್ಯೂಸ್‌ ಬೀಳಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವೈರಲ್ ವಿಡಿಯೊದಲ್ಲಿ ನಟಿ ಸಾರಾ ಅಲಿ ಖಾನ್ ಸುರುಳಿ ಕೂದಲು ಮತ್ತು ದೊಡ್ಡ ಹೂಪ್ ಕಿವಿಯೋಲೆಗಳನ್ನು ಧರಿಸಿ ಬಿಳಿ ಮತ್ತು ಗುಲಾಬಿ ಬಣ್ಣದ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ವೇಳೆ ಗಗಮಸಖಿ ಜ್ಯೂಸ್‌ಗಳನ್ನು ಪ್ರಯಾಣಿಕರಿಗೆ ನೀಡುತ್ತಿರುವಾಗ ಆಕಸ್ಮಿಕವಾಗಿ ನಟಿಯ ಡ್ರೆಸ್‍ನ ಮೇಲೆ ಜ್ಯೂಸ್ ಅನ್ನು ಚೆಲ್ಲಿದ್ದಾಳೆ. ಇದರಿಂದ ನಟಿ ಅಸಮಾಧಾನಗೊಂಡಿದ್ದಾರೆ. ಆಗ ನಟಿ ಗಗನಸಖಿಯನ್ನು ಸಿಟ್ಟಿನಿಂದ ದುರುಗುಟ್ಟಿ ನೋಡುತ್ತ ಎದ್ದು ವಾಶ್ ರೂಮ್‌ಗೆ ಹೋಗಿ ಮರಳಿ ಬರುತ್ತಿರುವಾಗ ನಟಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ.

ವೈರಲ್ ವಿಡಿಯೊಗೆ ಹಲವರು ಕಾಮೆಂಟ್‍ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಮಾನಿಗಳು ಈ ಘಟನೆಯು ಪ್ರಚಾರಕ್ಕಾಗಿ ಮಾಡಿರಬಹುದು ಅಥವಾ ಮುಂಬರುವ ಯೋಜನೆಯ ದೃಶ್ಯವಾಗಿರಬಹುದು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಆದಾಗ್ಯೂ, ಘಟನೆಯ ಸ್ವರೂಪದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವನ್ನು ಮಾಡಲಾಗಿಲ್ಲ.

ವೃತ್ತಿಪರ ರಂಗದಲ್ಲಿ ಸಾರಾ ಅಲಿ ಖಾನ್ ನಟನೆಯ ಹಲವು ಆಫರ್‌ಗಳನ್ನು ಹೊಂದಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಸಿಖ್ಯಾ ಎಂಟರ್‌ಟೈನ್‍ಮೆಂಟ್ ನಿರ್ಮಿಸುತ್ತಿರುವ ಆಕ್ಷನ್-ಕಾಮಿಡಿ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಎದುರು ಅವರು ಮೊದಲ ಬಾರಿಗೆ ನಟಿಸಲಿದ್ದಾರೆ.

ಇದನ್ನೂ ಓದಿ: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

ಹಾಗೇ ನಟಿ ಸಾರಾ ಅಲಿ ಖಾನ್ ಅವರು ಅನುರಾಗ್ ಬಸು ನಿರ್ದೇಶನದ “ಮೆಟ್ರೋ ಇನ್ ಡಿನೋ” ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್ ಮತ್ತು ನೀನಾ ಗುಪ್ತಾ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಸಿನಿಮಾರಂಗದಲ್ಲಿ ಸಾರಾ ಅವರ ಅಭಿನಯವನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Exit mobile version