Site icon Vistara News

Sonakshi Sinha: ಸೋನಾಕ್ಷಿ ಸಿನ್ಹಾಗೆ ದುಬಾರಿ ಗಿಫ್ಟ್‌ ನೀಡಿದ ಪತಿ ಜಹೀರ್ ಇಕ್ಬಾಲ್!

Sonakshi Sinha

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಕೊನೆಗೂ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಇದೀಗ, ವಿವಾಹ ಸಂದರ್ಭದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಕ್ಲಿಪ್‌ನಲ್ಲಿ, ಸಿನ್ಹಾ ಅವರು ಐಷಾರಾಮಿ BMW i7 ಕಾರಿನೊಳಗೆ ಕುಳಿತಿರುವುದು ಕಂಡುಬಂದಿದೆ. ಇದನ್ನು ಪತಿ ಇಕ್ಬಾಲ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಟರಿ ಚಾಲಿತ ಐಷಾರಾಮಿ ಸೆಡಾನ್ i7 ಆರಂಭಿಕ ಬೆಲೆ ರೂ 2.03 ಕೋಟಿ(ಎಕ್ಸ್ ಶೋ ರೂಮ್‌ ಬೆಲೆ)ಯಷ್ಟಿದೆ. ಆದರೆ ಟಾಪ್ ಮಾಡೆಲ್ ರೂ 2.50 ಕೋಟಿ (ಎಕ್ಸ್ ಶೋ ರೂಂ)ವರೆಗೆ ಇದೆಯಂತೆ.  ಆದರೆ ದಬಾಂಗ್‌ ನಟಿಗೆ ಪತಿ ಯಾವ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ವೀಡಿಯೊದಲ್ಲಿ, ಸಿನ್ಹಾ ಬಿಳಿ ಬಣ್ಣದ EVಯಲ್ಲಿ ತನ್ನ ಜೀವನ ಸಂಗಾತಿಯೊಂದಿಗೆ ರೈಡ್ ಗೆ ಹೊರಡುವ ಆನಂದದ ಕ್ಷಣಗಳನ್ನು ಕಾಣಬಹುದು.  ಮುಂಬೈನ ಬಾಸ್ಟಿಯನ್‌ನಲ್ಲಿ ಅವರು ಆರತಕ್ಷತೆಗೆ ಆಗಮಿಸುತ್ತಿದ್ದ ಸಮಯದಲ್ಲಿ ಕ್ಲಿಪ್ ಅನ್ನು ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಮದುವೆ ಲವ್ ಜಿಹಾದ್?; ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಅತ್ಯಾಧುನಿಕ ವಿನ್ಯಾಸದ ಕಾರ್ ಇದಾಗಿದ್ದು,  ಕಂಪನಿಯ ಸಿಗ್ನೇಚರ್ ಶೈಲಿಯ ಪ್ರಕಾಶಿತ ಕಿಡ್ನಿ-ಆಕಾರದ ಗ್ರಿಲ್ ಹಾಗು LED ಹೆಡ್‌ಲೈಟ್ ಸೆಟಪ್ ಗಳನ್ನು ಮುಂಭಾಗದಲ್ಲಿ ಹೊಂದಿದೆ. DRL ಗಳ ಪ್ರಭಾವಶಾಲಿ ಸೆಟ್‌ನೊಂದಿಗೆ ಜೋಡಿಸಲಾಗಿದೆ. ಪ್ರಸ್ತುತ ಮಾರಾಟದಲ್ಲಿರುವ G70 ಪೀಳಿಗೆಯ 7-ಸರಣಿಯಂತೆಯೇ EV ವಿನ್ಯಾಸವನ್ನು ಹಂಚಿಕೊಳ್ಳುತ್ತದೆ.

Exit mobile version