Site icon Vistara News

Tamanna Bhatia: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

Tamanna Bhatia


ಮುಂಬೈ: ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಭಾರತ ಚಿತ್ರರಂಗದಲ್ಲೂ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ (Tamanna Bhatia )ಅವರು ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ತೆರೆಯ ಮೇಲೆ ಕಿಸ್ ಮಾಡುವುದಿಲ್ಲ ಎಂದಿದ್ದ ನಟಿ ‘ಲಸ್ಟ್ ಸ್ಟೋರೀಸ್ 2’ ವೆಬ್ ಸರಣಿಯಲ್ಲಿ ಬಿಂದಾಸ್‌ ಕಿಸ್ ಮಾಡಿ ನಿಯಮವನ್ನು ಮುರಿದು ಜನರ ಟೀಕೆಗೆ ಗುರಿಯಾಗಿದ್ದರು. ಇದೀಗ ನಟಿ ‘ಜೀ ಕರ್ದಾ’ ವೆಬ್ ಸರಣಿಯಲ್ಲಿ ಹಿಂದೆಂದೂ ಕಾಣದಷ್ಟು ಬೋಲ್ಡ್ ದೃಶ್ಯಗಳೊಂದಿಗೆ ಟಾಪ್ಲೆಸ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಈ ಸರಣಿಯು ಜೂನ್ 15, 2023ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ತಮನ್ನಾ ಭಾಟಿಯಾ, ಸುಹೇಲ್ ನಯ್ಯರ್, ಅನ್ಯಾ ಸಿಂಗ್ ಮತ್ತು ಆಶಿಮ್ ಗುಲಾಟಿ ನಟಿಸಿರುವ ಈ ಸರಣಿ ಹಲವಾರು ಕಾರಣಗಳಿಗಾಗಿ ಎಲ್ಲರ ಗಮನ ಸೆಳೆದಿದೆ. ಆದರೆ ನಂತರ, ಸರಣಿಯಲ್ಲಿ ತಮನ್ನಾ ಅವರ ಬೋಲ್ಡ್ ಮತ್ತು ಸೆಕ್ಸಿ ನೋಟವನ್ನು ಅನೇಕರು ಹೊಗಳಿದರೂ ಕೂಡ , ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಜನ್ ನಟಿಯ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ವೆಬ್ ಸರಣಿಯಲ್ಲಿ ನಟಿಯ ಬೋಲ್ಡ್ ಪೋಟೋಗಳನ್ನು ಹಂಚಿಕೊಂಡು ಅವರನ್ನು ದೂಷಿಸಿದ್ದಾರೆ. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಲಿಲ್ಲವೆಂದು ನಟಿಯ ವಿರುದ್ಧ ಕಿಡಿಕಾರಿದ್ದಾರೆ.


ಜೀ ಕರ್ದಾದಲ್ಲಿ ಇಬ್ಬರು ಬಾಲ್ಯದ ಸ್ನೇಹಿತರಾದ ಲಾವಣ್ಯ (ತಮನ್ನಾ ಭಾಟಿಯಾ) ಮತ್ತು ರಿಷಬ್ (ಸುಹೇಲ್ ನಯ್ಯರ್) ಅವರ ಕಥೆಗಳನ್ನು ತೋರಿಸುತ್ತದೆ. ಆದರೆ ಕೆಲವೊಂದು ವಿಚಾರಗಳು ತಮ್ಮ ಸಂಬಂಧವನ್ನು ಹಾಳುಮಾಡಲು ಪ್ರಾರಂಭಿಸಿದಾಗ ಅವರು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಭಾವಿಸುತ್ತಾರೆ.

ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ 267 ಕೆಜಿ ಚಿನ್ನ ಸಾಗಣೆ; ಯೂಟ್ಯೂಬರ್‌ ಸೇರಿ ಹಲವರ ಸೆರೆ

ಈ ಸರಣಿಯಲ್ಲಿ ಹುಸೇನ್ ದಲಾಲ್, ಸಯಾನ್ ಬ್ಯಾನರ್ಜಿ ಮತ್ತು ಸಂವೇದನಾ ಸುವಾಲ್ಕಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ತಮನ್ನಾ ಭಾಟಿಯಾ ಕೊನೆಯ ಬಾರಿಗೆ ಭಯಾನಕ-ಹಾಸ್ಯ ಚಿತ್ರ ‘ಅರಮನೆ 4’ ನಲ್ಲಿ ರಾಶಿ ಖನ್ನಾ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವು 2024 ರ ಕಾಲಿವುಡ್‌ನ ಮೊದಲ ಹಿಟ್ ಚಿತ್ರ ಆಯಿತು. ಈಗ ಅವರು ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

Exit mobile version