ಪ್ರತಿಯೊಬ್ಬರಿಗೂ ಮನೆ ಖರೀದಿ (Buy new home) ಮಾಡಬೇಕು ಎನ್ನುವ ಕನಸು (dream) ಇರುತ್ತದೆ. ಆದರೆ ಎಲ್ಲರಿಗೂ ಇದು ನನಸು ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹೊಸ ಮನೆ (new home) ಖರೀದಿ ಮಾಡುವಾಗ ವಾಸ್ತು ಅಂಶಗಳನ್ನು (Vastu Tips) ನಾವು ಗಮನದಲ್ಲಿ ಇರಿಸುವುದು ಒಳ್ಳೆಯದು. ಇದರಿಂದ ನಾವು ನಮ್ಮ ಸ್ವಂತ ಮನೆಯಲ್ಲಿ ಸೌಕರ್ಯ, ಸಂತೋಷ ಮತ್ತು ಶಾಂತಿಯನ್ನು ಪಡೆಯಬಹುದು.
ಹೊಸ ಮನೆ ಖರೀದಿ ಮಾಡುವಾಗ ಮನೆಯ ವಾಸ್ತು ಸರಿಯಾಗಿ ಇದೆಯೇ ಎಂಬುದನ್ನು ಮೊದಲು ನೋಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ವಾಸಿಸುವ ಎಲ್ಲಾ ಸದಸ್ಯರಿಗೂ ತಮ್ಮ ಜೀವನದಲ್ಲಿ ಪ್ರಗತಿ ಸಾಧ್ಯವಾಗುತ್ತದೆ.
ಮನೆಯಲ್ಲಿರುವ ಎಲ್ಲಾ ವಸ್ತುಗಳು ವಾಸ್ತು ಪ್ರಕಾರ ಇಲ್ಲದಿದ್ದರೆ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಮತ್ತು ಅಡೆತಡೆಗಳು ಬರಲು ಪ್ರಾರಂಭಿಸುತ್ತವೆ. ಇದರಿಂದಾಗಿ ಜೀವನವು ತೊಂದರೆಗಳಿಂದ ಸುತ್ತುವರಿಯುತ್ತದೆ. ಹೀಗಾಗಿ ಸ್ವಂತ ಮನೆ ಹೊಂದುವ ಕನಸು ಇರುವವರು ಕೆಲವೊಂದು ವಿಚಾರಗಳ ಬಗ್ಗೆ ತಿಳಿದಿರುವುದು ಉತ್ತಮ.
ಮುಖ್ಯ ಬಾಗಿಲು ಮತ್ತು ಕಿಟಕಿಗಳು
ಮನೆಯ ಮುಖ್ಯ ಬಾಗಿಲು ಮತ್ತು ಕಿಟಕಿಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮಾತ್ರ ಇಡುವುದು ಮಂಗಳಕರ. ಯಾಕೆಂದರೆ ಧನಾತ್ಮಕ ಶಕ್ತಿಯಿಂದ ತುಂಬಿದ ಸೂರ್ಯನ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸುತ್ತವೆ. ಇದು ಮನೆಯ ಮಾಲೀಕರಿಗೆ ದೀರ್ಘಾಯುಷ್ಯ ಮತ್ತು ಮಕ್ಕಳಲ್ಲಿ ಸಂತೋಷವನ್ನು ತುಂಬುತ್ತದೆ.
ಪೂಜಾ ಸ್ಥಳ
ಮನೆಯಲ್ಲಿ ಪೂಜೆ ಮಾಡುವ ಸ್ಥಳವು ಪ್ರಮುಖವಾಗಿದೆ. ಮನೆ ಖರೀದಿಸುವಾಗ ವಾಸ್ತು ಪ್ರಕಾರ ಮನೆಯ ದೇವಸ್ಥಾನವನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿ.
ಈಶಾನ್ಯ ದಿಕ್ಕನ್ನು ದೇವ-ದೇವತೆಗಳಿಗೆ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಪೂಜಾ ಕೊಠಡಿಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಇದು ಮನೆಯ ಜನರಿಗೆ ಸಾಕಷ್ಟು ಪ್ರಗತಿಯನ್ನು ತಂದುಕೊಡುತ್ತದೆ.
ಅಡುಗೆಮನೆಯ ದಿಕ್ಕು
ಅಡುಗೆ ಕೋಣೆಗೆ ಅತ್ಯಂತ ಮಂಗಳಕರವಾದ ಸ್ಥಳವೆಂದರೆ ಆಗ್ನೇಯ ದಿಕ್ಕು. ಈ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಕುಟುಂಬದ ಸದಸ್ಯರು ಆರೋಗ್ಯವಾಗಿರುತ್ತಾರೆ. ಇದಲ್ಲದೇ ವಾಯವ್ಯ ದಿಕ್ಕು ಕೂಡ ಅಡುಗೆ ಕೋಣೆಗೆ ಸರಿಯಾಗಿದೆ.
ಇದನ್ನೂ ಓದಿ: Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ
ಮಲಗುವ ಕೋಣೆ
ಮನೆಯಲ್ಲಿ ಮಲಗುವ ಕೋಣೆ ನೈಋತ್ಯ ಅಥವಾ ವಾಯವ್ಯ ದಿಕ್ಕಿನಲ್ಲಿರಬೇಕು. ಮಲಗುವ ಕೋಣೆಯಲ್ಲಿ ಹಾಸಿಗೆಯ ಮುಂದೆ ಮತ್ತು ಬಾಗಿಲಿನ ಮುಂಭಾಗದಲ್ಲಿ ಕನ್ನಡಿ ಇಡಬೇಡಿ. ಇದು ಪ್ರಗತಿಯನ್ನು ನಿಲ್ಲಿಸುತ್ತದೆ.
ವಿತ್ತೀಯ ಲಾಭದ ಚಿಹ್ನೆಗಳು
ಹಾಸಿಗೆಯ ಮೇಲೆ ಮಲಗುವಾಗ ಪಾದಗಳು ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿರಬಾರದು. ಉತ್ತರ ದಿಕ್ಕಿಗೆ ಪಾದಗಳನ್ನು ಇಟ್ಟು ಮಲಗುವುದರಿಂದ ಆರೋಗ್ಯ ಪ್ರಯೋಜನ ಮತ್ತು ಹಣದ ಲಾಭವನ್ನು ಪಡೆಯಬಹುದು.