ಒಂದು ಕಾಲದಲ್ಲಿ ಪೊಲೀಸ್, ಪೊಲೀಸ್ ಠಾಣೆ ಎಂದರೆ ಜನರು ಹೆದರುತ್ತಿದ್ದರು. ಯಾಕೆಂದರೆ ಅದು ಅಪರಾಧಿಗಳಿರುವ ಸ್ಥಳ, ಅಲ್ಲಿ ಹೋದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಅಂಜುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ದೊಡ್ಡವರು ಬಿಡಿ ಚಿಕ್ಕ ಮಕ್ಕಳು ಸಹ ಪೊಲೀಸರನ್ನು ಕಂಡು ಹೆದರುವುದಿಲ್ಲ. ಹಾಗಾಗಿ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 5 ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧ ಎಫ್ಐಆರ್ ದಾಖಲಿಸಲು ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ, ಅವನು ದೂರು ನೀಡಿದ ಕಾರಣ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ ಅವನ ತಂದೆ ನದಿಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಆಟವಾಡದಂತೆ ತಡೆಯುತ್ತಾರಂತೆ. ಆ ಮುಗ್ಧ ಬಾಲಕ ಪೊಲೀಸ್ ಠಾಣೆಯನ್ನು ತಲುಪಿ ಎಫ್ಐಆರ್ ದಾಖಲಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video)ಆಗಿದೆ.
ವಿಡಿಯೊದಲ್ಲಿ ಮಗು ದೂರು ನೀಡಲು ಪೊಲೀಸ್ ಠಾಣೆಯಲ್ಲಿ ಕುರ್ಚಿಯ ಮೇಲೆ ಕುಳಿತಿದೆ. ಒಬ್ಬ ಪೊಲೀಸ್ ಅಧಿಕಾರಿ ಅವನ ಮುಂದೆ ಕುಳಿತು ಅವನ ಹೆಸರು, ಯಾರ ವಿರುದ್ಧ ದೂರು ನೀಡಲು ಬಯಸುತ್ತಾರೆ ಮತ್ತು ಅಪರಾಧದ ಬಗ್ಗೆ ಕೇಳುತ್ತಾರೆ. ಅಧಿಕಾರಿಗೆ ಉತ್ತರಿಸಿದ ಮಗು ನನ್ನ ಹೆಸರು ಹಸನೈನ್, ತಂದೆ ಇಕ್ಬಾಲ್. ಅವರು ನದಿಗೆ ಹೋಗದಂತೆ ಮತ್ತು ಬೀದಿಯಲ್ಲಿ ಆಡದಂತೆ ತಡೆಯುತ್ತಾರೆ ಎಂದು ವಿವರಿಸುತ್ತದೆ.
मध्य प्रदेश के धार में 5 साल का बच्चा अपने ही पिता के खिलाफ रिपोर्ट दर्ज कराने थाने पहुंच गया।
— Suresh Singh (@sureshsinghj) August 20, 2024
पिता ने बच्चे को नदी में स्नान करने के लिए जाने से रोका और उसे डांटा।नाराज बच्चा पिता के खिलाफ रिपोर्ट दर्ज करवाने थाने पहुच गया।#Dhar pic.twitter.com/1HEYl5UZSS
ಹಾಗಾಗಿ ತಂದೆ ವಿರುದ್ಧ ತನಿಖೆ ನಡೆಸಿ. ಅವರನ್ನು ಜೈಲಿನೊಳಗೆ ಹಾಕಬೇಕು ಎಂದು ಹೇಳಿದ್ದಾನೆ. ಬಾಲಕನ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ನಕ್ಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಅವನಿಗೆ ಭರವಸೆ ನೀಡಿದರು. ಇದರಿಂದ ಸಂತೋಷದ ಮಗು ಹಿಂತಿರುಗುತ್ತದೆ.
ಬಳಕೆದಾರ ಸುರೇಶ್ ಸಿಂಗ್ ಆಗಸ್ಟ್ 20ರಂದು ಎಕ್ಸ್ ಪ್ಲಾಟ್‍ಫಾರ್ಮ್‍ನಲ್ಲಿ (ಹಿಂದಿನ ಟ್ವಿಟರ್) ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗೇ “ಮಧ್ಯಪ್ರದೇಶದ ಧಾರ್ ನಲ್ಲಿ, 5 ವರ್ಷದ ಮಗು ತನ್ನ ಸ್ವಂತ ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿದೆ. ತಂದೆ ಮಗುವನ್ನು ನದಿಯಲ್ಲಿ ಸ್ನಾನ ಮಾಡಲು ಹೋಗದಂತೆ ತಡೆದು ಗದರಿಸಿದರು. ಕೋಪಗೊಂಡ ಮಗು ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತಲುಪಿತು” ಎಂದು ಅವರು ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ.
ಇದನ್ನೂ ಓದಿ: ಈಜಲು ಹೋಗಿದ್ದವನ ಶರ್ಟ್‍ನೊಳಗೆ ನುಸುಳಿದ ಬೃಹತ್ ಹಾವು! ಮುಂದೇನಾಯ್ತು ನೋಡಿ
ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಬಾಲಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಹೆದರದೆ ಪೊಲೀಸ್ ಠಾಣೆಗೆ ಬಂದು ತನ್ನ ಅಪ್ಪನ ವಿರುದ್ಧ ದೂರು ನೀಡಿದ್ದಾನೆ. ಹಾಗೇ ಕೆಲವರು ಬಾಲಕನ ತೊದಲು ಮಾತನ್ನು ಕೇಳಿ ನಕ್ಕಿದ್ದಾರೆ.