Site icon Vistara News

Viral Video: ಬೇಟೆಯಾಡಲು ಗೋಡೆ ಹತ್ತಿದ ದೈತ್ಯ ಹೆಬ್ಬಾವು; ಗಾಬರಿಗೊಳಿಸುವ ವಿಡಿಯೊ

Viral Video


ರೆಟಿಕ್ಯುಲೇಟೆಡ್ ಹೆಬ್ಬಾವು ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವುಗಳಲ್ಲಿ ಒಂದಾಗಿದೆ. ಈ ಹೆಬ್ಬಾವು ವಿಷರಹಿತವಾಗಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಟ್ವಿಟರ್‌ನಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವಿನ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವು ತನ್ನ ಬೇಟೆಯನ್ನು ಹಿಡಿಯಲು ಗೋಡೆಯನ್ನು ಹತ್ತುತ್ತಿರುವುದನ್ನು ತೋರಿಸಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video) ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಈ ಹಾವು ತನ್ನ ದೇಹವನ್ನು ಅದರ ಸುತ್ತಲೂ ಸುತ್ತುವ ಮೂಲಕ ತನ್ನ ಬೇಟೆಯನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ರೆಟಿಕ್ಯುಲೇಟೆಡ್ ಹೆಬ್ಬಾವು ಅತಿ ಉದ್ದದ ಹಾವುಗಳಲ್ಲಿ ಒಂದಾಗಿದೆ. ಕೆಲವು 33 ಅಡಿ ಉದ್ದಗಳವರೆಗೆ ಬೆಳಯುತ್ತವೆ. ಅವು ತೂಕ 165 ಪೌಂಡ್‌ಗಳವರೆಗೆ ಇರಬಹುದು. ಈ ಹಾವುಗಳಲ್ಲಿ ವಿಷವಿಲ್ಲದಿದ್ದರೂ ಇವು ತುಂಬಾ ಅಪಾಯಕಾರಿಯಾಗಿವೆ. ಎಲ್ಲ ಶಕ್ತಿಯನ್ನು ಹಾಕಿ ತನ್ನ ಹೊಟ್ಟೆಯೊಳಗಿರುವ ಬೇಟೆಯನ್ನು ಹಿಂಡಲು ಪ್ರಯತ್ನಿಸುತ್ತದೆ. ಇದು ಮನುಷ್ಯನನ್ನು ಕೂಡ ಕೊಂದುಹಾಕುತ್ತದೆ ಎಂದು ನಂದಾ ತಮ್ಮ ಟ್ವೀಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೊದಲ್ಲಿ ಕಂಡುಬರುವಂತೆ ರೆಟಿಕ್ಯುಲೇಟೆಡ್ ಹೆಬ್ಬಾವು ಎಷ್ಟು ಎತ್ತರದ ಸ್ಥಳಗಳನ್ನು ಬೇಕಾದರೂ ಹತ್ತುತ್ತದೆ. ಹಾಗಾಗಿ ಇದು ಪಕ್ಷಿಗಳು, ಸಸ್ತನಿಗಳು ಮತ್ತು ಇತರ ಸರೀಸೃಪಗಳಂತಹ ಬೇಟೆಯನ್ನು ತಲುಪಲು ಸಹಾಯ ಮಾಡುತ್ತದೆ. ತನ್ನ ಬೇಟೆಯನ್ನು ಹಿಡಿದ ನಂತರ, ಹೆಬ್ಬಾವು ಅದನ್ನು ಉಸಿರುಗಟ್ಟುವವರೆಗೆ ಹಿಂಡುತ್ತದೆ, ನಂತರ ಅದನ್ನು ಸಂಪೂರ್ಣವಾಗಿ ನುಂಗುತ್ತದೆ, ಹಾಗೇ ದೊಡ್ಡ ಜೀವಿಗಳನ್ನು ತಿನ್ನಲು ಅವು ತನ್ನ ದವಡೆಯಿಂದ ಜಗಿಯುತ್ತವೆ ಎನ್ನಲಾಗಿದೆ.

ಇದನ್ನೂ ಓದಿ: ‘ಶೀಲಾ ಕಿ ಜವಾನಿ’ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ ಬೆಡಗಿ! ವಿಡಿಯೊ ನೋಡಿ

ವೈರಲ್ ವಿಡಿಯೊದಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವು ತನ್ನ ಬೇಟೆಯನ್ನು ಹಿಡಿಯಲು ಗೋಡೆಯನ್ನು ಏರುತ್ತಿರುವುದನ್ನು ಕಂಡು ನೆಟ್ಟಿಗರು ಗಾಬರಿಗೊಂಡಿದ್ದಾರೆ. ಅನೇಕ ಬಳಕೆದಾರರು ಹಾವಿನ ಅಪಾರ ಗಾತ್ರ ಮತ್ತು ಶಕ್ತಿಯ ಬಗ್ಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, “ವಾಹ್, ಅದು ಒಂದು ದೊಡ್ಡ ಹೆಬ್ಬಾವು! ನಾನು ಖಂಡಿತವಾಗಿಯೂ ಅದರೊಂದಿಗೆ ಹೋರಾಡಲು ಬಯಸುವುದಿಲ್ಲ.” ಎಂದು ತಿಳಿಸಿದ್ದಾರೆ. ಇನ್ನೊಬ್ಬರು “ಪ್ರಕೃತಿ ನಿಜವಾಗಿಯೂ ನಂಬಲಾಗದು. ಈ ಜೀವಿಗಳು ತಮ್ಮ ಆವಾಸಸ್ಥಾನಗಳಲ್ಲಿ ಹೇಗೆ ಹೊಂದಿಕೊಳ್ಳುತ್ತವೆ ಮತ್ತು ಅಭಿವೃದ್ಧಿ ಹೊಂದುತ್ತವೆ ಎಂಬುದನ್ನು ನೋಡುವುದು ಆಶ್ಚರ್ಯಕರವಾಗಿದೆ ಎಂದು ಬರೆದಿದ್ದಾರೆ.

Exit mobile version