Site icon Vistara News

Viral Video: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

Viral Video


ದೇಶದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಹ ಸೃಷ್ಟಿಯಾಗಿದೆ. ರಸ್ತೆಗಳಲ್ಲಿ, ಮನೆಯ ಸುತ್ತಮುತ್ತ, ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಪ್ರವಾಹದಿಂದ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವುದು ಮಾನವೀಯತೆ. ಆದರೆ ಇಲ್ಲೊಂದು ಪುರುಷರು ಗುಂಪು ಮೋಟಾರ್ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ಬುಧವಾರ ಲಕ್ನೋದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಉತ್ತರ ಪ್ರದೇಶದ ಲಕ್ನೊದಲ್ಲಿ ಜಲಾವೃತ ರಸ್ತೆಯಲ್ಲಿ ಬೈಕ್‍ನಲ್ಲಿ ಪುರುಷನೊಂದಿಗೆ ಹಿಂಬದಿಯಲ್ಲಿ ಮಹಿಳೆ ಕುಳಿತು ಪ್ರಯಾಣಿಸುತ್ತಿರುವಾಗ ಆಕೆಗೆ ಪುರುಷರ ಗುಂಪು ಕಿರುಕುಳ ನೀಡಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿದೆ ಮತ್ತು ಟೀಕೆಗೆ ಗುರಿಯಾಗಿದೆ.ಯುಪಿ ರಾಜಧಾನಿಯ ತಾಜ್ ಹೋಟೆಲ್ ಸೇತುವೆಯ ಕೆಳಗೆ ಬುಧವಾರ ಹಗಲಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೊದಲ್ಲಿ, ನೀರು ತುಂಬಿದ ರಸ್ತೆಯಲ್ಲಿ ಸೇತುವೆಯ ಕೆಳಗೆ ಜಮಾಯಿಸಿದ ಪುರುಷರ ಗುಂಪು ಮಹಿಳೆ ಮತ್ತು ಪುರುಷ ಸವಾರಿ ಮಾಡುತ್ತಿದ್ದ ಬೈಕ್ ಅನ್ನು ಸುತ್ತುವರಿದಿದ್ದಾರೆ. ಅವರು ಪ್ರವಾಹದ ರಸ್ತೆಯನ್ನು ದಾಟುತ್ತಿದ್ದಾಗ, ಆಗಲೇ ಅಲ್ಲಿದ್ದ ಪುರುಷರ ಗುಂಪು ಅವರ ಮೇಲೆ ನೀರನ್ನು ಚಿಮುಕಿಸಲು ಪ್ರಾರಂಭಿಸಿದರು. ಭಾರಿ ಮಳೆಯ ಸಮಯದಲ್ಲಿ ಪ್ರವಾಹದ ರಸ್ತೆಯಲ್ಲಿ, ಪುರುಷರ ಈ ಕೃತ್ಯದಿಂದ ಇವರಿಬ್ಬರಿಗೆ ರಸ್ತೆಯನ್ನು ದಾಟಲು ಕಷ್ಟವಾಯಿತು. ಅಲ್ಲದೇ ಕೆಲವು ಪುರುಷರು ಬೈಕ್ ಅನ್ನು ಹಿಂದಿನಿಂದ ಎಳೆಯಲು ಪ್ರಯತ್ನಿಸಿದರು, ಇದರಿಂದ ಅವರಿಬ್ಬರು ಬೈಕ್‍ನಿಂದ ಕೆಳಗೆ ಬಿದ್ದಿದ್ದಾರೆ. ಮಹಿಳೆ ಬೈಕಿನಿಂದ ಬಿದ್ದಾಗ, ಒಬ್ಬ ವ್ಯಕ್ತಿ ಅವಳಿಗೆ ಎದ್ದೇಳಲು ಸಹಾಯ ಮಾಡಿದನು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಸೇತುವೆಯ ಕೆಳಗೆ ಇದ್ದ ಜನಸಮೂಹವನ್ನು ಚದುರಿಸಿದರು.

ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್‌!

ಜಲಾವೃತ ರಸ್ತೆಯಲ್ಲಿ ಪುರುಷ ಮತ್ತು ಮಹಿಳೆಗೆ ಕಿರುಕುಳ ನೀಡಿದ ಪುರುಷರನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಪುರುಷರ ನಡವಳಿಕೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಘಟನೆಯನ್ನು ಟೀಕಿಸಿದಾರೆ.

Exit mobile version