ಕೆಲವೊಮ್ಮೆ ಚಾಲಕನ ಬೇಜವಾಬ್ದಾರಿತನದಿಂದ ವಾಹನಗಳು ಇದ್ದಕ್ಕಿದ್ದಂತೆ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತವೆ. ಇಂತಹ ಘಟನೆಯಿಂದ ಅನೇಕ ಜನರು ಆಪತ್ತಿಗೆ ಸಿಲುಕಿದ್ದಾರೆ. ಇದೀಗ ಅಂತಹದೊಂದು ಘಟನೆ ನಡೆದಿದ್ದು, ನಿಂತಿದ್ದ ಟ್ರಕ್‌ವೊಂದು ಇದ್ದಕ್ಕಿದ್ದಂತೆ ಚಲಿಸಿದೆ. ಇದನ್ನು ನೋಡಿದ ಮಹಿಳೆಯೊಬ್ಬಳು ತಕ್ಷಣ ಟ್ರಕ್ ಏರಿ ಹ್ಯಾಂಡ್ ಬ್ರೇಕ್ ಹಾಕಿ ನಡೆಯಬೇಕಾಗಿದ್ದ ಆಪತ್ತು ತಡೆದಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಆ ಮಹಿಳೆಯನ್ನು ಎಲ್ಲರೂ ರಿಯಲ್ ಹೀರೋ ಎಂದು ಕರೆದಿದ್ದಾರೆ.
ಈ ಘಟನೆ ಅಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಹಿಡಿಯಾಗಿದೆ. ವಿಡಿಯೊದಲ್ಲಿ ಮಹಿಳೆ ಟ್ರಕ್ ಮುಂದೆ ಹಾದುಹೋಗುವಾಗ ಟ್ರಕ್ ಇದ್ದಕ್ಕಿದ್ದಂತೆ ಮುಂದೆ ಚಲಿಸಿದೆ. ಹಿಂದೆ ಇಬ್ಬರು ಪುರುಷರು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆಗ ಇದನ್ನು ನೋಡಿದ ಮಹಿಳೆ ಧೃತಿಗೆಡದೆ ತಕ್ಷಣ ಓಡಿಹೋಗಿ ಟ್ರಕ್ ಏರಿ ಹ್ಯಾಂಡ್ ಬ್ರೇಕ್ ಹಾಕಿ ಟ್ರಕ್ ಅನ್ನು ನಿಲ್ಲಿಸಿದ್ದಾಳೆ.
Brave Girl Jumps onto Moving Truck to Pull Handbrake🫡 pic.twitter.com/c40pbZTorT
— Ghar Ke Kalesh (@gharkekalesh) August 5, 2024
ಮಹಿಳೆಯ ತ್ವರಿತ ಚಿಂತನೆ ಮತ್ತು ನಿರ್ಣಾಯಕ ಕ್ರಮವು ಅಂತಿಮವಾಗಿ ಸಂಭವಿಸಬಹುದಾದ ದುರಂತ ಅಪಘಾತವನ್ನು ತಪ್ಪಿಸಿತು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಅವಳ ಧೈರ್ಯ ಮತ್ತು ಒಳ್ಳೆ ಮನಸ್ಸನ್ನು ಕಂಡು ಹೊಗಳಿದ್ದಾರೆ. ಮತ್ತು ಟ್ರಕ್ ಅನ್ನು ಹಿಂದಕ್ಕೆ ಎಳೆಯುವ ಸಾಹಸ ಮಾಡಿದ ಇಬ್ಬರು ಪುರುಷರನ್ನು ಅನೇಕರು ಟೀಕಿಸಿದ್ದಾರೆ.
“ಎಲ್ಲಾ ಶ್ರೇಯಸ್ಸು ಆ ಧೈರ್ಯಶಾಲಿ ಹುಡುಗಿಗೆ ಸಲ್ಲುತ್ತದೆ. ಅವಳು ತನ್ನ ಸಮಯ ಪ್ರಜ್ಞೆಯನ್ನು ಸರಿಯಾದ ಸಮಯದಲ್ಲಿ ಬಳಸಿದಳು. ಟ್ರಕ್ ಅನ್ನು ಹಿಂದಕ್ಕೆ ಎಳೆಯುವ ಮೂಲಕ ನಿಲ್ಲಿಸಲು ಪ್ರಯತ್ನಿಸಿದ ಆ ಇಬ್ಬರು ಪುರುಷರಿಗೆ ಯಾವುದೇ ಕ್ರೆಡಿಟ್ ಇಲ್ಲ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಎಳೆಯುವ ಮೂಲಕ ಟ್ರಕ್ ಅನ್ನು ನಿಲ್ಲಿಸಬಹುದು ಎಂದು ಇಬ್ಬರು ಹುಡುಗರು ಹೇಗೆ ಯೋಚಿಸಿದರು?” ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಅವಳ ಧೈರ್ಯವನ್ನು ಮೆಚ್ಚುತ್ತೇನೆ. ಲೆಗ್ ಬ್ರೇಕ್ ಬದಲು ಹ್ಯಾಂಡ್ ಬ್ರೇಕ್ ಬಳಸುವುದು ಉತ್ತಮ ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ: ಪತಿ ಬೈದಿದ್ದಕ್ಕೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಬೆಚ್ಚಿ ಬೀಳಿಸುವ ವಿಡಿಯೊ
ಈ ವಿಡಿಯೊ ಘರ್ ಕೆ ಕಲೇಶ್ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಆಗಿದ್ದು, ಇದಕ್ಕೆ 936.8ಕೆ ವೀವ್ಸ್, 7831 ಲೈಕ್ಸ್ ಬಂದಿದೆ. ಈ ಘಟನೆಯಲ್ಲಿದ್ದ ಮಹಿಳೆ, ಘಟನೆಯ ನಿರ್ದಿಷ್ಟ ಸ್ಥಳ ಮತ್ತು ದಿನಾಂಕವನ್ನು ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.