ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವಂತಹ ಘಟನೆಗಳು ಹೆಚ್ಚು ಕಂಡುಬರುತ್ತಿದೆ. ಸಾಧು ಪ್ರಾಣಿಗಳಾದ ಹಸು, ಎಮ್ಮೆಗಳು ಕ್ರೂರ ಪ್ರಾಣಿಗಳಂತೆ ವರ್ತಿಸಲು ಶುರು ಮಾಡಿವೆ. ಎಲ್ಲೆಂದರಲ್ಲಿ ಜನರನ್ನು ಅಟ್ಟಾಡಿಸಿಕೊಂಡು ದಾಳಿ ಮಾಡುತ್ತಿವೆ. ಇದೀಗ ಅಂತಹದೊಂದು ಆಘಾತಕಾರಿ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದ್ದು, ಬೀದಿ ಹಸುವಿನ ದಾಳಿಗೆ ಮಹಿಳೆಯೊಬ್ಬರು ತುತ್ತಾಗಿ ಭೀಕರವಾಗಿ ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Viral Video) ಹರಿದಾಡುತ್ತಿದೆ.
ಬೀದಿಯಲ್ಲಿ ಹಸುಗಳು ಮಹಿಳೆಯ ಮೇಲೆ ಕ್ರೂರವಾಗಿ ದಾಳಿ ಮಾಡುವುದನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ಆಗಿರುವ ಈ ವಿಡಿಯೊದಲ್ಲಿ, ಬೀದಿ ಹಸುಗಳ ಗುಂಪು ಮಹಿಳೆಯ ಮೇಲೆ ದಾಳಿ ಮಾಡಿದೆ. ಹಸುವೊಂದು ಮಹಿಳೆಯ ಎದೆ ಹಾಗೂ ಕುತ್ತಿಗೆಗೆ ತಿವಿದಿದೆ. ಕಾಲಿನಿಂದ ತುಳಿದು ತುಳಿದು ಘಾಸಿಗೊಳಿಸಿದೆ. ಹಲವಾರು ಜನರು ಮಹಿಳೆಯನ್ನು ಉಳಿಸಲು ಪ್ರಯತ್ನಿಸಿದರು. ಆದರೆ ದನಗಳು ಮಾತ್ರ ತಮ್ಮ ಕೃತ್ಯವನ್ನು ನಿಲ್ಲಿಸಲಿಲ್ಲ. ಇದರ ಪರಿಣಾಮವಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಸು ಮಹಿಳೆಯನ್ನು ತಿವಿದ ಭಯಾನಕ ದೃಶ್ಯದ ಬಗ್ಗೆ ಹಾಗೂ ಇದರ ಪರಿಣಾಮ ಮಹಿಳೆಯ ಎದೆ ಮತ್ತು ಗಂಟಲು ಹರಿದುಹಾಕಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದಾಗ ಎಂಥವರಿಗೂ ಮೈ ಜುಮ್ಮೆನಿಸುತ್ತದೆ.
हरियाणा के कुरुक्षेत्र का ये वीडियो आपको विचलित कर देगा, देखिए कि इस शहर में आवारा वहशी पशुओं ( टनाटनियो की माता) का तांडव,
— Adv.Nazneen Akhtar (@NazneenAkhtar10) July 28, 2024
दांतो से महिला के स्तन उखाड़ दिए गला फाड़ डाला।।
भारत सरकार को आवारा पशुओं को पकड़ने या बेकाबू जानवरो को गोली मारने का आदेश देना चाहिए।। pic.twitter.com/x43NEiqOgx
ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳು ನಡೆಯದಂತೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನಾಗ್ರಹ ಕೇಳಿ ಬಂದಿದೆ. ಆದರೆ ಕುರುಕ್ಷೇತ್ರದ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಇನ್ನೂ ಕಠಿಣ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: 1 ಸಾವಿರ ರೂ. ಲಂಚ ಪ್ರಕರಣ 25 ವರ್ಷಗಳ ಬಳಿಕ ಇತ್ಯರ್ಥ! ಹಿಂಗಾಂದ್ರೆ ಹೆಂಗೆ ಅಂತಿದ್ದಾರೆ ಜನ!
ಈ ಘಟನೆಗೆ ಸಂಬಂಧಿಸಿದಂತೆ ನಗರ ಪ್ರದೇಶಗಳಲ್ಲಿ ಆಕ್ರಮಣಕಾರಿ ಪ್ರಾಣಿಗಳ ಅನಿಯಂತ್ರಿತ ಉಪಸ್ಥಿತಿಯ ಬಗ್ಗೆ ಸಂಬಂಧಪಟ್ಟ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳು ಆಕ್ರೋಶ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಕುರುಕ್ಷೇತ್ರದಲ್ಲಿ ಬೀದಿ ಪ್ರಾಣಿಗಳ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಂದ ತುರ್ತು ಕ್ರಮ ಅಗತ್ಯವಿದೆ ಎಂಬುದನ್ನು ತಿಳಿಸುತ್ತದೆ.