Site icon Vistara News

Viral Video: ನಾಗದೇವತೆ ವಿಗ್ರಹದ ಮೇಲೆ ಹೆಡೆ ಬಿಚ್ಚಿ ನಿಂತ ನಾಗರ ಹಾವು!

Viral Video


ಕಣ್ಣಿಗೆ ಕಾಣುವ ದೇವರೆಂದರೆ ಅದು ನಾಗರ ಹಾವು ಎನ್ನುತ್ತಾರೆ. ಆಗಸ್ಟ್ 9ರಂದು ಎಲ್ಲೆಡೆ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಜನರು ತಾವು ನಂಬಿದ ನಾಗದೇವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದರೆ ಇದೀಗ ನಾಗರ ಪಂಚಮಿ ಹಬ್ಬ ಸಮೀಪಿಸುತ್ತಿದ್ದಂತೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನಾಗದೇವರು ಪ್ರತ್ಯೇಕ್ಷರಾಗಿ ಭಕ್ತರಿಗೆ ದರ್ಶನ ನೀಡಿದ್ದಾರೆ. ಇಲ್ಲಿನ ಶಂಭು ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗದೇವತಾ ವಿಗ್ರಹದ ಮೇಲೆ ನಾಗರ ಹಾವು ಹೆಡೆ ಬಿಚ್ಚಿ ನಿಂತಿದ್ದು, ಇದನ್ನು ಕಂಡು ಭಕ್ತರು ಇದು ಶಿವನ ಮಹಿಮೆ ಎಂದು ಹಾವಿಗೆ ಕೈಮುಗಿದು ಭಕ್ತಿಯ ಸಾಗರದಲ್ಲಿ ಮುಳುಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಶಂಭು ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗದೇವತಾ ವಿಗ್ರಹದ ಮೇಲೆ ಭಕ್ತರು ಬೃಹತ್ ನಾಗರ ಹಾವನ್ನು ನೋಡಿದ್ದಾರೆ. ಹಾವು ತನ್ನ ದೊಡ್ಡ ಹೆಡೆಯನ್ನು ತೆರೆದು ನಾಗದೇವತೆಯ ವಿಗ್ರಹದ ಮೇಲೆ ನಿಂತಿದೆ. ಸ್ಥಳೀಯರು ನಾಗ ದೇವತೆಯ ವಿಗ್ರಹದ ಮೇಲೆ ನಿಂತ ಹಾವಿನ ವಿಡಿಯೊವನ್ನು ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಈ ವಿಷಯವು ಪಟ್ಟಣದಾದ್ಯಂತ ಹರಡಿತು. ಇದು ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಕುತೂಹಲಕಾರಿ ವೀಕ್ಷಕರನ್ನು ದೇವಾಲಯದತ್ತ ಸೆಳೆದಿದೆ. ಹಾಗಾಗಿ ಭಕ್ತರು ದೇವರ ದರ್ಶನಕ್ಕೆ ಬಂದಿದ್ದಾರೆ. ದೇವಾಲಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅನೇಕರು ಈ ಘಟನೆಯನ್ನು ಶುಭ ಸಂಕೇತವೆಂದು ಪರಿಗಣಿಸಿದರು, ಮತ್ತು ಇದನ್ನು ದೇವರ ಆಶೀರ್ವಾದವೆಂದು ಸಂತೋಷಗೊಂಡಿದ್ದಾರೆ.

ಮುಂಜಾನೆ ದೇವಾಲಯದ ಅರ್ಚಕರು ದೈನಂದಿನ ಆಚರಣೆಗಳನ್ನು ನಡೆಸುತ್ತಿದ್ದಾಗ, ನಾಗದೇವತೆ ವಿಗ್ರಹದ ಮೇಲೆ ಹಾವು ತನ್ನ ಹೆಡೆಯನ್ನು ಬಿಚ್ಚಿರುವುದನ್ನು ನೋಡಿದ್ದಾರೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಾಲಯದಲ್ಲಿ ಭಕ್ತರು ಶಿವನ ಕೊರಳಿನ ಆಭರಣವಾಗಿರುವ ನಾಗದೇವತೆಗಳಿಗೂ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗಾಗಿ ಭಗವಾನ್ ಶಿವನ ಆಲಯದಲ್ಲಿ ಈ ಹಾವು ನಾಗದೇವರ ವಿಗ್ರಹದ ಮೇಲೆ ಕಂಡುಬಂದಿದ್ದು, ಊರಿನ ಉದ್ಧಾರಕ್ಕಾಗಿ ಶಿವನು ಕಳುಹಿಸಿದ ಧೂತ ಎಂದು ಜನರು ನಂಬಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

ಇಲ್ಲಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೂ, ನಾಗರಹಾವು ಹೆದರಲಿಲ್ಲ. ಅದು ನಾಗಾ ದೇವತೆ ವಿಗ್ರಹದ ಮೇಲೆ ಹಾಗೆಯೇ ನಿಂತುಕೊಂಡಿದೆ. ಹಾವು ಹೋಗದ ಕಾರಣ, ಸ್ಥಳೀಯರು ಹಾವು ಹಿಡಿಯುವವರಿಗೆ ಮಾಹಿತಿ ನೀಡಿದರು. ಅವನು ಬಂದು ಹಾವನ್ನು ಹಿಡಿಯಲು ಬಹಳ ಸಮಯ ಶ್ರಮಿಸಿದನು. ಆದರೆ ಅವನಿಗೆ ಅದನ್ನು ಹಿಡಿಯಲಾಗದೆ ಬಿಟ್ಟುಹೋದನು. ಈ ಘಟನೆಗೆ ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ. “ನಾವು ಅಂತಹ ಸನ್ನಿವೇಶವನ್ನು ಎಂದಿಗೂ ನೋಡಿಲ್ಲ ಮತ್ತು ಇದು ನಮ್ಮ ಅದೃಷ್ಟ” ಎಂದು ಹೇಳಿದ್ದಾರೆ. ಎಲ್ಲವೂ ಶಿವಯ್ಯನ ಮಹಿಮೆ ಎಂದು ಭಕ್ತರು ಹೇಳುತ್ತಾರೆ.

Exit mobile version