ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಪಟ್ಟಣದ ತರೋಡ ಗ್ರಾಮದಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ತನ್ನ ತಾಯಿಯ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ 11 ವರ್ಷದ ಬಾಲಕಿ ಸಾರ್ವಜನಿಕರ ಬಳಿ ಹಣಕ್ಕಾಗಿ ಭಿಕ್ಷೆ ಬೇಡಿ ಹೃದಯ ಕಲಕುವಂತಹ ಘಟನೆ ನಡೆದಿದೆ. ಬಾಲಕಿ ಭಿಕ್ಷೆ ಬೇಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಅನೇಕರು ಬಾಲಕಿಯ ಪರಿಸ್ಥಿತಿ ಕಂಡು ಕಂಬನಿ ಮಿಡಿದಿದ್ದಾರೆ.
ಬಾಲಕಿಯ ಹೆಸರು ದುರ್ಗಾ, 6ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಆಕೆಯ ತಂದೆ 12 ವರ್ಷಗಳ ಹಿಂದೆ ನಿಧನರಾಗಿದ್ದರು. ಹಾಗಾಗಿ ತಾಯಿಗೆ ಯಾವುದೇ ಹಣಕಾಸಿನ ಬೆಂಬಲವಿರಲಿಲ್ಲ. ಹಾಗಾಗಿ ಆಕೆ ಕೂಲಿನಾಲಿ ಮಾಡಿ ತನ್ನ ಮಗಳನ್ನು ಸಾಕುತ್ತಿದ್ದಳು. ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ ಕಾರಣ ದುರ್ಗಾಗೆ ತಾಯಿಯ ಅಂತ್ಯಸಂಸ್ಕಾರ ಮಾಡಲು ಹಣವಿಲ್ಲ ಮತ್ತು ಅಂತಿಮ ವಿಧಿಗಳನ್ನು ಹೇಗೆ ನಡೆಸುವುದು ಎಂದು ತಿಳಿದಿರಲಿಲ್ಲ. ಹಾಗಾಗಿ ಅವಳು ಹಣಕ್ಕಾಗಿ ಭಿಕ್ಷೆ ಬೇಡಿದ್ದಾಳೆ. ಬಾಲಕಿಯ ದುಃಸ್ಥಿತಿಯ ಬಗ್ಗೆ ತಿಳಿದ ಸ್ಥಳೀಯ ಪೊಲೀಸರು, ಶಿಕ್ಷಕರು ಮತ್ತು ಬಿಆರ್ ಎಸ್ ಮುಖಂಡರು ಬಾಲಕಿಗೆ ಹಣವನ್ನು ನೀಡಿದ್ದಾರೆ ಮತ್ತು ಸಂಜೆಯ ವೇಳೆಗೆ ತಾಯಿಯ ಅಂತಿಮ ವಿಧಿಗಳನ್ನು ನಡೆಸಲು ಸಹಾಯ ಮಾಡಿದ್ದಾರೆ.
హృదయవిదారక ఘటన
— Telugu Scribe (@TeluguScribe) August 18, 2024
నిర్మల్ జిల్లా తానూర్ మండలం బేల్ తరోడాలో గ్రామంలో తల్లి అంత్యక్రియల కోసం సాయం చేయాలంటూ కూతురు భిక్షాటన.
గతంలో అనారోగ్యంతో తండ్రి మృతి.. ఆర్ధిక ఇబ్బందులకు తాళలేక ఉరివేసుకుని తల్లి ఆత్మహత్య. pic.twitter.com/CxeEweY6XA
ಪೊಲೀಸರ ಪ್ರಕಾರ, ದುರ್ಗಾ ಅವಳ ತಾಯಿ ಎಂ.ಗಂಗಾಮಣಿ (35) ಶನಿವಾರ ರಾತ್ರಿ ತರೋಡಾದಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿನಗೂಲಿ ಕೃಷಿ ಕಾರ್ಮಿಕರಾದ ಗಂಗಾಮಣಿ ತನ್ನ ಒಬ್ಬಳೆ ಮಗಳನ್ನು ಬೆಳೆಸಲು, ಮನೆಯ ಬಾಡಿಗೆ ಕಟ್ಟಲು ಮತ್ತು ಇತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಷ್ಟಪಡುತ್ತಿದ್ದಳು. ದುರ್ಗಾ ತನ್ನ ತಾಯಿಯ ಜೊತೆ ಜಗಳವಾಡಿ ತಾಯಿಯ ಹಿರಿಯ ಸಹೋದರಿಯ ಮನೆಗೆ ಹೋಗಿದ್ದಳು. ಆದರೆ ಬಾಲಕಿ ಹಿಂತಿರುಗಿ ಬಂದಾಗ, ಅವಳು ತನ್ನ ತಾಯಿಯ ಶವವನ್ನು ಕಂಡು ನೆರೆಹೊರೆಯವರಿಗೆ ಮಾಹಿತಿ ನೀಡಿದಳು, ನಂತರ ಅವರು ಪೊಲೀಸರಿಗೆ ಕರೆ ಮಾಡಿದರು. ಕೊನೆಗೆ ದುರ್ಗಾ ತನ್ನ ತಾಯಿಯ ಶವವನ್ನು ತಮ್ಮ ಮನೆಯ ಹೊರಗೆ ಇರಿಸಿ ಗ್ರಾಮಸ್ಥರಿಂದ ಸಹಾಯಕ್ಕಾಗಿ ಮನವಿ ಮಾಡಿದಳು.
ಇದನ್ನೂ ಓದಿ:ಹೂ ಮಾರಿ ಜೀವನ ಮಾಡುವ ತಾಯಿ ಬಳಿ ಐಫೋನ್‌ಗಾಗಿ ಮಗ ಮಾಡಿದ ಬ್ಲ್ಯಾಕ್‌ಮೇಲ್ ಏನು ನೋಡಿ!
ಈ ವಿಚಾರ ತಿಳಿದ ಬಿ ಆರ್ ಎಸ್ ಮುಖಂಡರು 10,000 ರೂ. ನೀಡಿ ಬಾಲಕಿಗೆ ಮುಂದಿನ ಜೀವನಕ್ಕಾಗಿ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.