Site icon Vistara News

Heart Health: ಹೃದಯದ ಆರೋಗ್ಯಕ್ಕಾಗಿ ಈ ಐದು ಅಡುಗೆ ಎಣ್ಣೆ ಸೂಕ್ತ; ಮಾಧುರಿ ದೀಕ್ಷಿತ್ ಪತಿಯ ಸಲಹೆ ಇದು

Viral Video

ಬಾಲಿವುಡ್ ನಟಿ (bollywood actress) ಮಾಧುರಿ ದೀಕ್ಷಿತ್ (Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ಹೃದಯದ ಆರೋಗ್ಯಕ್ಕಾಗಿ (heart health) ಉತ್ತಮ ಅಡುಗೆ ಎಣ್ಣೆ (cooking oils) ಯಾವುದು ಎಂಬುದನ್ನು ಹೇಳಿದ್ದಾರೆ. ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕರಾಗಿ ಹೆಸರುವಾಸಿಯಾಗಿರುವ ಅವರು ಇನ್ ಸ್ಟಾಗ್ರಾಮ್‌‌ನಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಆರೋಗ್ಯಕ್ಕಾಗಿ ಉತ್ತಮ ಅಡುಗೆ ಎಣ್ಣೆಗಳನ್ನು ಬಳಸುವಂತೆ ಶಿಫಾರಸು ಮಾಡಿರುವ ಶ್ರೀರಾಮ್ ನೆನೆ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ.

ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸಕ, ವೈದ್ಯಕೀಯ ವೃತ್ತಿಪರರಾಗಿರುವ ಅವರು ಎದೆಯ ವಿವಿಧ ಅಂಗಗಳಾದ ಹೃದಯ, ಶ್ವಾಸಕೋಶಗಳು ಮತ್ತು ಅನ್ನನಾಳ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ.

.ಹೃದಯದ ಆರೋಗ್ಯವು ಪ್ರತಿಯೊಬ್ಬರ ಪ್ರಮುಖ ಆದ್ಯತೆಯಾಗಿರಬೇಕು ಎಂದು ಹೇಳಿರುವ ಅವರು ಅತ್ಯುತ್ತಮವಾದ ಹೃದಯದ ಆರೋಗ್ಯಕ್ಕಾಗಿ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುವುದು ಬಹು ಮುಖ್ಯ ಎಂದು ತಿಳಿಸಿದ್ದಾರೆ. ಇದಕ್ಕಾಗಿ ನಮ್ಮ ಜೀವನಶೈಲಿ ಮತ್ತು ಆಹಾರಕ್ರಮವನ್ನು ನಿರಂತರ ವೀಕ್ಷಿಸಬೇಕು ಎಂದು ಹೇಳಿರುವ ನೆನೆ, ಒಂದು ದಿನದ ಹಿಂದೆ ಒಂದು ಸಣ್ಣ ವೀಡಿಯೊವನ್ನು ಮಾಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಅಗ್ರ ಐದು ಅಡುಗೆ ಎಣ್ಣೆಗಳನ್ನು ಶಿಫಾರಸು ಮಾಡಿದರು.

ಆರೋಗ್ಯಕರ ನಿಮಗಾಗಿ ಅತ್ಯುತ್ತಮ ಅಡುಗೆ ಎಣ್ಣೆಗಳ ಬಗ್ಗೆ ಹೇಳಿರುವ ಅವರು, ಶಿಫಾರಸು ಮಾಡಿರುವ ಅಕ್ಕಿ ಹೊಟ್ಟು ಎಣ್ಣೆ, ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಎಣ್ಣೆ ಮತ್ತು ಎಳ್ಳಿನ ಎಣ್ಣೆ.

ಅಕ್ಕಿ ಹೊಟ್ಟು ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಡಲೆಕಾಯಿ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಸಾಸಿವೆ ಎಣ್ಣೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಸಾಸಿವೆ ಎಣ್ಣೆಯಲ್ಲಿರುವ ಇ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Actor Darshan: ಅಪ್ಪನ ಸ್ಥಿತಿ ಕಂಡು ಮಗ ವಿನೀಶ್‌ ಕಣ್ಣೀರು; ಧೈರ್ಯ ತುಂಬಿದ ವಿಜಯಲಕ್ಷ್ಮಿ!

ಆಲಿವ್ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಒಲೀಕ್ ಆಮ್ಲವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಎಳ್ಳಿನ ಎಣ್ಣೆಯು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಆಂಟಿಆಕ್ಸಿಡೆಂಟ್‌ಗಳನ್ನು ಸಹ ಹೊಂದಿದೆ. ಇದು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತದೆ ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ.

Exit mobile version