Site icon Vistara News

Viral Video: ಮನೆಯ ಗೇಟ್ ಬಳಿ ಸಿಂಹಗಳು ಮತ್ತು ಸಾಕು ನಾಯಿಗಳ ಕಾದಾಟ; ಎದೆ ನಡುಗಿಸುವ ವಿಡಿಯೊ

Viral Video


ಸಿಂಹ ತುಂಬಾ ಕ್ರೂರ ಪ್ರಾಣಿಗಳು. ಎದುರಿಗೆ ಬಂದರೆ ಎಂತಹ ಗಟ್ಟಿ ಹೃದಯದವರಾದರೂ ಒಂದು ಕ್ಷಣ ನಡುಗುತ್ತಾರೆ. ಅಂತಹದರಲ್ಲಿ ಸಾಕು ನಾಯಿಯೊಂದು ಸಿಂಹಗಳ ಜೊತೆ ಹೋರಾಟಕ್ಕೆ ಮುಂದಾಗಿದೆ. ಎರಡು ಸಿಂಹಗಳು ಮತ್ತು ಸಾಕು ನಾಯಿಗಳ ನಡುವಿನ ಜಗಳ ನಡೆದಿದೆ. ಸುಮಾರು ಒಂದು ನಿಮಿಷದವರೆಗೆ ನಡೆದ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ. ಆದರೆ ಅವುಗಳನ್ನು ನಡುವೆ ಗೇಟ್ ಇದ್ದ ಕಾರಣ ಸಿಂಹಗಳು ನಾಯಿಗಳನ್ನು ಸುಮ್ಮನೆ ಬಿಟ್ಟು ಆ ಸ್ಥಳದಿಂದ ಹೋಗಿವೆ.

ಈ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಆಘಾತಕಾರಿ ಘಟನೆ ಗುಜರಾತ್‍ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದಲ್ಲಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 76 ಕಿ.ಮೀ ದೂರದಲ್ಲಿದೆ. ವಿಡಿಯೊದಲ್ಲಿ, ಸಿಂಹವು ಹೊರಗಿನಿಂದ ಗೇಟ್ ಕಡೆಗೆ ಬರುತ್ತಿದೆ. ಆಗ ನಾಯಿಗಳು ಇದ್ದಕ್ಕಿದ್ದಂತೆ ಗೇಟ್‍ನೊಳಗಿನಿಂದ ಸಿಂಹದ ಮೇಲೆ ದಾಳಿ ಮಾಡುವಂತೆ ಬೊಗಳುತ್ತಾ ಗೇಟ್ ಕಡೆಗೆ ಬರುತ್ತಿದೆ. ನಂತರ ಮತ್ತೊಂದು ಸಿಂಹ ಬಂದು ಮತ್ತೆ ನಾಯಿ ಜೊತೆ ಕೆಲವು ಸೆಕೆಂಡುಗಳ ಕಾಲ ಜಗಳವಾಡುತ್ತದೆ. ಅವುಗಳ ಜಗಳದಿಂದ ಗೇಟ್ ಮುರಿದು ಬೀಳುತ್ತದೆಯೇ ಎಂದು ಅನಿಸುತ್ತದೆ.

ಕೊನೆಗೆ ಗೇಟ್ ತೆರೆದುಕೊಂಡಿದ್ದರಿಂದ ನಾಯಿ ಹಿಂದೆ ಸರಿದಿದೆ. ಆದರೆ, ಸಿಂಹಗಳು ಹತ್ತಿರದ ಪೊದೆಯಲ್ಲಿ ಕಣ್ಮರೆಯಾಗಿವೆ. ನಂತರ ನಾಯಿ ಹೊರಗೆ ಬರುತ್ತದೆ. ಹಾಗೇ ಅದರ ಜೊತೆ ಟಾರ್ಚ್ ಲೈಟ್ ಹಿಡಿದಿರುವ ವ್ಯಕ್ತಿಯೊಬ್ಬರು ಹೊರಗೆ ಬಂದು ಅಲ್ಲಿ ಹುಡುಕಾಡತೊಡಗಿದ್ದಾರೆ. ನಂತರ ಒಳಗೆ ಹೋಗಿ ಗೇಟ್ ಅನ್ನು ಲಾಕ್ ಮಾಡಿದ್ದಾರೆ.

ಇದನ್ನೂ ಓದಿ:ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ನಾಯಿಗಳು ಸಿಂಹಗಳು ಮತ್ತು ಚಿರತೆಗಳಂತಹ ಇತರ ಕಾಡು ಪ್ರಾಣಿಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಇಂತಹ ಕೆಲವು ಘಟನೆಗಳು ಈ ಹಿಂದೆಯೂ ವರದಿಯಾಗಿವೆ. ಹಾಗಾಗಿ ಗುಜರಾತ್‍ನಲ್ಲಿ ಸಿಂಹಗಳ ಹಾವಳಿ ಸರ್ವೇಸಾಮಾನ್ಯ. 2020ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 674 ಏಷ್ಯಾಟಿಕ್ ಸಿಂಹಗಳಿವೆ. ಏಷ್ಯಾಟಿಕ್ ಸಿಂಹವು ಪೂರ್ವದಲ್ಲಿ ಪಶ್ಚಿಮ ಬಂಗಾಳ ಮತ್ತು ಭಾರತದ ಮಧ್ಯ ಭಾಗದಲ್ಲಿ ಮಧ್ಯಪ್ರದೇಶದವರೆಗೆ ಹರಡಿದೆ ಎಂದು ತಿಳಿದುಬಂದಿದೆ.

Exit mobile version