ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಗಳ, ಗಲಾಟೆ, ಹೊಡೆದಾಟಗಳು ನಡೆಯುವುದು ಸಹಜ. ಆಗ ಶಿಕ್ಷಕರು ಮಧ್ಯೆ ಬಂದು ಅವರಿಗೆ ಬುದ್ಧಿ ಹೇಳಿ ಸಮಾಧಾನ ಮಾಡುವುದನ್ನು ನಾವು ಕಂಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಚಿತ್ರಕೂಟ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಹೊಡೆದಾಡಿಕೊಂಡ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಆಗಸ್ಟ್ 14ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಶಿಕ್ಷಕಿ ಸಪ್ನಾ ಶುಕ್ಲಾ ಮತ್ತು ಶಿಕ್ಷಕ ಆದೇಶ್ ತಿವಾರಿ ನಡುವಿನ ಜಗಳ, ಹೊಡೆದಾಟವನ್ನು ವಿಡಿಯೊದಲ್ಲಿ ರೆಕಾರ್ಡ್ ಮಾಡಲಾಗಿದೆ. ರಾಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ಹಾರ್ನ್ ಪೂರ್ವಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಶಿಕ್ಷಕರು ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕ ಗೊಂದಲದ ಪರಿಸ್ಥಿತಿಯನ್ನು ಸೃಷ್ಟಿಮಾಡಿದ್ದಾರೆ. ಈ ಪರಿಸ್ಥಿತಿಯನ್ನು ಬೇಗನೆ ಪರಿಹರಿಸಲು ಮತ್ತು ಇಂತಹ ಘಟನೆಗಳು ಮತ್ತೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ ಎನ್ನಲಾಗಿದೆ.
सरकारी स्कूल के शिक्षक एक दूसरे से भीड़ गये हैं. महिला हावी होती दिख रही है. वीडियो यूपी के चित्रकूट का बताया जा रहा है. pic.twitter.com/ZZcIZkY4ff
— Priya singh (@priyarajputlive) August 13, 2024
ಈ ವಿಡಿಯೊ ಹಲವಾರು ವಿವಾದಗಳನ್ನು ಹುಟ್ಟುಹಾಕಿದೆ, ವಿಡಿಯೊದಲ್ಲಿ ಇಬ್ಬರು ಶಿಕ್ಷಕರ ಆಕ್ರಮಣಶೀಲ ಗುಣವು ಆ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟಕ್ಕೆ ಕಳಂಕವಾಗಲಿದೆ. ಬೋಧನಾ ಸಿಬ್ಬಂದಿಯಲ್ಲಿ ಸಮಸ್ಯೆ ಇದ್ದರೆ , ಅದು ಶಾಲೆ ಮತ್ತು ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶಿಕ್ಷಕರ ಹೊಡೆದಾಟವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೊ ಮಾಡಿ ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಅನೇಕ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಶೀಘ್ರದಲ್ಲೇ ಇದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ ಈ ಘಟನೆಯಲ್ಲಿ ಭಾಗಿಯಾಗಿರುವ ಶಿಕ್ಷಕರ ನಡವಳಿಕೆಯ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: 90 ಲಕ್ಷ ರೂ. ಠೇವಣಿ ಎಗರಿಸಲು ವೃದ್ಧನ ಕೊಂದ ಮಹಿಳಾ ಬ್ಯಾಂಕ್ ಮ್ಯಾನೇಜರ್! ಪ್ಲ್ಯಾನ್ ಹೇಗಿತ್ತು ನೋಡಿ!
ಈ ವೈರಲ್ ವಿಡಿಯೊಗೆ ಸಂಬಂಧಿಸಿದಂತೆ, ಬ್ಲಾಕ್ ಶಿಕ್ಷಣ ಅಧಿಕಾರಿ ಈ ವಿಡಿಯೊ ಸುಮಾರು 15 ದಿನಗಳಷ್ಟು ಹಳೆಯದು, ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿಯನ್ನು ಶೀಘ್ರದಲ್ಲೇ ಬಿಎಸ್ಎಗೆ ಸಲ್ಲಿಸಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಮಹಿಳಾ ಶಿಕ್ಷಕಿ ಶಾಲೆಯಲ್ಲಿ ವಿಡಿಯೊಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಇತರ ಶಿಕ್ಷಕರು ಕೋಪಗೊಂಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎಂಬುದಾಗಿ ತಿಳಿದು ಬಂದಿದೆ.