Site icon Vistara News

Viral Video: ಇಲ್ಲಿ ಸಿಗೋದು ಡಿಸೇಲ್ ಪರಾಠಾ!

Viral Video

ಬೀದಿ ಬದಿ ಆಹಾರದಲ್ಲಿ (street food) ಸಿಗುವ ರುಚಿ ಬೇರೆ ಯಾವ ದೊಡ್ಡ ರೆಸ್ಟೋರೆಂಟ್ ಗಳಲ್ಲೂ ಸಿಗುವುದಿಲ್ಲ. ಬೀದಿ ಬದಿ ಆಹಾರವನ್ನು ಇಷ್ಟ ಪಡುವ ಒಂದು ವರ್ಗವೇ ಇದೆ. ಹೀಗಾಗಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇರುತ್ತದೆ. ಆದರೆ ಆರೋಗ್ಯ (health) ಕಾಪಾಡಲು, ಆಹಾರದ ಸುರಕ್ಷತೆ (Food safety), ಸ್ವಚ್ಛತೆ (clean) ಬಗ್ಗೆ ಗಮನ ಕೊಡುವವರು ಬೀದಿಬದಿ ವ್ಯಾಪಾರಿಗಳು ಯಾವ ರೀತಿ ಆಹಾರ ತಯಾರಿಸುತ್ತಾರೆ ಎಂಬುದನ್ನು ನೋಡಿ ತಿನ್ನುವುದು ಒಳ್ಳೆಯದು.

ಆರೋಗ್ಯದ ವಿಷಯದಲ್ಲಿ ಹೆಚ್ಚಿನವರು ಜಾಗ್ರತರಾಗಿರಬೇಕು. ಸ್ಥಿರವಾದ ಕೊಲೆಸ್ಟ್ರಾಲ್ ಮಟ್ಟ ಮತ್ತು ನಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನಾವು ಹೆಚ್ಚಾಗಿ ಎಣ್ಣೆಯುಕ್ತ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಆದರೆ ಇಲ್ಲೊಂದು ವೈರಲ್ ವಿಡಿಯೋ (Viral Video) ಮಾತ್ರ ಭಯ ಹುಟ್ಟಿಸುತ್ತದೆ. ಬೀದಿ ಬದಿಯ ಆಹಾರ ಬೇಡವೇ ಬೇಡ ಎನ್ನುವಂತೆ ಮಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ ಜನಪ್ರಿಯ ಭಾರತೀಯ ಉಪಹಾರ ಖಾದ್ಯವಾದ ಪರಾಠವನ್ನು ತಯಾರಿಸಲು ಡಿಸೇಲ್ ಹಾಕಿರುವುದನ್ನು ತೋರಿಸಲಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆತ ಪರಾಠಾ ತಯಾರಿಸಲು ಡಿಸೇಲ್ ಬಳಕೆ ಮಾಡಿರುವುದನ್ನು ವ್ಯಕ್ತಿಯೊಬ್ಬ ಆತನಿಗೆ ಗೊತ್ತಾಗದಂತೆ ಕೆಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.


ಡಿಸೇಲ್ ನಲ್ಲಿ ತಯಾರಿಸಿದ ಪರಾಠಾವನ್ನು ಗ್ರಾಹಕರಿಗೆ ಬಡಿಸುವ ಆತ “ಎಸ್ಕೊ ಖಕ್ರ್ ಕಚೋರಿ ಕಾ ಟೇಸ್ಟ್ ಆತಾ ಹೈ (ಇದು ಕಚೋರಿಯಂತೆ ರುಚಿಯಾಗಿದೆ) ಎನ್ನುತ್ತಾನೆ. ಪರಾಠಾವನ್ನು ಹುರಿಯಲು ಟಿನ್ ಕ್ಯಾನ್‌ನಿಂದ ಡೀಸೆಲ್ ಸುರಿಯುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಕ್ಯಾನ್ಸರ್‌ಗೆ ನಿಜವಾದ ಪಾಕವಿಧಾನ (ಪೆಟ್ರೋಲ್ ಡೀಸೆಲ್ ವಾಲಾ ಪರಾಠ) ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಚಂಡೀಗಢದ ಬಬ್ಲು ಧಾಬಾ: ಈ ಡೀಸೆಲ್-ಫ್ರೈಡ್ ಪರಾಠವನ್ನು ಎಲ್ಲಿ ತಯಾರಿಸಲಾಗುತ್ತದೆ ಎಂಬುದನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ.
ಆನ್ ಲೈನ್ ನಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ನನ್ನ ಹೊಸ ಅನಾರೋಗ್ಯಕರ ಅಡುಗೆ ಎಣ್ಣೆಗಳ ಪಟ್ಟಿ ಡಿಸೇಲ್ ಪೆಟ್ರೋಲ್ ಬೀಜದ ಎಣ್ಣೆಗಳು ಎಂದು ಬಳಕೆದಾರನೊಬ್ಬ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ಇನ್ನೊಬ್ಬ ಅವನು ಶೀಘ್ರದಲ್ಲೇ ಫೆರಾರಿಯನ್ನು ಖರೀದಿಸುತ್ತಾನೆ ಮತ್ತು ಅವನ ಗ್ರಾಹಕರು ಶೀಘ್ರದಲ್ಲೇ ತಮ್ಮ ಮನೆ ಮತ್ತು ಕಾರುಗಳನ್ನು ಮಾರಾಟ ಮಾಡಲಿದ್ದಾರೆ ಕ್ಯಾನ್ಸರ್ ಚಿಕಿತ್ಸೆಗಾಗಿ ಎಂದು ಹೇಳಿದ್ದಾನೆ.

ಮತ್ತೊಬ್ಬರು ಕನಿಷ್ಠ ಅವರು ತಲೆಯ ಮೇಲೆ ಕ್ಯಾಪ್ ಧರಿಸಿದ್ದರು. ಆದ್ದರಿಂದ ಕ್ಯಾನ್ಸರ್ ಪರಾಠದಲ್ಲಿ ಕೂದಲು ಇಲ್ಲ ಹೇಳಿದ್ದು, ಡಿಸೇಲ್ ಬಳಕೆಯ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದು ಬಹುಶಃ ಕೇವಲ ಹಳೆಯ ಎಣ್ಣೆ. ಡಿಸೇಲ್ ಸುಮಾರು 200ಸಿಗೆ ಬೆಂಕಿಯನ್ನು ಹಿಡಿಯುತ್ತದೆ. ಅಡುಗೆ ಮಾಡುವಾಗ ಥಾವಾ ತಾಪಮಾನವು ಸುಲಭವಾಗಿ 250- 300ಸಿ ತಲುಪುತ್ತದೆ. ಆ ದ್ರವವು ಬೆಂಕಿಯನ್ನು ಹಿಡಿಯದಿದ್ದರೆ ಅದು ಕೇವಲ ಎಣ್ಣೆ ಎಂದು ಅರ್ಥ ಎಂದು ಮತ್ತೊಬ್ಬರು ಹೇಳಿದ್ದು, ಇದು ಡೀಸೆಲ್‌ನಂತೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Viral News: 100 ದಿನ..200ಕ್ಕೂ ಹೆಚ್ಚು ವಿಮಾನಗಳು.. ಮಹಿಳಾ ಪ್ರಯಾಣಿಕರೇ ಈತನ ಟಾರ್ಗೆಟ್‌, ಇದು ಹೈಟೆಕ್‌ ಕಳ್ಳನ ಕಥೆ

ಇದು ಖಂಡಿತವಾಗಿಯೂ ಆರೋಗ್ಯಕರವಲ್ಲ. ಆದರೆ ಇದು ಡಿಸೇಲ್ ಕೂಡ ಅಲ್ಲ.. ಎಂದು ಮತ್ತೊಬ್ಬರು ಹೇಳಿದ್ದಾರೆ.
ಭಾರತದಲ್ಲಿ ಬೀದಿ ಆಹಾರಗಳಿಗೆ ಯಾವುದೇ ರೀತಿಯ ಆಹಾರ ಸುರಕ್ಷತಾ ನಿಯಮಗಳು ಇಲ್ಲವೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

Exit mobile version