Site icon Vistara News

Viral Video: 8 ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಲು ಯತ್ನಿಸಿದ ದೈತ್ಯಾಕಾರದ ಹದ್ದು; ಮೈ ನಡುಗಿಸುವ ವಿಡಿಯೊ

Viral Video


ಬೆಂಗಳೂರು: ಸೋಶಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೊಗಳು ಪೋಸ್ಟ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೊ ನಮಗೆ ಖುಷಿ ನೀಡಿದರೆ, ಕೆಲವೊಂದು ವಿಡಿಯೊಗಳು ನಮ್ಮ ಮೈ ನಡುಗಿಸುತ್ತವೆ. ಅಂತಹದೊಂದು ವಿಡಿಯೊವನ್ನು ಇನ್ಸ್ಟಾಗ್ರಾಮ್ ಪುಟದಲ್ಲಿ “ಪೇಜ್ಪೋಸ್ಟಿಂಗ್ ಅನಿಮಲ್ ಅಟ್ಯಾಕ್” ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇದು ಈಗ ವೈರಲ್(Viral Video) ಆಗುತ್ತಿದೆ.

ಅದು 8 ವರ್ಷದ ಬಾಲಕಿ ಮತ್ತು ದೈತ್ಯಕಾಕಾರ ಗೋಲ್ಡನ್ ಹದ್ದಿನ ನಡುವಿನ ಭಯಾನಕ ಘಟನೆಯನ್ನು ತೋರಿಸುತ್ತದೆ. ಆ ಪುಟ್ಟ ಹುಡುಗಿಯನ್ನು ಹಿಡಿಯಲು ಹದ್ದು ಹಾರುತ್ತಾ ಆಕೆಯ ಮೇಲೆ ದಾಳಿ ಮಾಡುವ ಭಯಾನಕ ಪರಿಸ್ಥಿತಿಯನ್ನು ಈ ವಿಡಿಯೊ ವಿವರಿಸುತ್ತದೆ.

ವಿಡಿಯೊದಲ್ಲಿ, ಗೋಲ್ಡನ್ ಹದ್ದು ಆಕಾಶದಿಂದ ಬಹಳ ವೇಗವಾಗಿ ಕೆಳಗೆ ಬಂದು ಹೊರಗೆ ಆಡುತ್ತಿರುವ ಹುಡುಗಿಯನ್ನು ಹಿಡಿಯುವ ಗುರಿಯೊಂದಿಗೆ ಅದರ ಚೂಪಾದ ಉಗುರುಗಳನ್ನು ಹೊರಗೆ ಚಾಚುತ್ತಾ ಅವಳನ್ನು ಹಿಡಿಯುವ ಪ್ರಯತ್ನ ಮಾಡುತ್ತದೆ. ಆದರೆ ಆಗ ಅಲ್ಲಿಗೆ ಬಂದ ಕೆಲವರು ಆಕೆಯನ್ನು ಆ ಹದ್ದಿನಿಂದ ರಕ್ಷಿಸಿದ್ದಾರೆ.
ಗೋಲ್ಡನ್ ಹದ್ದುಗಳು ಪ್ರಪಂಚದಾದ್ಯಂತದ ಅತ್ಯಂತ ದೊಡ್ಡದಾದ ಪಕ್ಷಿಗಳಲ್ಲಿ ಒಂದಾಗಿದೆ. ಇವುಗಳು ಬೃಹತ್ ರೆಕ್ಕೆಗಳನ್ನು ಮತ್ತು ಬೇಟೆಯ ಕೌಶಲ್ಯಗಳನ್ನು ಹೊಂದಿವೆ. ಇವುಗಳ ಇಂತಹ ದಾಳಿಗಳು ಕಂಡುಬರುವುದು ಬಹಳ ಅಪರೂಪ. ಆದರೆ ಅಂತಹ ದೈತ್ಯಕಾರದ ಪಕ್ಷಿಗಳು ಒಡ್ಡಬಹುದಾದ ಅಪಾಯಗಳ ಬಗ್ಗೆ ತಿಳಿದರೆ ಮೈ ನಡುಗುತ್ತದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟುಮಾಡುತ್ತಿದೆ, ಗೋಲ್ಡನ್ ಹದ್ದುಗಳು ತಿರುಗಾಡುವ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿವಹಿಸದಿರುವುದನ್ನು ಕಂಡು ಅನೇಕರು ಆಶ್ಚರ್ಯ ಮತ್ತು ಭಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇವರು ವಿಶ್ವದ ಅತ್ಯಂತ ಹಿರಿಯ ಬಸ್ ಚಾಲಕ! ವಯಸ್ಸು ಎಷ್ಟು ನೋಡಿ!

ತಜ್ಞರ ಪ್ರಕಾರ, ಗೋಲ್ಡನ್ ಹದ್ದುಗಳು ಸಾಮಾನ್ಯವಾಗಿ ಸಣ್ಣ ಪ್ರಾಣಿಗಳನ್ನು ಹಿಡಿದು ಆಹಾರವನ್ನು ಪಡೆಯುತ್ತವೆ. ಆದರೆ ಈ ಘಟನೆಯು ಹೆಚ್ಚಾಗಿ ಆ ಪಕ್ಷಿಯು ಹೆಚ್ಚಾಗಿ ನೆಲೆಯಾಗಿರುವ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ ಎಂಬುದಾಗಿ ತಿಳಿಸಿದ್ದಾರೆ.

Exit mobile version