Site icon Vistara News

Viral Video: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

Viral Video


ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕ ಮಾತ್ರ. ಅದು ಯಾವ ಕ್ಷಣದಲ್ಲಾದರೂ ಒಡೆಯಬಹುದು. ಹಾಗಾಗಿ ಸಾವು ಯಾರಿಗೆ ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಇದೀಗ ಶಿಕ್ಷಕನೊಬ್ಬ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಸಾವನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದ ಭೈನ್ಸ್ ಲಾನಾ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಮನ್ನಾ ಲಾಲ್ ಜಖರ್ ಡ್ಯಾನ್ಸ್ ಮಾಡುತ್ತಾ ಸಾವನಪ್ಪಿದ ವ್ಯಕ್ತಿ. ಇವರು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಇವರ ಹಿರಿಯ ಸಹೋದರ ಕೆಲಸದಿಂದ ನಿವೃತ್ತಿಯನ್ನು ಹೊಂದಿದ ಪ್ರಯುಕ್ತ ‘ಸತ್ಸಂಗ’ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಆ ಸಮಯದಲ್ಲಿ ಇವರು ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದು, ಆ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ಕುಸಿದು ಬಿದ್ದ ಆ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಮಹಿಳೆಯೊಬ್ಬಳ ಜೊತೆ ಜಖರ್ ಡ್ಯಾನ್ಸ್ ಮಾಡುವಾಗ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದ್ದಾರೆ. ಅವರನ್ನು ಮೇಲೆತ್ತಲು ಕುಟುಂಬಸ್ಥರು ಮತ್ತು ಮತ್ತು ಗ್ರಾಮಸ್ಥರು ಎಷ್ಟೇ ಪ್ರಯತ್ನಿಸಿದರೂ ಅವರು ಎದ್ದೇಳದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಜಖರ್ ಮೃತಪಟ್ಟಿದ್ದಾರೆ ಎಂದ ತಿಳಿಸಿದ್ದಾರೆ. ಜಖರ್‌ಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಈ ಘಟನೆಯು ಕುಟುಂಬ ಮತ್ತು ಗ್ರಾಮವನ್ನು ಆಘಾತಕ್ಕೀಡು ಮಾಡಿದೆ, ಸಂತೋಷದ ಸಂದರ್ಭದ ನಡುವೆ ಈ ಘಟನೆ ಗೊಂದಲವನ್ನುಂಟು ಮಾಡಿದೆ.

ಜೋಧಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಜಖರ್, ಈ ಕಾರ್ಯಕ್ರಮಕ್ಕಾಗಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಆದರೆ ಈ ರೀತಿಯಲ್ಲಿ ದುರಂತಕ್ಕೀಡಾದರು. ಅವರ ಸಾವಿನ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮನುಷ್ಯ ಹೇಗೆ ಅಕಾಲಿಕ ಸಾವಿಗೆ ಗುರುಯಾಗುತ್ತಾನೆ ಎಂಬುದನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Viral Video

ಈ ಹಿಂದೆ ಈ ವರ್ಷದ ಮೇ ತಿಂಗಳಿನಲ್ಲಿ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಮಲನ್ವಾಸಾ ಗ್ರಾಮದಲ್ಲಿ ಭಜನೆಗೆ ನೃತ್ಯ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಯ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೃತರನ್ನು ರಾಜಸ್ಥಾನ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಜೋಧ್ರಾಜ್ ನಗರ್ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಸಂಜೆ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ನಾಗರ್ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನಪ್ಪಿದ್ದರು.

Exit mobile version