Site icon Vistara News

Viral Video: ವಿಮಾನ ನಿಲ್ದಾಣದಲ್ಲಿ ಹೃದಯಾಘಾತ; ಸಿಪಿಆರ್ ಮಾಡಿ ಜೀವ ಉಳಿಸಿದ ಅಧಿಕಾರಿಗಳು

Viral Video


ನವದೆಹಲಿ: ದೆಹಲಿಯ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ನಿಂತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಕೆಳಗೆ ಕುಸಿದು ಬಿದ್ದಿದ್ದರು. ತಕ್ಷಣ ಅಲ್ಲೇ ಇದ್ದ ಸಿಐಎಸ್ಎಫ್ ಸಿಬ್ಬಂದಿಯೊಬ್ಬರು ಸಿಪಿಆರ್ ಮಾಡಿ ಹೃದಯ ಸ್ತಂಭನದಿಂದ ಬಳಲುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಅರ್ಷಿದ್ ಅಯೂಬ್ ಎಂದು ಗುರುತಿಸಲಾಗಿದ್ದು, ಅವರು ಆ ಸಮಯದಲ್ಲಿ ವಿಮಾನ ಹತ್ತಲು ತಯಾರಿ ನಡೆಸುತ್ತಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಗ ಅವರ ಸುತ್ತ ಜನರು ತುಂಬಿಕೊಂಡರು. ಆಗ ಅಲ್ಲಿಗೆ ಬಂದ ಸಿಐಎಸ್ಎಫ್ ಸಿಬ್ಬಂದಿಗಳಲ್ಲಿ ಒಬ್ಬರು ಅವರಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ತಮ್ಮ ಸಿಬ್ಬಂದಿಯ ತ್ವರಿತ ಕ್ರಮವು ಪ್ರಯಾಣಿಕ ಅರ್ಷಿದ್ ಅಯೂಬ್ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸಿಐಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರ ಬೆಳಗ್ಗೆ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಅಯೂಬ್ ಹೃದಯ ಸ್ತಂಭನದಿಂದಾಗಿ ಕುಸಿದುಬಿದ್ದಿದ್ದರು. ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸಿಐಎಸ್ಎಫ್ ತಿಳಿಸಿದೆ.

ಸಾಮಾನು ಸರಂಜಾಮಿನ ಟ್ರಾಲಿಯೊಂದಿಗೆ ನಿಂತಿದ್ದಾಗ ಅಯೂಬ್ ನೆಲಕ್ಕೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಸ್ತು ತಿರುಗುತ್ತಿದ್ದ ಸಿಐಎಸ್ಎಫ್ ಅಧಿಕಾರಿ ಡಾ. ಪ್ರಿಯಾ ಸಹಾಯಕ್ಕೆ ಧಾವಿಸಿದರು. ಹೃದಯ ನಿಂತಾಗ ಉಸಿರಾಟ ಮತ್ತು ರಕ್ತಪರಿಚಲನೆಯನ್ನು ಪುನಃಸ್ಥಾಪಿಸಲು ಬಳಸುವ ನಿರ್ಣಾಯಕ ತುರ್ತು ಕಾರ್ಯವಿಧಾನವಾದ ಸಿಪಿಆರ್‌ಅನ್ನು ಅವರು ಮಾಡಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಅನೇಕರು ಸಿಬ್ಬಂದಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನಾವು ಆ ದಿನ ಅಮರನಾಥ ಯಾತ್ರೆಯಿಂದ ಹಿಂದಿರುಗಿದೆವು. ನಮ್ಮ ವಿಮಾನ ಬರುವುದು ತಡವಾಗಿತ್ತು. ಆ ಸಮಯದಲ್ಲಿ, ನಾವು ಫುಡ್ ಕೋರ್ಟ್ ಪ್ರದೇಶದಲ್ಲಿದ್ದೆವು. ಹತ್ತಿರದ ಸ್ಟಾಲ್‌ನಲ್ಲಿ ವೃದ್ಧರೊಬ್ಬರು ಇದ್ದಕ್ಕಿದ್ದಂತೆ ಬಿದ್ದರು. ದೇವರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಯಾವುದೇ ಕೆಲಸವನ್ನು ದೇವರ ಸಂಕೇತಗಳೊಂದಿಗೆ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಕನಿಷ್ಠ ಸಮಯೋಚಿತ ಸಿಪಿಆರ್ ಈ ಜೀವ ಉಳಿಸುವ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತುರ್ತು ಸಂದರ್ಭಗಳಲ್ಲಿ ಸಮಯೋಚಿತ ವೈದ್ಯಕೀಯ ಪ್ರತಿಕ್ರಿಯೆ ಒಂದು ಪ್ರಮುಖ ಅಂಶವಾಗಿದೆ” ಎಂದು ಡಾ. ಪ್ರಿಯಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಶವಾಗಾರದಲ್ಲಿ ಶವಗಳ ಪಕ್ಕದಲ್ಲೇ ಲೈಂಗಿಕ ಕ್ರಿಯೆ! ಸಂಚಲನ ಮೂಡಿಸಿದೆ ಈ ವಿಡಿಯೊ

Exit mobile version