ನೋಯ್ಡಾ: ಕಾಮುಕರ ಅಟ್ಟಹಾಸ ಎಲ್ಲೆಡೆ ಕಂಡು ಬರುತ್ತಿದೆ. ಹಾಡಹಗಲೇ ರಾಸಲೀಲೆ ನಡೆಸುತ್ತಿರುವ ಪ್ರಕರಣಗಳು, ವಿಡಿಯೊಗಳು ಬಯಲಾಗುತ್ತಲೇ ಇವೆ. ಇದೀಗ ಜನ ಶವಾಗಾರದಲ್ಲಿಯೂ ಕೂಡ ಲೈಂಗಿಕ ಚಟುವಟಿಕೆ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಸ್ಟ್ರೆಚರ್ ಮೇಲೆ ಇರಿಸಲಾದ ಶವದ ಮುಂದೆ ಕ್ಲೀನರ್ ಮತ್ತು ಮಹಿಳೆಯೊಬ್ಬಳು ಆಕ್ಷೇಪಾರ್ಹ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.
6.17 ನಿಮಿಷದ ಈ ವಿಡಿಯೊದಲ್ಲಿ ಮಹಿಳೆಯೊಂದಿಗೆ ಶವಾಗಾರದ ಕ್ಲೀನರ್ ಇರುವುದು ಕಂಡುಬಂದಿದೆ. ಅಲ್ಲಿ ಶವವನ್ನು ಸ್ಟ್ರೆಚರ್ ಮೇಲೆ ಇಡಲಾಗಿದೆ. ಅದರ ಕೆಳಗೆ ನೆಲದ ಮೇಲೆ ಅವನು ಮಹಿಳೆಯನ್ನು ಮಲಗಿಸುತ್ತಿದ್ದಾನೆ. ಮತ್ತು ಅವಳ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದಾನೆ. ಆದರೆ ಅಲ್ಲಿದ್ದ ಮಹಿಳೆ ಅದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಇದರಿಂದ ಆಕೆ ಇದಕ್ಕೆ ಅನುಮತಿ ನೀಡಿದ್ದಾಳೆ ಎಂಬುದು ತಿಳಿಯುತ್ತದೆ. ಶವಗಳ ಪಕ್ಕದಲ್ಲೇ ಇವರು ಚಕ್ಕಂದ ಆಡುತ್ತಿರುವುದು ಅಚ್ಚರಿ ಮೂಡಿಸಿದೆ.
नोएडा के पोस्टमार्टम हाउस में देह व्यापार का धंधा
— Abhishek Tyagi (@abhishek03tyagi) August 22, 2024
नोएडा के पोस्टमॉर्टम हाउस में महिला के साथ आपत्तिजनक स्थित में मिला सफाईकर्मी, शव के पास महिला से बनाए शारीरिक संबंध, वीडियो सोशल मीडिया पर वायरल। @dmgbnagar @brajeshpathakup @CMOfficeUP #Noida pic.twitter.com/BN9TmBphP6
ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಾನದಲ್ಲಿದ್ದ ಕ್ಲೀನರ್ ಅನ್ನು ಈ ವರ್ಷದ ಜೂನ್‍ನಲ್ಲಿ, ಡಂಕೌರ್ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕೆಲಸ ನೀಡಲಾಗಿತ್ತು. ಆದರೆ ಆತ ಕೆಲಸದ ದಿನಗಳಲ್ಲಿ ರಜೆಯ ಮೇಲೆ ಮನೆಗೆ ಹೋಗಿದ್ದ. ಕೆಲಸಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲೇ ಮದ್ಯಪಾನ ಮಾಡಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಅವನ ಮೇಲಿದೆ. ಅಲ್ಲದೇ ಈ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಶವಗಳನ್ನು ಘಾಸಿಗೊಳಿಸುವ ಮೂಲಕ ಸಾಕ್ಷ್ಯ ನಾಶ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಆ ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವಿಡಿಯೊದಲ್ಲಿ ಕಂಡುಬರುವ ಮಹಿಳೆ ಹೊರಗಿನವಳು ಎನ್ನುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಹಿಂದೂ ಬಾಲಕಿ ಮೇಲೆ ಅತ್ಯಾಚಾರ; ಬೃಹತ್ ಪ್ರತಿಭಟನೆ
ಇಲ್ಲಿನ ಶವಾಗಾರಕ್ಕೆ ಪ್ರತಿದಿನ ಐದರಿಂದ ಏಳು ಶವಗಳು ಮರಣೋತ್ತರ ಪರೀಕ್ಷೆಗಾಗಿ ಬರುತ್ತವೆ. ಇವುಗಳಲ್ಲಿ ಮಹಿಳೆಯರು, ಹದಿಹರೆಯದವರು, ಹುಡುಗಿಯರು ಮತ್ತು ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರ ದೇಹಗಳು ಸೇರಿವೆ. ಅವುಗಳಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಕೊಲೆ, ಆತ್ಮಹತ್ಯೆ ಇತ್ಯಾದಿ ಪ್ರಕರಣಗಳ ಶವಗಳಿರುತ್ತವೆ. ಈ ಶವಾಗಾರದಲ್ಲಿ ಎರಡು ಪಾಳಿಗಳಲ್ಲಿ ಇಬ್ಬರು ಕಾವಲುಗಾರರು ಇದ್ದಾರೆ.