Site icon Vistara News

Viral Video: ಬುರ್ಖಾ ಧರಿಸಿ ಬೈಕ್ ಸ್ಟಂಟ್ ಮಾಡಿದ ಯುವಕರು ಪೊಲೀಸರ ಅತಿಥಿಗಳಾದರು!

Viral Video


ಹೈದರಾಬಾದ್: ಇಂದಿನ ಕೆಲವು ಯುವಜನರು ಬೈಕ್‍ನಲ್ಲಿ ಸ್ಟಂಟ್ ಮಾಡುವಂತಹ ಗೀಳನ್ನು ಹೊಂದಿದ್ದಾರೆ. ಅದಕ್ಕಾಗಿ ಅವರು ರಸ್ತೆಯಲ್ಲಿ ತಮಗಾಗುವ ಅಪಾಯವನ್ನು ಲೆಕ್ಕಿಸದೆ ಸ್ಟಂಟ್ ಮಾಡುತ್ತಾರೆ. ಇದೇರೀತಿ ಇತ್ತೀಚೆಗೆ ಹೈದರಾಬಾದ್‍ನಲ್ಲಿ ಯುವಕರು ಬುರ್ಖಾ ಧರಿಸಿ ಬೈಕ್ ಸ್ಟಂಟ್ ಮಾಡಿದ ಹಿನ್ನಲೆಯಲ್ಲಿ , ತಮ್ಮ ಕಾರ್ಯಗಳನ್ನು ಚಿತ್ರೀಕರಿಸಿದ ಮತ್ತು ಇದೆಲ್ಲವನ್ನೂ ಮಾಡಿದ್ದ ನಗರದ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಅವರೆಲ್ಲರೂ ಬುರ್ಖಾ ಧರಿಸಿ ಬೈಕ್‍ನಲ್ಲಿ ಸ್ಟಂಟ್ ಮಾಡಿದ್ದಾರೆ ಮಾತ್ರವಲ್ಲದೇ , ಅದನ್ನು ರೆಕಾರ್ಡ್ ಮಾಡಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದರು. ಇದು ವೈರಲ್(Viral Video) ಆಗಿದೆ.

ಹೈದರಾಬಾದ್ ಪೊಲೀಸರು ಈ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಗಮನಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಈ ಯುವಕರನ್ನು ಬಂಧಿಸಿದ್ದಾರೆ. ಹಾಗೇ ಇಂತಹ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡ ನಡೆದಿರುವುದಾಗಿ ವರದಿಯಾಗಿದೆ. ಇತ್ತೀಚೆಗೆ, ಜನನಿಬಿಡ ಬೆಂಗಳೂರು ರಸ್ತೆಯಲ್ಲಿ ಹುಡುಗರ ಗುಂಪು ಅಪಾಯಕಾರಿ ಬೈಕ್ ಸ್ಟಂಟ್‍ಗಳನ್ನು ಮಾಡುತ್ತಿರುವ ವಿಡಿಯೊ ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್ ಎಕ್ಸ್‌ನಲ್ಲಿ ಹರಿದಾಡಿದೆ. ನಗರ ಪೊಲೀಸರು ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಹುಡುಗರು ಹೆಲ್ಮೆಟ್ ಧರಿಸದೆ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ಇಲ್ಲಿ ಹುಡುಗರು “ವ್ಹೀಲಿ” ಎಂದು ಕರೆಯಲ್ಪಡುವ ಸ್ಟಂಟ್ ಅನ್ನು ಮಾಡುವುದನ್ನು ಕಾಣಬಹುದು, ಇದರಲ್ಲಿ ಅವರು ಬೈಕ್‍ನ ಮುಂಭಾಗವನ್ನು ಎತ್ತುತ್ತಾರೆ ಮತ್ತು ಹಿಂಭಾಗದ ಚಕ್ರದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬೈಕ್ ಡ್ರೈವ್ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸರು “ನಗರದ ರಸ್ತೆಗಳಲ್ಲಿ ವ್ಹೀಲಿಂಗ್? ನಿಮ್ಮ ಸಾಹಸವನ್ನು ನಿಲ್ಲಿಸಲು ನಮ್ಮ ಅಧಿಕಾರಿಗಳು ಯಾವಾಗಲೂ ಸಿದ್ಧರಾಗಿದ್ದಾರೆ” ಎಂದು ಪ್ಲಾಟ್‍ಫಾರ್ಮ್‍ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ; ಹೆಡ್ ಕಾನ್‌ಸ್ಟೇಬಲ್‌ ಹೀರೋನಂತೆ ಜೀವ ರಕ್ಷಿಸಿದ!

ಬೆಂಗಳೂರಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಬೆಂಗಳೂರಿನ ಸ್ಥಳೀಯರು ಜನನಿಬಿಡ ರಸ್ತೆಗಳು ಮತ್ತು ಫ್ಲೈಓವರ್‌ಗಳಲ್ಲಿ ಯುವಕರು ವ್ಹೀಲಿಂಗ್ ಮಾಡುವುದನ್ನು ನೋಡಿ ನಿರಾಶೆಗೊಂಡು ಫ್ಲೈಓವರ್ ನಿಂದ ಕೆಳಗೆ ಬೈಕ್‍ಗಳನ್ನು ಎಸೆದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಜನರು ಫ್ಲೈಓವರ್ ನಿಂದ ಹಳದಿ ಬಣ್ಣದ ಬೈಕ್ ಅನ್ನು ಎಸೆಯುತ್ತಿರುವುದನ್ನು ಕಾಣಬಹುದು. ಅಲ್ಲದೇ ಇತ್ತೀಚೆಗೆ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಬಳಿ ವೋಲ್ವೋ ಚಾಲಕನೊಬ್ಬ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದ. ಇದರಿಂದ ಹಲವು ವಾಹನವು ರಸ್ತೆಯಲ್ಲಿ ಚಲಿಸುತ್ತಿದ್ದ ಹಲವಾರು ಬೈಕುಗಳು ಮತ್ತು ಕಾರುಗಳಿಗೆ ಡಿಕ್ಕಿ ಹೊಡೆದಿದ್ದವು.

Exit mobile version