ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಯುವ ಜನರಲ್ಲಿ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೇಮಸ್ ಆಗಲು ಹಾಗೂ ಹೆಚ್ಚು ಫಾಲೋವರ್ಸ್‍ಗಳನ್ನು ಪಡೆಯಲು ಜನರು ಎಲ್ಲೆಂದರಲ್ಲಿ ಜೀವದ ಅಪಾಯವನ್ನು ಅರಿಯದೇ ರೀಲ್ಸ್ ಮಾಡಲು ಮುಂದಾಗುತ್ತಾರೆ. ಈಗಾಗಲೇ ಅನೇಕ ಜನರು ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ ಹಾಗೇ ಎಷ್ಟೋ ಜನರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಅಲ್ಲದೇ ಇಂತಹ ಅಪಾಯಕಾರಿ ರೀಲ್ಸ್ ಮಾಡುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದರೂ ಜನರಿಗೆ ಇನ್ನೂ ರೀಲ್ಸ್ ಮಾಡುವ ಹುಚ್ಚು ಬಿಡಲಿಲ್ಲ. ಸಾಮಾನ್ಯ ಜನರ ವಿಷಯ ಬಿಡಿ ಈ ಬಗ್ಗೆ ಜನರಿಗೆ ತಿಳಿ ಹೇಳಬೇಕಾಗಿದ್ದ ಪೊಲೀಸ್ ಅಧಿಕಾರಿಗೂ ಕೂಡ ರೀಲ್ಸ್ ಮಾಡುವ ಹುಚ್ಚು ಹಿಡಿದಿದೆ. ಇತ್ತೀಚೆಗೆ ಕರ್ತವ್ಯ ಪ್ರಜ್ಞೆಯನ್ನು ಮರೆತು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರೇಯಸಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video)ಆಗಿದೆ.
"मेरा बालम थानेदार चलावे जिप्सी"
— अन्याय के विरुद्ध न्याय की लड़ाई 👮♂️ थाना हंडिया (@ajaykum68704718) August 5, 2024
पुलिस साहेब तो प्रेमिका को गन देखर #Reel बनाने के सौखिया निकले । कहीं बटन दब जाती तो थानेदार बालम की सब हवा निकल जाती ।#ViralVideos @Uppolice #ReelShort #Reels #Paris2024 pic.twitter.com/OruLk8Czkx
ವೈರಲ್ ಆದ ವಿಡಿಯೊದಲ್ಲಿ ಬೆಡ್ ರೂಂನಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಕುಳಿತಿದ್ದ ಗರ್ಲ್ ಫ್ರೆಂಡ್ ಕೈಗೆ ಪಿಸ್ತೂಲ್ ಕೊಟ್ಟು ಸಮವಸ್ತ್ರದಲ್ಲಿಯೇ ಪೊಲೀಸ್ ಅಧಿಕಾರಿ ರೀಲ್ಸ್ ಮಾಡಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಮೇರಾ ಬಲಂ ತಾನೆದಾ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅಜಯ್ (ajayku68704718) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಅದಕ್ಕೆ “ಗೆಳತಿಯ ಕೈಗೆ ಪಿಸ್ತೂಲ್ ಕೊಟ್ಟು ರೀಲ್ಸ್ ವಿಡಿಯೊ ಮಾಡುತ್ತಾ ಕುಳಿತ ಪೊಲೀಸ್ ಅಧಿಕಾರಿ” ಎಂಬ ಶೀರ್ಷಿಕೆ ನೀಡಿದ್ದಾರೆ.
ಆಗಸ್ಟ್ 5ರಂದು ಹಂಚಿಕೊಳ್ಳಲಾದ ಈ ವಿಡಿಯೊ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಹಾಗೂ ಹಲವರು ಇದಕ್ಕೆ ಕಾಮೆಂಟ್ ಮಾಡದ್ದಾರೆ. ಒಬ್ಬ ಬಳಕೆದಾರರು ʼಛಿ… ಛೀ ನಾಚಿಕೆಗೇಡಿನ ಸಂಗತಿʼ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂಬ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಪಾಯಕಾರಿ ರೀಲ್ಸ್ ಗಳನ್ನು ಕಂಡು ಕೆಲವರು ಇಂತಹ ಅಪಾಯಕಾರಿ ರೀಲ್ಸ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು. ಆದರೆ ಇಲ್ಲಿ ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ಅಧಿಕಾರಿಯೇ ಇಂತಹ ಘನ ಕಾರ್ಯದಲ್ಲಿ ತೊಡಗಿದ ಮೇಲೆ ಜನರು ಮನವಿ ಮಾಡುವುದಾದರೂ ಯಾರ ಬಳಿ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಮನೆಮಾಡಿದೆ.