ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯರಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿದ್ದಾರೆ. ಆಗ ಒಬ್ಬ ವಿದ್ಯಾರ್ಥಿನಿ ಯುವಕನಿಗೆ ಸಾರ್ವಜನಿಕ ಸ್ಥಳದಲ್ಲೇ ಕೆನ್ನೆಗೆ ಬಾರಿಸಿದ್ದಾಳೆ. ಉತ್ತರ ಪ್ರದೇಶದ ಬುಲಂದ್‍ಶಹರ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಈ ವಿದ್ಯಾರ್ಥಿಗಳನ್ನು ಆಗಾಗ ಹಿಂಬಾಲಿಸುತ್ತಿದ್ದ ಯುವಕರು, ಅವರಿಗೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಅವರು ಮಾರುಕಟ್ಟೆಯಲ್ಲಿದ್ದಾಗ ಸಾರ್ವಜನಿಕವಾಗಿ ಅವರಲ್ಲಿ ಒಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಆಗ ಆ ಯುವಕ ಕೂಡ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಆದರೂ, ಹೆದರದ ವಿದ್ಯಾರ್ಥಿನಿ ಧೈರ್ಯ ಮಾಡಿ ಮತ್ತೊಮ್ಮೆ ಯುವಕನಿಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತಿದಾಳಿ ನಡೆಸಿದ್ದಾಳೆ.
"स्कूल से घर लौट रही छात्रा से सरेआम हुई छेड़छाड़, CCTV में कैद"
— निशान्त शर्मा (भारद्वाज) (@Nishantjournali) August 6, 2024
उत्तर प्रदेश: बुलन्दशहर के खानपुर में बाइक सवार मनचलों ने स्कूल से लौट रही छात्राओं से की छेड़छाड़ ,अक्सर स्कूल आते जाते वक्त छात्राओं का पीछा करते हैं मनचले ,बाइक सवार दो मनचलों ने सरे बाजार छात्राओं से की मारपीट… pic.twitter.com/DX4d5jYwkI
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಘಟನೆಯ ವಿಡಿಯೊದಲ್ಲಿ, ಸಮವಸ್ತ್ರ ಧರಿಸಿದ ವಿದ್ಯಾರ್ಥಿನಿ ತನ್ನ ಸೈಕಲ್‌ನಿಂದ ಇಳಿದು ತನಗೆ ಕಿರುಕುಳ ನೀಡಿದ ಯುವಕನ ಮುಂದೆ ಬಂದು ಕಪಾಳಮೋಕ್ಷ ಮಾಡಿದ್ದಾಳೆ. ಆಗ ಆತ ಕೂಡ ಆಕೆಯ ಮೇಲೆ ಪ್ರತಿದಾಳಿ ಮಾಡಿದ್ದಾನೆ. ನಂತರ ಅವರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಈ ಸಮಯದಲ್ಲಿ ವ್ಯಕ್ತಿಯು ಹುಡುಗಿಗೆ ಕಪಾಳಮೋಕ್ಷ ಮಾಡಿದನು. ಹತ್ತಿರದ ಅಂಗಡಿಗಳಿಂದ ನೋಡುಗರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೊದಲು ಅವಳು ಯುವಕನ ಕಪಾಳಕ್ಕೆ ಬಾರಿಸಿದ್ದಾಳೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಬುಲಂದ್‍ಶಹರ್ ಪೊಲೀಸರು ಈ ಬಗ್ಗೆ ತನಿಖೆ ಮಾಡಿದ್ದಾರೆ.
“ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ಹಲವಾರು ದಿನಗಳಿಂದ ನನ್ನನ್ನು ಹಿಂಬಾಲಿಸುತ್ತಿದ್ದರು. ಇಬ್ಬರೂ ಯುವಕರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ಕಿರುಕುಳ ನೀಡಿದರು. ಈ ಸಮಯದಲ್ಲಿ ತಾನು ಕಿರುಕುಳದ ವಿರುದ್ಧ ಪ್ರತಿಭಟಿಸಿದಾಗ, ಇಬ್ಬರು ಆರೋಪಿಗಳು ತನ್ನನ್ನು ಥಳಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.
ಇದನ್ನೂ ಓದಿ: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ ‘ಕಪಿ ಚೇಷ್ಟೆ’! ಪರಿಣಾಮ ಏನಾಯ್ತು ನೋಡಿ!
ಈ ಪ್ರಕರಣದಲ್ಲಿ ಖಾನ್ಪುರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಹಾಗೇ ಈ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯವನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.