ಸಾಮಾನ್ಯ ಜನರು ಕೆಲವೊಮ್ಮೆ ಟಿಕೆಟ್ ಇಲ್ಲದೆ ಬಸ್, ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಪೊಲೀಸ್ ಅಧಿಕಾರಿಗಳು ಇಂತಹ ಕೆಲಸ ಮಾಡಿದರೆ ಅದು ಅವರನ್ನು ಕೆಳಮಟ್ಟಕ್ಕೆ ಇಳಿಸುತ್ತದೆ. ಇದೀಗ ಪೊಲೀಸರು ಟಿಕೆಟ್ ಇಲ್ಲದೆ 2ನೇ ಎಸಿ ಬೋಗಿಯಲ್ಲಿ ಪ್ರಯಾಣ ಮಾಡಿ ತಮ್ಮ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಈ ವಿಡಿಯೊದಲ್ಲಿ ಇಬ್ಬರು ಪೊಲೀಸರು ಟಿಕೆಟ್ ಇಲ್ಲದೆ ರೈಲಿನ 2ನೇ ಎಸಿ ಬೋಗಿಯಲ್ಲಿ ಅಕ್ರಮವಾಗಿ ಪ್ರಯಾಣಿಸುತ್ತಿದ್ದಾರೆ. ಟಿಟಿಇಯವರು ಬಂದು ಪೊಲೀಸರನ್ನು ಪ್ರಶ್ನಿಸಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ ಮತ್ತು ಅಲ್ಲಿ ವಾದವಿವಾದಗಳು ಶುರುವಾಗಿದೆ. ಆ ವೇಳೆ ಪೊಲೀಸರು ತಾವು ಅಧಿಕಾರಿಗಳೆಂಬ ದರ್ಪ ತೋರಿದ್ದಾರೆ. ಸಮವಸ್ತ್ರದಲ್ಲಿದ್ದ ಪೊಲೀಸರು ರೈಲ್ವೆ ನಿಯಮಗಳನ್ನು ಧಿಕ್ಕರಿಸಿ ಟಿಟಿಇಯೊಂದಿಗೆ ವಾದದಲ್ಲಿ ತೊಡಗಿ ಅಧಿಕಾರವನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಈ ವಿಡಿಯೊದಿಂದ ತಿಳಿಯುತ್ತದೆ. ಇವರ ನಡುವಿನ ಘರ್ಷಣೆ ಹೆಚ್ಚಾಗಿ, ಅವರು ಟಿಟಿಇಗೆ ಬೆದರಿಕೆ ಹಾಕಿದ್ದಾರೆ. ಇದು ಕರ್ತವ್ಯದಲ್ಲಿದ್ದ ಪೊಲೀಸರ ಅಶಿಸ್ತಿತನ್ನು ಸೂಚಿಸುತ್ತದೆ.
Kalesh over Police traveling without ticket inside Indian railways 2nd ac coach
— Ghar Ke Kalesh (@gharkekalesh) August 9, 2024
pic.twitter.com/zqeIpRJld7
ವರದಿ ಪ್ರಕಾರ, ಪೊಲೀಸರ ಬಳಿ ಟಿಕೆಟ್ ಇಲ್ಲ ಎಂದು ತಿಳಿದ ಪ್ರಯಾಣಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಟಿಟಿಇ ಅವರ ಬಳಿ ಟಿಕೆಟ್ ತೋರಿಸಲು ಹೇಳಿದ್ದಾರೆ. ಪೊಲೀಸರ ಈ ದುರ್ನಡತೆಯು ಬೋಗಿಯಲ್ಲಿ ಕೋಲಾಹಲವನ್ನು ಹುಟ್ಟುಹಾಕಿತು. ಮತ್ತು ಕಾನೂನನ್ನು ನಿರ್ಲಕ್ಷಿಸುವ ಮತ್ತು ಇತರರನ್ನು ಗೌರವಿಸುವ ಬಗ್ಗೆ ಅಸಮಾಧಾನವನ್ನು ಉಂಟುಮಾಡಿದೆ ಎನ್ನಲಾಗಿದೆ.
ಈ ವಿಡಿಯೊವನ್ನು ‘ಘರ್ ಕೆ ಕಾಲೇಶ್’ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ವೈರಲ್ ಆಗಿ ಸಾಕಷ್ಟು ಟೀಕೆಗಳನ್ನು ಪಡೆದಿದೆ. ಇದು ಪೊಲೀಸರ ದರ್ಪವನ್ನು ತೋರಿಸುತ್ತದೆ. ಇದರಲ್ಲಿ ಸಮವಸ್ತ್ರದಲ್ಲಿರುವ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ನಿಯಮಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ.
ಇದನ್ನೂ ಓದಿ:ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!
ಸಮವಸ್ತ್ರದಲ್ಲಿರಲಿ ಅಥವಾ ಇಲ್ಲದಿರಲಿ, ಯಾವುದೇ ವ್ಯಕ್ತಿಯು ಕಾನೂನಿಗಿಂತ ಮೇಲಲ್ಲ. ಭಾರತೀಯ ರೈಲ್ವೆಯು ಟಿಕೆಟ್ ಇಲ್ಲದೆ ಪ್ರಯಾಣಿಸುವುದರ ವಿರುದ್ಧ ಕಠಿಣ ಕಾನೂನು ಮತ್ತು ನಿಬಂಧನೆಗಳನ್ನು ಹೊಂದಿದೆ, ಇದು ಎಲ್ಲರಿಗೂ ಅನ್ವಯಿಸುತ್ತದೆ. ಒಬ್ಬರ ಸ್ಥಾನ ಅಥವಾ ಅಧಿಕಾರವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಕಾನೂನು ಮಾನದಂಡಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕು ಎಂಬ ಅಂಶವನ್ನು ಇದು ಎತ್ತಿ ಹಿಡಿಯುತ್ತದೆ.