Site icon Vistara News

Viral Video: ಆ್ಯಪಲ್ ಹೀಗೂ ತಿನ್ನಬಹುದು; ನೀವೂ ಟ್ರೈ ಮಾಡಿ ನೋಡಿ!

Viral Video


ನವದೆಹಲಿ: ಸೋಶಿಯಲ್ ಮೀಡಿಯಾಗಳಲ್ಲಿ ಕೆಲವರು ಆಗಾಗ ತಮ್ಮ ಅಸಾಮಾನ್ಯ ಪ್ರತಿಭೆಗಳನ್ನು ಹೊರಹಾಕುತ್ತಾರೆ. ಅವರ ಪ್ರತಿಭೆಗಳನ್ನು ನೋಡಿದವರಿಗೆ ಇದರಿಂದ ಆನಂದದ ಜೊತೆಗೆ ಆಶ್ಚರ್ಯವೂ ಆಗುತ್ತದೆ. ನಾವು ಹೆಚ್ಚಾಗಿ ಸೋಶಿಯಲ್ ಮಿಡಿಯಾಗಳಲ್ಲಿ ಜನರು ಹಣ್ಣುಗಳು ಅಥವಾ ಬಾಲ್‍ಗಳನ್ನು ಜಗ್ಲಿಂಗ್ ಮಾಡುವ ವಿಡಿಯೊಗಳನ್ನು ನೋಡಿರುತ್ತೇವೆ. ಆದರೆ ಹಣ್ಣುಗಳನ್ನು ಜಗ್ಲಿಂಗ್ ಮಾಡುತ್ತಾ ಅದನ್ನು ತಿನ್ನವ ದೃಶ್ಯವನ್ನು ಯಾರೂ ನೋಡಿರುವುದಿಲ್ಲ. ಇದೀಗ ಅಂತಹದೊಂದು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬ ಸೇಬುಗಳನ್ನು ಜಗ್ಲಿಂಗ್ ಮಾಡುವಾಗ ಅದನ್ನು ತಿನ್ನುತ್ತಿರುವುದು ಕಂಡುಬಂದಿದೆ.

ವ್ಯಕ್ತಿಯು 3 ಸೇಬುಹಣ್ಣುಗಳನ್ನು ಜಗ್ಲಿಂಗ್ ಮಾಡುವುದಲ್ಲದೆ, ಅವುಗಳನ್ನು ಜಗ್ಲಿಂಗ್ ಮಾಡುವಾಗ ಅವುಗಳನ್ನು ಏಕಕಾಲದಲ್ಲಿ ತಿನ್ನುತ್ತಿದ್ದನು. ಈ ವಿಡಿಯೋ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ವ್ಯಕ್ತಿಯ ವಿಶಿಷ್ಟ ಪ್ರತಿಭೆಯನ್ನು ಹೊಗಳಿದ್ದಾರೆ. ವಿಡಿಯೊದಲ್ಲಿ ಆ ವ್ಯಕ್ತಿಯು ಪ್ರತಿ ಬಾರಿ ಸೇಬನ್ನು ಮೇಲೆ ಎಸೆದಾಗಲೆಲ್ಲಾ ಅದನ್ನು ಕಚ್ಚುವುದನ್ನು ಕಾಣಬಹುದು. ಅವರು ಈ ಕ್ರಿಯೆ ಮಾಡುವ ವೇಗವನ್ನು ನೋಡಿದರೆ ಅದು ಎಡಿಟ್ ಮಾಡಿದ ವಿಡಿಯೊ ಹಾಗೇ ಕಾಣುವಂತೆ ಮಾಡುತ್ತದೆ, ಏಕೆಂದರೆ ಅವನಿಗೆ ಎಲ್ಲೂ ಕೂಡ ಅದರ ಲಯ ತಪ್ಪಿಹೋಗಿಲ್ಲ.

ವಿಡಿಯೊದಲ್ಲಿರುವ ವ್ಯಕ್ತಿಯನ್ನು ವೃತ್ತಿಪರ ಜಗ್ಲರ್ ಬ್ರಿಯಾನ್ ಪ್ಯಾಂಕಿ ಎಂದು ಗುರುತಿಸಲಾಗಿದೆ. 56 ಮಿಲಿಯನ್ ವೀಕ್ಷಣೆಗಳನ್ನು ಪಡೆದ ಈ ವೈರಲ್ ವಿಡಿಯೊ ನೆಟ್ಟಿಗರಿಂದ ಹಾಸ್ಯಮಯ ಕಾಮೆಂಟ್‍ಗಳನ್ನು ಪಡೆದುಕೊಂಡಿದೆ. ಹೆಚ್ಚಿನ ವೀಕ್ಷಕರು ವಿಡಿಯೊದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. “ಇದನ್ನು ನಂಬಲು ಅಸಾಧ್ಯ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಅದು ಕೆಲವು ಅಸಾಮಾನ್ಯ ಪ್ರತಿಭೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: ಈ ಮೀನಿನ ದೇಹದಲ್ಲಿದೆ 860 ವೋಲ್ಟ್ ವಿದ್ಯುತ್! ಇದನ್ನು ತಿನ್ನಲು ಹೋದ ಮೊಸಳೆ ಕತೆ ಏನಾಯ್ತು ನೋಡಿ!

ಆ ವ್ಯಕ್ತಿ ಮತ್ತು ಅವನ ಪ್ರತಿಭೆಯನ್ನು ಪ್ರಶಂಸಿಸಲು ಇನ್ನೂ ಹಲವರು ಕಾಮೆಂಟ್ ವಿಭಾಗದಲ್ಲಿ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬರು ಇಂತಹ ಪ್ರತಿಭೆಗಳನ್ನು ಹೇಗೆ ಕಲಿಯುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಜಗ್ಲರ್ ಏಕಕಾಲದಲ್ಲಿ ಅನೇಕ ಸೇಬುಗಳನ್ನು ತಿನ್ನುವುದನ್ನು ನೋಡಿದ ಒಬ್ಬರು, “ಅವರ ವೈದ್ಯರು ಅವರನ್ನು ವರ್ಷಗಳಿಂದ ಗಮನಿಸಿಲ್ಲ” ಎಂದು ತಮಾಷೆ ಮಾಡಿದರು. ಬ್ರಿಯಾನ್ ಅವರ ಜಗ್ಲಿಂಗ್ ಮತ್ತು ತಿನ್ನುವ ವೇಗ ಮತ್ತು ಲಯದಿಂದ ಪ್ರಭಾವಿತರಾದ ಕಾಫಿ ಬ್ರಾಂಡ್‍ಯೊಂದು “ಇದು ತುಂಬಾ ಪ್ರಭಾವಶಾಲಿಯಾಗಿದೆ, ಈಗ ದಯವಿಟ್ಟು ಅದನ್ನು ಐಸ್ಡ್ ಕಾಫಿಯೊಂದಿಗೆ ಮಾಡಿ. ನಾವು ಐಸ್ಡ್ ಕಾಫಿಯನ್ನು ಒದಗಿಸುತ್ತೇವೆ.” ಎಂದು ತಿಳಿಸಿದ್ದಾರೆ.

Exit mobile version