Site icon Vistara News

Viral Video: ಹರಿದ ಬಟ್ಟೆ ಧರಿಸಿ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದ ಮಹಿಳೆ; ಅಸಲಿಗೆ ಆಗಿದ್ದೇನು?

Viral Video

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರಿಗೆ ಈ ಪ್ರಕರಣಗಳನ್ನು ಬೇಧಿಸುವುದು ಒಂದು ತಲೆನೋವಾಗಿದೆ. ಈ ಮಧ್ಯೆ ಹರಿದ ಬಟ್ಟೆ ಧರಿಸಿದ ಮಹಿಳೆಯೊಬ್ಬಳು ತನ್ನನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ರಸ್ತೆ ಬದಿಯಲ್ಲಿ ಕುಳಿತಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದು ಅನೇಕ ಜನರ ಗಮನ ಸೆಳೆದ ಹಿನ್ನಲೆಯಲ್ಲಿ ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಈ ವಿಡಿಯೊ ವೈರಲ್ (Viral Video)ಆದ ಒಂದು ದಿನದ ನಂತರ, ಉತ್ತರ ಪ್ರದೇಶ ಪೊಲೀಸರು ಗುರುವಾರ ಆಕೆ ಮಾನಸಿಕ ಅಸ್ವಸ್ಥೆ ಮತ್ತು ಆಕೆಯ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ, ಮಹಿಳೆ ಹಾಡಹಗಲೇ ಲಾಲ್ ಕುವಾನ್ ಪೊಲೀಸ್ ಹೊರಠಾಣೆಯ ವ್ಯಾಪ್ತಿಯಲ್ಲಿ ರಸ್ತೆಯ ಬದಿಯಲ್ಲಿ ಕುಳಿತಿದ್ದಾಳೆ. ಬುಧವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಎಳೆದೊಯ್ದು, ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ದಾರಿಹೋಕನಿಗೆ ಹೇಳುತ್ತಿರುವುದನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಸಖತ್ ವೈರಲ್ ಆಗಿತ್ತು. ಆಗ ಪೊಲೀಸರು ಈ ವೈರಲ್ ವಿಡಿಯೊವನ್ನು ನೋಡಿ ಅದರ ಸತ್ಯಾಂಶವನ್ನು ತಿಳಿಯುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಪೊಲೀಸರಿಗೆ ಮಹಿಳೆಯ ಬಗ್ಗೆ ಮಾಹಿತಿ ದೊರಕಿದೆ. ಆ ಮಹಿಳೆ ಅನೇಕ ಬಾರಿ ಮನೆಯಿಂದ ಓಡಿಹೋಗಿದ್ದಾಳೆ ಎಂದು ಮಹಿಳೆಯ ಸಹೋದರ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

ಮಹಿಳೆಯನ್ನು ಪೊಲೀಸ್ ತಂಡವು ಸ್ಥಳದಿಂದ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಆಕೆಯ ಕುಟುಂಬ ಸದಸ್ಯರನ್ನು ಕರೆಸಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ವೇವ್ ಸಿಟಿ) ಪೂನಂ ಮಿಶ್ರಾ ತಿಳಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳು ಹೀಗೆ ಎಲ್ಲರ ಮೇಲೂ ಉದ್ದೇಶಪೂರ್ವಕವಾಗಿ ಆರೋಪಗಳನ್ನು ಮಾಡುತ್ತಾಳೆ ಎಂದು ಆಕೆಯ ಸಹೋದರ ನಮಗೆ ತಿಳಿಸಿದರು” ಎಂದು ಮಿಶ್ರಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ:ಕಾಶ್ಮೀರದಲ್ಲಿ ಹಿಂದೂ ಬಾಲಕಿ ಮೇಲೆ ಅತ್ಯಾಚಾರ; ಬೃಹತ್‌ ಪ್ರತಿಭಟನೆ

“ವಿಡಿಯೊದಲ್ಲಿ ಆಕೆ ಮಾಡುತ್ತಿರುವ ಆರೋಪಗಳು ಸುಳ್ಳು” ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಈ ರೀತಿ ಹುಚ್ಚಿಯಂತೆ ತಿರುಗಾಡುತ್ತಿದ್ದ ಆಕೆಯನ್ನು ಉತ್ತರಾಖಂಡದ ಹರಿದ್ವಾರ, ರೂರ್ಕಿ ಮತ್ತು ತೆಹ್ರಿ ಮುಂತಾದ ಸ್ಥಳಗಳಿಂದ ರಕ್ಷಿಸಲಾಗಿತ್ತು ಎಂದು ಎಸಿಪಿ ಹೇಳಿದರು.”ಮಹಿಳೆಯನ್ನು ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

Exit mobile version