ಮೊಸಳೆಗಳು ನದಿಯಲ್ಲಿ ಇರುವ ದೊಡ್ಡ ದೊಡ್ಡ ಮೀನುಗಳು, ನದಿಯ ಬಳಿ ಬಂದ ಪ್ರಾಣಿಗಳು ಮಾತ್ರವಲ್ಲ ಮನುಷ್ಯರನ್ನೂ ಬೇಟೆಯಾಡಿ ತಿನ್ನುತ್ತವೆ. ಆದರೆ ಬೇಟೆಯಾಡುವುದು ಕೆಲವೊಮ್ಮೆ ಅಪಾಯಕಾರಿಯಾಗಬಹುದು, ಯಾಕೆಂದರೆ ನದಿಯಲ್ಲಿ ಕೆಲವೊಮ್ಮೆ ಎಲೆಕ್ಟ್ರಿಕ್ ಈಲ್ ಮೀನುಗಳಿರುತ್ತವೆ. ಇವು ತುಂಬಾ ಅಪಾಯಕಾರಿ. ಯಾಕೆಂದರೆ ಇವು ತಮ್ಮನ್ನು ಹಿಡಿಯಲು ಬಂದವರಿಗೆ ಕರೆಂಟ್ ಶಾಕ್ ನೀಡುತ್ತದೆ. ಇದು ಜೀವಕ್ಕೆ ಅಪಾಯಕಾರಿಯಾಗಬಹುದು. ಇದು ಅವುಗಳಿಗೆ ಶತ್ರುಗಳಿಂದಾಗುವ ದಾಳಿಯನ್ನು ತಪ್ಪಿಸಿಕೊಳ್ಳಲು ನೈಸರ್ಗಿಕವಾಗಿ ದೊರೆತ ಶಕ್ತಿಯಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೊಸಳೆ ಮತ್ತು ಎಲೆಕ್ಟ್ರಿಕ್ ಈಲ್ ನಡುವೆ ಹೋರಾಟ ನಡೆಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video)ಆಗುತ್ತಿದ್ದು, ಅನೇಕರ ಗಮನ ಸೆಳೆಯುತ್ತಿದೆ.
ಈ ವೈರಲ್ ವಿಡಿಯೊದಲ್ಲಿ ಮೊಸಳೆ ಕೊಳದ ಅಂಚಿನಲ್ಲಿ ಮಲಗಿತ್ತು. ಅಲ್ಲಿ ಹತ್ತಿರದಲ್ಲಿದ್ದ ಎಲೆಕ್ಟ್ರಿಕ್ ಈಲ್ ಮೊಸಳೆ ಹತ್ತಿರ ಬಂದಿದೆ. ಈಲ್ ದಡದ ಕಡೆಗೆ ಬರುತ್ತಿದ್ದಂತೆ ಮೊಸಳೆ ಈಲ್ ಮೇಲೆ ದಾಳಿ ಮಾಡಿ ಅದನ್ನು ತನ್ನ ದವಡೆಗಳಲ್ಲಿ ಹಿಡಿದುಕೊಂಡಿತು. ಅದರ ನಂತರ ನಡೆದ ದೃಶ್ಯ ತುಂಬಾ ಆಘಾತಕಾರಿಯಾಗಿತ್ತು. ಯಾಕೆಂದರೆ ಎಲೆಕ್ಟ್ರಿಕ್ ಈಲ್‍ಗಳಿಗೆ 860-ವೋಲ್ಟ್ ವರೆಗೆ ಹೆಚ್ಚಿನ-ವೋಲ್ಟೇಜ್ ಕರೆಂಟ್‍ಗಳನ್ನು ತನ್ನ ದೇಹದಲ್ಲಿ ಉತ್ಪತ್ತಿ ಮಾಡುವಂತಹ ಸಾಮರ್ಥ್ಯ ಇದೆ.
#Alligator bites a large #Eel #Eel produces nearly #860V of #electric_shock pic.twitter.com/U83OqNPk0S
— Viral News Vibes (@viralnewsvibes) August 17, 2024
ಹಾಗಾಗಿ ಅವು ಬೇಟೆಯಾಡಲು ಬಂದವರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈ ಶಕ್ತಿಯನ್ನು ಬಳಸುತ್ತವೆ. ಇಂತಹ ಈಲ್ ಅನ್ನು ಮೊಸಳೆ ಹಿಡಿದಾಗ ಈಲ್ ಭಾರಿ ವಿದ್ಯುತ್ ಆಘಾತಗಳನ್ನು ನೀಡಿತು. ಆಘಾತವು ಎಷ್ಟು ಪ್ರಬಲವಾಗಿತ್ತು ಎಂದರೆ ಮೊಸಳೆಯ ಇಡೀ ದೇಹವು ಅನಿಯಂತ್ರಿತವಾಗಿ ನಡುಗಲು ಪ್ರಾರಂಭಿಸಿತು. ವಿಡಿಯೊದಲ್ಲಿ ಮೊಸಳೆ ನೀರಿನಲ್ಲಿ ನೋವಿನಿಂದ ನರಳುತ್ತಿರುವುದನ್ನು ಕಾಣಬಹುದು. ಬಲವಾದ ವಿದ್ಯುತ್ ಪ್ರವಾಹದಿಂದ ಮೊಸಳೆ ಅಲ್ಲೇ ನಿರ್ಜೀವವಾಗಿ ಬಿಟ್ಟಿದೆ.
ಆದರೆ ಇದರಲ್ಲಿ ಈಲ್ ಕೂಡ ಸಾವನಪ್ಪಿದೆ. ಯಾಕೆಂದರೆ ಮೊಸಳೆ ಪ್ರಬಲ ವಿದ್ಯುತ್ ಆಘಾತಕ್ಕೆ ಬಲಿಯಾಯಿತು, ಆ ವೇಳೆ ಮೊಸಳೆಯ ದವಡೆಗಳಲ್ಲಿ ಸಿಕ್ಕಿಬಿದ್ದ ಈಲ್ ಕೂಡ ಸಾವನ್ನಪ್ಪಿತು. ಇಡೀ ಘಟನೆಯನ್ನು ಪ್ರೇಕ್ಷಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ:ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡುತ್ತ ದೇವಾಲಯದೊಳಗೇ ಹಸ್ತಮೈಥುನ!
ಎಲೆಕ್ಟ್ರಿಕ್ ಈಲ್ಸ್ ಒಂದು ಮಾರಣಾಂತಿಕ ಜಾತಿಯ ಮೀನಾಗಿದೆ. ಇವು ಅತ್ಯಂತ ಅಪಾಯಕಾರಿ ಮೀನು ಪ್ರಭೇದಗಳಲ್ಲಿ ಒಂದಾಗಿದೆ, ಇದು 860 ವೋಲ್ಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೀನನ್ನು ಹಿಡಿಯಲು ಹೋದ ಅನೇಕ ಜನರು ಕರೆಂಟ್ ಶಾಕ್‍ಗೆ ಒಳಗಾಗಿ ಸಾವನಪ್ಪಿದ್ದಾರೆ. ಹಲವರು ತಮ್ಮ ದೇಹದ ಶಕ್ತಿಯನ್ನೇ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ.