Site icon Vistara News

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Viral Video


ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳು, ಮಾಲ್‍ಗಳು ಮತ್ತು ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್‌ಗಳು ಸಾಮಾನ್ಯ. ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಈ ಎಸ್ಕಲೇಟರ್‌ಗಳನ್ನು ಬಳಸಲಾಗುತ್ತದೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಆದರೆ ಇದನ್ನು ಎಲ್ಲರೂ ಬಳಸುವುದಿಲ್ಲ, ಯಾಕೆಂದರೆ ಇದನ್ನು ಬಳಸುವ ವಿಧಾನ ಕೆಲವರಿಗೆ ತಿಳಿದಿರುವುದಿಲ್ಲ. ಕೆಲವರಿಗೆ ಬೀಳುತ್ತೇವೆ ಎಂಬ ಭಯ. ಇದೀಗ ಈ ರೀತಿಯ ಎಸ್ಕಲೇಟರ್‌ಗಳನ್ನು ಬಳಸಿ ಮಗುವಿನ ಜೊತೆಗೆ ಮಹಿಳೆಯರಿಬ್ಬರು ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಆತಂಕ ಮೂಡಿಸುತ್ತಿದೆ.

ಈ ವೈರಲ್ ವಿಡಿಯೊದಲ್ಲಿ, ಇಬ್ಬರು ಮಹಿಳೆಯರು ಮಗುವಿನೊಂದಿಗೆ ಎಸ್ಕಲೇಟರ್ ಏರಲು ಪ್ರಯತ್ನಿಸುತ್ತಿದ್ದಾರೆ. ಬಳಿಕ ಇಬ್ಬರೂ ಮಹಿಳೆಯರು ಮಗುವಿನ ಕೈಗಳನ್ನು ಎತ್ತಿ ಹಿಡಿದು ಅದನ್ನು ಎಸ್ಕಲೇಟರ್‌ ಮೇಲೆ ನಿಲ್ಲಿಸಲು ಪ್ರಯತ್ನಿಸಿ ಹಿಡಿದುಕೊಂಡಿದ್ದಾರೆ. ಮಗುವನ್ನು ಮೇಲಕೆತ್ತಿದ ಪರಿಣಾಮ ತಮ್ಮ ಸಮತೋಲನವನ್ನು ಕಳೆದುಕೊಂಡು ಮಗುವಿನೊಂದಿಗೆ ಕೆಳಗೆ ಬಿದ್ದಿದ್ದಾರೆ. ಮೊದಲಿಗೆ ಅವರಿಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ನಂತರ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಓಡಿ ಬಂದಿದ್ದಾನೆ. ಮಗುವಿನೊಂದಿಗೆ ಬಿದ್ದು ಅಪಾಯದಲ್ಲಿದ್ದರೂ ಈ ವೇಳೆ ಅವರಿಬ್ಬರು ನಗುತ್ತಿರುವುದು ಕಂಡು ಬಂದಿದೆ. ಆದರೆ ಈ ವಿಡಿಯೊ ನೋಡಿ ಹಲವರು ಭಯಬೀತರಾಗಿದ್ದಾರೆ. ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಸಣ್ಣ ತಪ್ಪು ಜೀವಕ್ಕೆ ಅಪಾಯವಾಗಬಹುದು.

ಈ ವಿಡಿಯೊ ವೈರಲ್ ಆದ ಕೂಡಲೇ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅನೇಕರು ಮಹಿಳೆಯರ ಈ ನಡೆಯನ್ನು ಪ್ರಶ್ನಿಸಿದ್ದಾರೆ. ಕೆಲವರು ಇದನ್ನು ತೀವ್ರ ಅಜಾಗರೂಕತೆಯ ಕೃತ್ಯ ಎಂದು ಕರೆದಿದ್ದಾರೆ. ಈ ವಿಡಿಯೊವನ್ನು ಆಗಸ್ಟ್ 3 ರಂದು ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ “ಘರ್ ಕೆ ಕಾಲೇಶ್” ಎಂಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ, ಇದು 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಘಟನೆಯ ಬಗ್ಗೆ ನೆಟ್ಟಿಗರು ತಮ್ಮ ಹತಾಶೆ ಮತ್ತು ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

ಈ ಹಿಂದೆ ಮಹಿಳೆಯೊಬ್ಬಳು ಎಸ್ಕಲೇಟರ್ ಮೇಲೆ ಜಿಗಿಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಮಹಿಳೆ ‘ಸ್ಟಂಟ್ ಲವರ್’ ಮಾಲ್‌ನಲ್ಲಿದ್ದಂತೆ ಕಾಣುತ್ತಿತ್ತು, ಆ ಎಸ್ಕಲೇಟರ್‌ನಲ್ಲಿ ಇನ್ನೂ ಕೆಲವು ಜನರಿದ್ದರು. ಇದರಿಂದ ಆ ಮಹಿಳೆ ಮಾಡಿದ ಕೆಲಸ ತುಂಬಾ ಅಪಾಯಕಾರಿ ಎನಿಸಿತು. ಈ ಕ್ಲಿಪ್ ವೈರಲ್ ಆದ ಕೂಡಲೇ, ಜನರು ಆಕೆ ‘ಸ್ಟಂಟ್’ ಮಾಡುತ್ತಿದ್ದಾಳೆ ಎಂದು ಭಾವಿಸಿ ಅದು ಎಷ್ಟು ಅಪಾಯಕಾರಿ ಎಂದು ಟೀಕೆ ಮಾಡಿದ್ದರು. ಆದರೆ ಕೆಲವರು ಆ ಮಹಿಳೆ ಎಸ್ಕಲೇಟರ್ ಒಳಗೆ ಕಾಲಿಡಲು ಹೆದರುತ್ತಿದ್ದಳು, ಆದ್ದರಿಂದ ಜಿಗಿದಿದ್ದಾಳೆ ಎಂದು ಸಮಾಧಾನಪಡಿಸಿದ್ದಾರೆ.

Exit mobile version