Site icon Vistara News

Bengaluru Water News: ಮಳೆಗಾಲ ಶುರುವಾದರೂ ಬೆಂಗಳೂರಿನ ಹಲವೆಡೆ ಟ್ಯಾಂಕರ್ ನೀರೇ ಗತಿ!

Water Problem

ಬೆಂಗಳೂರು: ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ (Bengaluru Water News) ಕಾಡುವುದು ಸಹಜ. ಆದರೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದಲ್ಲೂ ನೀರಿಗಾಗಿ ಜನ ಒದ್ದಾಡುತ್ತಿದ್ದಾರೆ. ಬೆಂಗಳೂರಿನ ಹಲವು ಕಡೆಗಳು ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದರೂ ಕೂಡ ಕೆಲವು ಕಡೆ ಜನರು ನೀರಿಗಾಗಿ ಪರದಾಡುವಂತಾಗಿದೆ. ಜನರಿಗೆ ಕುಡಿಯಲು, ಅಡುಗೆ ಮಾಡಲು ನೀರಿನ ಸಮಸ್ಯೆ (Water Problem ) ಕಾಡುತ್ತಿದೆ. ಹಾಗಾಗಿ ಶುದ್ಧ ನೀರಿಗಾಗಿ ಅವರು ನೀರಿನ ಟ್ಯಾಂಕರ್ ಅನ್ನು ಅವಲಂಬಿಸಿದ್ದಾರೆ. ಈ ಕಾರಣ ನಗರದಲ್ಲಿ ನೀರಿನ ಟ್ಯಾಂಕರ್ ಬೆಲೆ ರಾಜ್ಯ ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತ ದುಬಾರಿಯಾಗಿದೆ ಎಂಬುದಾಗಿ ತಿಳಿದುಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿರುವ ಜನರು ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿದ ಕಾರಣ ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿಸುವಂತಾಗಿದೆ. ಹಾಗಾಗಿ ನೀರಿನ ಟ್ಯಾಂಕರ್ ಬೆಲೆ ಗಗನಕ್ಕೇರಿದೆ.

ಬೆಂಗಳೂರು ಪೂರ್ವದ ವೈಟ್ ಪೀಲ್ಡ್ ಮತ್ತು ಬೆಂಗಳೂರು ದಕ್ಷಿಣ ಭಾಗದ ಕನಕಪುರ ರಸ್ತೆಯಂತಹ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗಿರುವ ಕಾರಣ ಅವರು ನೀರಿನ ಟ್ಯಾಂಕರ್ ಗಳ ಮೇಲೆ ಜನ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಭಾಗದಲ್ಲಿ ಟ್ಯಾಂಕರ್ ನೀರಿನ ದರ ರಾಜ್ಯ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿದೆ ಎಂದು ಜನ ದೂರುತ್ತಿದ್ದಾರೆ.

ಇದನ್ನೂ ಓದಿ: ಒಂಟಿ ಮಹಿಳೆ ಮೇಲೆ ಪುರುಷರ ಗುಂಪಿನಿಂದ ಅಮಾನುಷ ಹಲ್ಲೆ; ಸಹಾಯಕ್ಕೆ ಬದಲು ಮೊಬೈಲ್‌ ಚಿತ್ರೀಕರಣ!

ನೀರಿಗಾಗಿ ಅಲ್ಲಿನ ಜನರು 1200 ಲೀಟರ್ ಟ್ಯಾಂಕರ್‌ಗೆ 1800 ರೂ. ಪಾವತಿಸುತ್ತಿದ್ದಾರೆ. ಇದು ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅಲ್ಲದೇ ಅಲ್ಲಿನ ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ಪ್ರತಿದಿನ ಸುಮಾರು 50 ಟ್ಯಾಂಕರ್‌ಗಳು ಬೇಕಾಗುತ್ತವೆ. ಮಳೆಗಾಲದಲ್ಲೇ ಹೀಗಾದರೆ ಇನ್ನು ಬೇಸಿಗೆಯಲ್ಲಿ ಇವರ ಕತೆ ಏನು ಎಂಬ ಆತಂಕ ಶುರುವಾಗಿದೆ.

Exit mobile version