Site icon Vistara News

Yash-Radhika: ರಾಕಿಂಗ್ ಸ್ಟಾರ್‌ ಯಶ್- ರಾಧಿಕಾ ಕುಟುಂಬದ ಸಂಭ್ರಮದ ರಕ್ಷಾಬಂಧನ; ಇಲ್ಲಿವೆ ಚಿತ್ರಗಳು

Yash-Radhika

ಬೆಂಗಳೂರು: ಅಣ್ಣ- ತಂಗಿಯರ ಬಾಂಧವ್ಯ ಬೆಸುಗೆಯನ್ನು ಹೆಚ್ಚಿಸುವ ಹಬ್ಬವೇ ರಕ್ಷಾ ಬಂಧನ. ಅಣ್ಣನಿಗೆ ತಂಗಿ ರಾಖಿ ಕಟ್ಟುವ ಮೂಲಕ ತನ್ನ ರಕ್ಷಣೆಯ ಹೊಣೆಯನ್ನು ಆತನ ಹೆಗಲಿಗೇರಿಸುತ್ತಾಳೆ. ಇನ್ನು ಈ ಆಚರಣೆಯ ಹಿಂದೆ ಸಾಕಷ್ಟು ಪುರಾಣ ಕಥೆಗಳಿವೆ. ಈ ರಕ್ಷಾಬಂಧನವನ್ನು ಎಲ್ಲರೂ ಖುಷಿಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. ಚಂದನವನದಲ್ಲೂ ಈ ರಕ್ಷಾಬಂಧನದ ಸಂಭ್ರಮ ಜೋರಾಗಿಯೇ ಇತ್ತು. ಯಶ್-ರಾಧಿಕಾ(Yash-Radhika) ಮಕ್ಕಳಾದ ಐರಾ ಹಾಗೂ ಯಥರ್ವ್‌ ರಕ್ಷಾಬಂಧನವನ್ನು ಬಹಳ ಖುಷಿಯಿಂದ ಆಚರಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಎಂದೇ ಹೆಸರು ಗಳಿಸಿದ ಯಶ್-ರಾಧಿಕಾ ಅವರ ಮುದ್ದಾದ ಮಕ್ಕಳ ರಕ್ಷಾಬಂಧನದ ಫೋಟೊ ಈಗ ಎಲ್ಲೆಡೆ ವೈರಲ್‌ ಆಗಿದೆ.

ವರಮಹಾಲಕ್ಷ್ಮಿ, ದೀಪಾವಳಿ, ರಕ್ಷಾಬಂಧನ ಹೀಗೆ ಎಲ್ಲಾ ಹಬ್ಬದ ಆಚರಣೆಯನ್ನು ರಾಧಿಕಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಹಂಚಿಕೊಂಡು ಖುಷಿಪಡುತ್ತಿರುತ್ತಾರೆ.

ಈಗ ಮಕ್ಕಳಾದ ಐರಾ ಹಾಗೂ ಯಥರ್ವ್‌ ಅವರು ರಕ್ಷಾಬಂದನವನ್ನು ಆಚರಿಸಿದ ಫೋಟೊವನ್ನು ಶೇರ್‌ ಮಾಡಿಕೊಂಡು ಖುಷಿಪಟ್ಟಿದ್ದಾರೆ.

ಐರಾ ಹಾಗೂ ಯಥರ್ವ್‌ ರಕ್ಷಾಬಂಧನವನ್ನು ಬಹಳ ಸರಳವಾಗಿ ಆಚರಿಸಿದ್ದಾರೆ.ಅಕ್ಕ-ತಮ್ಮ ಇಬ್ಬರೂ ಮ್ಯಾಚಿಂಗ್‌ ಮ್ಯಾಚಿಂಗ್‌ ಉಡುಪು ತೊಟ್ಟಿದ್ದರು.

ಇನ್ನು ಐರಾ ತನ್ನ ತಮ್ಮನಿಗೆ ರಾಖಿ ಕಟ್ಟಿ ಹಣೆಗೆ ಕುಂಕುಮ ಹಚ್ಚಿ ಸಿಹಿ ತಿನ್ನಿಸಿ ರಾಖಿ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾಳೆ. ಈವರಿಬ್ಬರ ಫೋಟೊವನ್ನು ರಾಧಿಕಾ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಕ್ಷಾ ಬಂಧನಕ್ಕೆ ಸಂಬಂಧಿಸಿದ ಒಂದು ಜನಪ್ರಿಯ ಕಥೆ ಮಹಾಭಾರತದ ಕೃಷ್ಣ-ದ್ರೌಪದಿಯಿಂದ ಬಂದಿದೆ ಎನ್ನಲಾಗಿದೆ. ಶ್ರೀಕೃಷ್ಣನು ಕಬ್ಬಿನ ತುಂಡನ್ನು ಕತ್ತರಿಸುವಾಗ ಅವನ ಬೆರಳಿಗೆ ಗಾಯವಾಯಿತು. ಆಗ ಪಾಂಡವರ ಪತ್ನಿ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಆತನನ್ನು ರಕ್ಷಿಸಲು ಬೆರಳಿಗೆ ಸುತ್ತಿದಳು. ಆಗ ಕೃಷ್ಣನು ಅವಳಲ್ಲಿ ಸಹೋದರ ಪ್ರೇಮವನ್ನು ಕಂಡು ಅಗತ್ಯದ ಸಮಯದಲ್ಲಿ ಅವಳನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದನು. ಅದರಂತೆ ರಕ್ಷಾ ಬಂಧನವನ್ನು ಅಣ್ಣ-ತಂಗಿ ಹಬ್ಬವೆಂದು ರಾಖಿ ಕಟ್ಟುವ ಮೂಲಕ ಆಚರಿಸಲಾಗುತ್ತದೆ.

ಇದನ್ನೂ ಓದಿ: ಏಕಾಏಕಿ ಸುರಿದ ಮಳೆ; ಭಕ್ತರಿಗೆ ಮಠದ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟ ಮಂತ್ರಾಲಯ ಶ್ರೀಗಳು

ಹಾಗೇ ಇನ್ನೊಂದು ಇತಿಹಾಸದ ಕಥೆಯಲ್ಲಿ ಚಿತ್ತೋರಿನ ರಾಣಿ ಕರ್ಣಾವತಿ ಆಕ್ರಮಣಕಾರರ ವಿರುದ್ಧ ಸಹಾಯವನ್ನು ಕೋರಿ ಚಕ್ರವರ್ತಿ ಹುಮಾಯೂನ್‌ಗೆ ರಾಖಿಯನ್ನು ಕಳುಹಿಸಿದಳು. ಆಗ ಹುಮಾಯೂನ್ ತಕ್ಷಣವೇ ಅವಳ ಸಹಾಯಕ್ಕೆ ಬಂದನು ಎನ್ನಲಾಗಿದೆ. ರಾಖಿ ಮೂಲಕ ಅವರ ನಡುವೆ ಸಹೋದರ ಸಹೋದರಿಯ ಸಂಬಂಧ ಬೆಳೆಯಿತು ಎನ್ನಲಾಗಿದೆ.

Exit mobile version