Site icon Vistara News

Youngest Billionaire: 19 ವರ್ಷದ ವಿದ್ಯಾರ್ಥಿನಿ ವಿಶ್ವದ ಕಿರಿಯ ಬಿಲಿಯನೇರ್ ಆಗಿದ್ದು ಹೇಗೆ? ಇಲ್ಲಿದೆ ಮನಿ ಸೀಕ್ರೆಟ್​​

Youngest Billionaire:

ಬ್ರೆಜಿಲ್: ವಿಶ್ವದ ಬಿಲಿಯನೇರ್ ಗಳ ಪಟ್ಟಿಯಲ್ಲಿ ಬ್ರೆಜಿಲ್ ನ (Brazil) 19 ವರ್ಷದ ವಿದ್ಯಾರ್ಥಿಯೊಬ್ಬಳು ಸೇರ್ಪಡೆಯಾಗಿದ್ದಾರೆಲ. ಆಕೆ ವಿಶ್ವದ (world) ಕಿರಿಯ ಬಿಲಿಯನೇರ್ (Youngest Billionaire) ಆಗಿ ಗುರುತಿಸಿಕೊಂಡಿದ್ದಾಳೆ. 2024 ರ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ (Forbes Billionaires List) ಬ್ರೆಜಿಲಿಯನ್ ವಿದ್ಯಾರ್ಥಿನಿ ಲಿವಿಯಾ ವೋಗ್ಟ್ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎಂಬ ಬಿರುದನ್ನು ಪಡೆದಿದ್ದಾರೆ.

ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಯುವಕರು ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, 25 ಕಿರಿಯ ಬಿಲಿಯನೇರ್‌ಗಳೆಲ್ಲರೂ 33 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇವರ ಒಟ್ಟು ಸಂಪತ್ತು 110 ಶತಕೋಟಿ ಡಾಲರ್ ಎಂದು ಫೋರ್ಬ್ಸ್ ಪಟ್ಟಿ ತಿಳಿಸಿದೆ.

ಲಿವಿಯಾ ವೋಗ್ಟ್ ಯಾರು?

ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಆಗಿರುವ ಲಿವಿಯಾ ವೋಗ್ಟ್ ತನಗಿಂತ ಕೇವಲ ಎರಡು ತಿಂಗಳು ದೊಡ್ಡವರಾದ ಎಸ್ಸಿಲೋರ್ ಲುಕ್ಸೊಟಿಕಾ ಅವರ ಉತ್ತರಾಧಿಕಾರಿ ಕ್ಲೆಮೆಂಟ್ ಡೆಲ್ ವೆಚಿಯೊ ಅವರನ್ನು ಮೀರಿಸಿದ್ದಾರೆ.

ಲ್ಯಾಟಿನ್ ಅಮೆರಿಕದ ಎಲೆಕ್ಟ್ರಿಕಲ್ ಮೋಟಾರ್‌ಗಳ ಅತಿ ದೊಡ್ಡ ತಯಾರಕರಾದ WEG ಯ ಅತಿದೊಡ್ಡ ವೈಯಕ್ತಿಕ ಷೇರುದಾರರಲ್ಲಿ ಒಬ್ಬರಾಗಿದ್ದಾರೆ ಲಿವಿಯಾ ವೋಗ್ಟ್ . ಈ ಕಂಪೆನಿಯು ಅವರ ಅಜ್ಜ ವರ್ನರ್ ರಿಕಾರ್ಡೊ ವೋಗ್ಟ್ ಅವರು ಬಿಲಿಯನೇರ್‌ಗಳಾಗಿದ್ದ ಎಗ್ಗೊನ್ ಜೊವೊ ಡಾ ಸಿಲ್ವಾ ಮತ್ತು ಗೆರಾಲ್ಡೊ ವೆರ್ನಿಂಗ್‌ಹಾಸ್ ಅವರೊಂದಿಗೆ ಜೊತೆಯಾಗಿ ಸ್ಥಾಪಿಸಿದ್ದರು.

ಇದನ್ನೂ ಓದಿ: Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3

ಪ್ರಸ್ತುತ ಬ್ರೆಜಿಲ್‌ನಲ್ಲಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಲಿವಿಯಾ ವೋಗ್ಟ್ WEG ನಲ್ಲಿ ಯಾವುದೇ ಬೋರ್ಡ್ ಅಥವಾ ಕಾರ್ಯನಿರ್ವಾಹಕ ಸ್ಥಾನವನ್ನು ಹೊಂದಿಲ್ಲ.

ಲಿವಿಯಾ ವೋಗ್ಟ್ 1.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಆಕೆಯ ಸಹೋದರಿ ಡೋರಾ ವೋಗ್ಟ್ ಡಿ ಅಸ್ಸಿಸ್ 2024 ರ ಕಿರಿಯ ಬಿಲಿಯನೇರ್ ಪಟ್ಟಿಯಲ್ಲಿರುವ ಹೊಸದಾಗಿ ಸೇರ್ಪಡೆಯಾದ ಏಳು ಮಂದಿಯಲ್ಲಿ ಒಬ್ಬರಾಗಿದ್ದಾರೆ. 26 ವರ್ಷದ ಡೋರಾ 2020 ರಲ್ಲಿ ವಾಸ್ತುಶಿಲ್ಪ ಪದವಿಯನ್ನು ಗಳಿಸಿದ್ದಾರೆ.

ಲಿವಿಯಾ ವೋಗ್ಟ್ ನ WEG 10 ದೇಶಗಳಲ್ಲಿ ಕಾರ್ಖಾನೆಗಳನ್ನು ಹೊಂದಿದ್ದು, ಬಹುರಾಷ್ಟ್ರೀಯ ನಿಗಮವಾಗಿದೆ. 2022 ರಲ್ಲಿ WEG ಅಂದಾಜು $ಲಿವಿಯಾ ವೋಗ್ಟ್ 6 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿತ್ತು.

ಹಲವಾರು ಯುವಕರು ಇತ್ತೀಚೆಗೆ ಬಿಲಿಯನೇರ್ ಶ್ರೇಣಿಗೆ ಸೇರಿದ್ದಾರೆ. 25 ಮತ್ತು 27 ವರ್ಷ ವಯಸ್ಸಿನ ಐರ್ಲೆಂಡ್‌ನ ಮಿಸ್ತ್ರಿ ಸಹೋದರರು 2022 ರಲ್ಲಿ ತಮ್ಮ ತಂದೆಯ ಮರಣದ ಬಳಿಕ ಟಾಟಾ ಸನ್ಸ್, ಮುಂಬಯಿ ಮೂಲದ ಸಂಘಟಿತ ಸಂಸ್ಥೆಯಿಂದ ಗಣನೀಯ ಪ್ರಮಾಣದ ಸಂಪತ್ತನ್ನು ಪಡೆದರು. ಇಬ್ಬರೂ ತಲಾ 4.9 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಭಾರತದ ಕಿರಿಯ ಬಿಲಿಯನೇರ್ ಗಳು

ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ಬೆಂಗಳೂರು ಸಹೋದರರು ಸೇರಿ ನಾಲ್ಕು ಮಂದಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಾಗಿ ಗುರುತಿಸಿಕೊಂಡಿದ್ದಾರೆ.

ಜೆರೋಧಾ ಸಂಸ್ಥಾಪಕರಾದ ನಿತಿನ್ ಮತ್ತು ನಿಖಿಲ್ ಕಾಮತ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥಾಪಕರಾದ ಸಚಿನ್ ಮತ್ತು ಬಿನ್ನಿ ಬನ್ಸಾಲ್ ಜೋಡಿ 45ರ ವಯಸ್ಸಿನೊಳಗಿರುವ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಾಗಿದ್ದಾರೆ.

ನಿಖಿಲ್ ಕಾಮತ್ 37ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿದ್ದು, ಇವರ ಸಂಪತ್ತು 3.1 ಬಿಲಿಯನ್ ಡಾಲರ್. ಇವರ ಹಿರಿಯ ಸಹೋದರ ನಿತಿನ್ ಕಾಮತ್ ಅವರ ವಯಸ್ಸು 44. ಇವರ ಸಂಪತ್ತು 4.8 ಬಿಲಿಯನ್ ಡಾಲರ್. ಕಾಮತ್ ಸಹೋದರರ ನಿವ್ವಳ ಮೌಲ್ಯ ಕಳೆದ ಒಂದು ವರ್ಷದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

2007ರಲ್ಲಿ ಸಚಿನ್ ಬನ್ಸಾಲ್ ಅವರೊಂದಿಗೆ ಮೊದಲು ಆನ್‌ಲೈನ್ ಪುಸ್ತಕ ಮಾರಾಟಗಾರರಾಗಿ ಫ್ಲಿಪ್‌ಕಾರ್ಟ್ ಅನ್ನು ಸ್ಥಾಪಿಸಿದ ಬಿನ್ನಿ ಬನ್ಸಾಲ್ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್. ಕಳೆದ ಒಂದು ವರ್ಷದಲ್ಲಿ ಬಿನ್ನಿ ಬನ್ಸಾಲ್ ಅವರ ಸಂಪತ್ತು ಮೌಲ್ಯ ಹೆಚ್ಚಾಗಿಲ್ಲ. ಸಚಿನ್ ಬನ್ಸಾಲ್ ಅವರ ಸಂಪತ್ತಿನಲ್ಲಿ ಕುಸಿತ ಕಂಡಿದೆ. ಆದರೂ ಅವರಿಬ್ಬರೂ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಾಗಿ ಮುಂದುವರಿದಿದ್ದಾರೆ.

Exit mobile version