Site icon Vistara News

Actor Pranitha | ಬಹುಭಾಷಾ ನಟಿಯ ಭೀಮನ ಅಮವಾಸ್ಯೆ ಆಚರಣೆಗೆ ಹಿತೈಷಿಗಳ ಶಹಬ್ಬಾಸ್‌

actor pranitha

ಬೆಂಗಳೂರು : ದೇಶ, ಧರ್ಮ ಹಾಗೂ ಸಂಪ್ರದಾಯಗಳ ಪಾಲನೆಯ ವಿಚಾರದಲ್ಲಿ ಬಹುಭಾಷಾ ನಟಿ ಪ್ರಣಿತಾ ಸುಭಾಷ್‌ ಅವರು ಅನುಕರಣೀಯರು. ಸಿನಿಮಾ ಹಾಗೂ ಗ್ಲಾಮರ್‌ ಲೋಕದ ನಂಟು ಹೊಂದಿರುವ ಹೊರತಾಗಿಯೂ ಅವರು ನಮ್ಮತನವನ್ನು ಕಾಪಾಡಿಕೊಳ್ಳುವ ವಿಚಾರಕ್ಕೆ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅದರಲ್ಲೂ ಹಿಂದೂ ಸಂಪ್ರದಾಯಗಳು ಹಾಗೂ ಹಬ್ಬಗಳನ್ನು ತಪ್ಪದೇ ಆಚರಿಸುತ್ತಾರೆ. ಅಂತೆಯೇ ಅವರು ಇತ್ತೀಚೆಗೆ ನಡೆದ ಭೀಮನ ಅಮವಾಸ್ಯೆ ವೇಳೆ ಪತಿಯ ಪಾದಪೂಜೆ ಮಾಡುವ ಮೂಲಕ ಹಿತೈಷಿಗಳ ಅಭಿಮಾನಕ್ಕೆ ಪಾತ್ರಾಗಿದ್ದಾರೆ.

ತಾವು ಪಾದಪೂಜೆ ಮಾಡುತ್ತಿರುವ ಚಿತ್ರವನ್ನು ಪ್ರಣಿತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ 2,54,790 ಲೈಕ್‌ಗಳು ಬಂದಿವೆ. ಅಂತೆಯೇ ೧೭೩೭ ಮಂದಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

“ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿದಿರುವ ನಿಮಗೆ ಅಭಿನಂದನೆ” ಎಂದು ಅಮೋಘ್‌ ಮಹಿ ಎಂಬುವರ ಬರೆದಿದ್ದರೆ, ಆಕಾಶ್‌ ಎಂಬುವರು ನಾನು ಹಿಂದೂ ಎಂಬುದನ್ನು ಹೆಮ್ಮೆಯಿಂದ ಹೇಳಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ಪತಿಯ ಆಯುಷ್ಯ ಹೆಚ್ಚಾಗಲಿ ಎಂಬುದಾಗಿ ಹಾರೈಸಿ ಭೀಮನ ಅಮವಾಸ್ಯೆ ದಿನ ಗಂಡನ ಪಾದ ಪೂಜೆ ಮಾಡುವುದು ಹಿಂದೂ ಧರ್ಮದ ಸಂಪ್ರದಾಯವಾಗಿದೆ. ದೇಶದ ವಿವಿಧೆಡೆ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.

Exit mobile version