ಮುಂಬಯಿ : ಬಾಲಿವುಡ್ ತಾರೆ ಬಿಪಾಶಾ ಬಸು (bipasha basu) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾವು ಪ್ರೆಗ್ನೆಂಟ್ ಅಗಿರುವ ವಿಷಯವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಪ್ರಕಟಿಸಿದ್ದಾರೆ. ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಜತೆ ಸುಂದರವಾದ ಫೊಟೋ ತೆಗೆಸಿಕೊಂಡು ಅದನ್ನು ಪೋಸ್ಟ್ ಮಾಡಿದ್ದಾರೆ. ಬಿಪಾಶಾ ಮಗುವಿನ ನಿರಿಕ್ಷೆಯಲ್ಲಿರುವ ಸುದ್ದಿಯನ್ನು ಅಪ್ಪಟ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವು ಸಂಪ್ರದಾಯಸ್ಥರು ಬೇಬಿ ಬಂಪ್ನ ಚಿತ್ರ ಹಾಕುವುದು ಮಾನಗೆಟ್ಟ ಕೆಲಸ ಎಂದು ನಿಂದಿಸಿದ್ದಾರೆ.
43 ವರ್ಷದ ನಟಿ ಬಿಪಾಶಾ ಇನ್ಸ್ಟಾಗ್ರಾಮ್ನಲ್ಲಿ ಎರಡು ಚಿತ್ರಗಳನ್ನು ಪ್ರಕಟಿಸಿದ್ದಾರೆ. ಮೊದಲ ಚಿತ್ರದಲ್ಲಿ ಪತಿ ಗ್ರೋವರ್ ಹಾಗೂ ಬಿಪಾಶಾ ಹೊಟ್ಟೆಯನ್ನು ಹಿಡಿದುಕೊಂಡಿರುವ ಚಿತ್ರವನ್ನ ಹಾಕಿದ್ದರೆ, ಎರಡನೇ ಚಿತ್ರದಲ್ಲಿ ಗ್ರೋವರ್ ಮಂಡಿಯೂರಿ ಕುಳಿತು ಬಿಪಾಶಾ ಅವರ ಹೊಟ್ಟೆಗೆ ಮುತ್ತು ನೀಡುವ ಚಿತ್ರವನ್ನು ಹಾಕಿದ್ದಾರೆ.
“ನಮ್ಮಿಬ್ಬರ ಜೀವನದಲ್ಲಿ ಹೊಸ ಸಮಯ ಹಾಗೂ ಹೊಸ ಬೆಳಕು ಮೂಡಿದೆ. ಈಗ ನಾವು ಹಿಂದಿಗಿಂತಲೂ ಪರಿಪೂರ್ಣರಾಗಿದ್ದೇವೆ. ನಾವಿಬ್ಬರು ಪರಸ್ಪರ ಭೇಟಿಯಾದೆವು, ಇಬ್ಬರಾದೆವು. ಇಬ್ಬರೂ ಪ್ರೀತಿಸಿದೆವು. ಇಬ್ಬರಾಗಿದ್ದ ನಾವೀಗ ಮೂವರಾದೆವು. ನಮ್ಮ ಪ್ರೀತಿಯ ಮೂಲಕ ಸೃಷ್ಟಿಯಾದ ಕೂಸು ಇನ್ನೇನು ನಮ್ಮ ಮಡಿಲು ಸೇರಬಹುದು,” ಎಂದು ಬಿಪಾಶಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಅವರಿಗೆ ಸಿನಿಮಾ ಕ್ಷೇತ್ರದ ಸಾಕಷ್ಟು ಮಂದಿ ಸುಂದರ ಜೋಡಿಗೆ ಶುಭಾಶಯ ಕೋರಿದ್ದಾರೆ.
೨೦೧೬ರಲ್ಲಿ ಕರಣ್ ಗ್ರೋವರ್ ಹಾಗೂ ಬಿಪಾಶಾ ಬಸು ಪ್ರೀತಿಸಿ ವಿವಾಹವಾಗಿದ್ದರು. ೨೦೧೮ರಲ್ಲೊಮ್ಮೆ ಬಿಪಾಶಾ ಬಸು ಪ್ರೆಗ್ನೆಂಟ್ ಎಂಬ ಸುದ್ದಿ ಹರಡಿತ್ತು. ಅವರು ಬ್ಯಾಗೊಂದನ್ನು ಹೊಟ್ಟೆಯ ಮೇಲೆ ಹಿಡಿದುಕೊಂಡು ಹೋಗುತ್ತಿರುವುದನ್ದ್ದನ ಗಮನಿಸಿದ್ದ ಕೆಲವರು ಪ್ರೆಗ್ನೆಂಟ್ ಎಂದು ಭಾವಿಸಿದ್ದರು. ಆದರೆ, ಅದು ಸುಳ್ಳು ಎಂಬುದು ಆ ಬಳಿಕ ಗೊತ್ತಾಗಿತ್ತು.
ನೆಟ್ಟಿಗರ ಬೈಗುಳ
ಬಿಪಾಶಾ ಅವರು ಫೋಟೊ ಹಂಚಿಕೊಂಡಿರುವ ಬೆನ್ನಲ್ಲೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವರು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ತಾಯ್ತನದ ಸಂಭ್ರಮವನ್ನು ಹಂಚಿಕೊಳ್ಳುವ ರೀತಿಯ ಇದಲ್ಲ ಎಂದು ಕೆಲವರು ಹೇಳಿದ್ದರೆ, ಇಂಥ ಫೋಟೋಶೂಟ್ಗಳು ಭಾರತೀಯ ಸಂಸ್ಕೃತಿಗೆ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು ಈ ಮಾದರಿಯ ಕಾನ್ಸೆಪ್ಟ್ ಕಂಡು ಹಿಡಿದವರು ಮೂರ್ಖರು ಎಂದು ಹೇಳಿದ್ದಾರೆ.
ಇದನ್ನೂ ಓದಿ | No Entry Mein Entry: ಸಲ್ಲು ನೋ ಎಂಟ್ರಿಗೆ ಎಂಟ್ರಿ ಕೊಡಲಿದ್ದಾರಾ ಸಮಂತಾ, ರಶ್ಮಿಕಾ?